ಶ್ರೀ ಮಠದ ಪ್ರಗತಿಗಾಗಿ ಎಸ್.ಕೆ. ಬಸವರಾಜನ್ ಆಡಳಿತಾಧಿಕಾರಿಯಾಗಿ ನೇಮಕ : ಡಾ. ಶಿವಮೂರ್ತಿ ಮುರುಘಾ ಶರಣರು

1 Min Read

ಚಿತ್ರದುರ್ಗ, (ಮಾ.08) : ಮಠವನ್ನು ಪ್ರಗತಿ ಹಾದಿಯಲ್ಲಿ ನಡೆಸಬೇಕೆಂದು ತೀರ್ಮಾನಿಸಿ, ಪ್ರಗತಿಯ ತೀವ್ರತೆಯನ್ನು ಹೆಚ್ಚಿಸುವ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಸ್.ಕೆ. ಬಸವರಾಜನ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ಹಾಗು ವಿದ್ಯಾಪೀಠಕ್ಕೆ ಗೌ| ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾರಿತ್ರಿಕ ಹಿನ್ನೆಲೆ ಹೊಂದಿರುವ ಮುರುಘಾಮಠದಲ್ಲಿ ನನ್ನನ್ನು ಸೇರಿದಂತೆ 20 ಮಠಾಧೀಶರು ಆಗಿಹೋಗಿದ್ದಾರೆ. ಉಜ್ಜ್ವಲ ಇತಿಹಾಸ ಹೊಂದಿರುವ ಮಠವನ್ನು 21ನೇ ಶತಮಾನದಲ್ಲಿ ಮುಂದುವರಿಸುತ್ತ ಹೋಗುತ್ತಿದ್ದೇವೆ. 14-15 ವರ್ಷಗಳಿಂದ ಶ್ರೀಮಠವನ್ನು ಕಟ್ಟಿದ್ದೇವೆ. ಅದರ ಕೀರ್ತಿ ಎಲ್ಲೆಡೆ ಪಸರಿಸುವಂತೆ ಮಾಡಿದ್ದೇವೆ.

ನಾವು ಎಲ್ಲ ಆಡಳಿತವನ್ನು ಕೇಂದ್ರಿಕರಿಸಿಕೊಂಡಿದ್ದೆವು. ನಾವೇ ನಿರ್ವಹಿಸುತ್ತಿದ್ದೆವು. ಈ ಮಧ್ಯೆ ಸಂದರ್ಭಕ್ಕನುಗುಣವಾಗಿ ಕಾನೂನು ಸಮರ ನಡೆಸಿದ್ದೆವು. ಇದು ಪ್ರಗತಿಗೆ ಅಡ್ಡಿ ಮಾಡಿದ್ದವು. ರಾಗ, ದ್ವೇಷ ಒಳ್ಳೆಯದಲ್ಲ. ಪರಸ್ಪರ ಪ್ರೀತಿಯಿಂದ ಸಾಧನೆ ಮಾಡಬೇಕಿದೆ. ಇದನ್ನು ಗಮನಿಸಿ ಶಾಶ್ವತವಾದ ಇತಿಶ್ರೀ ಹಾಡಬೇಕೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಎಸ್.ಕೆ. ಬಸವರಾಜನ್ ಮಾತನಾಡಿ, ನನ್ನ ಸೇವೆಯನ್ನು ಗುರುತಿಸಿ ಶ್ರೀಗಳು ಎರಡನೇ ಬಾರಿ ಅವಕಾಶ ಮಾಡಿಕೊಟ್ಟಿದ್ದಾರೆ. ರಾಜಕೀಯಕ್ಕೆ ಹೋಗದೆ ಅವರ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *