Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ  ಎಸ್.ಜೆ.ಎಂ. ಕ್ವೀನ್ಸ್ ರೆಸಾರ್ಟ್ ಕಾರ್ಯಕ್ರಮ

Facebook
Twitter
Telegram
WhatsApp

ಚಿತ್ರದುರ್ಗ, (ಜು.19) :  ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಈವೆಂಟ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ ವತಿಯಿಂದ ಎಸ್.ಜೆ.ಎಂ. ಕ್ವೀನ್ಸ್ ರೆಸಾರ್ಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಸಿಲ್ವರ್ ಸರ್ವೀಸ್, ಸೌತ್‍ಇಂಡಿಯನ್ ಫುಡ್ ಸರ್ವೀಸ್, ಅಮೆರಿಕನ್ ಸರ್ವೀಸ್, ಬಫೆಟ್ ಸರ್ವೀಸ್ ಸಿಸ್ಟಂ, ಟ್ರೇ ಸರ್ವೀಸ್ ಮತ್ತು ಫ್ರೆಂಚ್ ಸರ್ವೀಸ್ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಚಾಟ್ಸ್, ಬರ್ಗರ್, ಜ್ಯೂಸ್, ಚಾಕಲೇಟ್, ಹೋಳಿಗೆ-ಸೀಕರಣೆ, ಕೋಸಂಬರಿ, ಪಲ್ಯ, ಚಪಾತಿ, ಬದನೆಕಾಯಿ ಹೆಣಗಾಯಿ, ಪಲಾವ್, ರೈಸ್‍ಬಾತ್ ಹೀಗೆ ನಾನಾ ವಿಧದ ಆಹಾರಖಾದ್ಯಗಳನ್ನು ತಯಾರಿಸಿ ತಂದು ಪ್ರತಿ ರೆಸಾರ್ಟ್‍ನವರು ಒಂದೊಂದು ರೀತಿಯಲ್ಲಿ ಅತಿಥಿಗಳನ್ನು ಸ್ವಾಗತಿಸಿ ಆತಿಥ್ಯ ನೀಡಿದರು. ನಂತರ ಇವರ ಆತಿಥ್ಯವನ್ನು ಸ್ವೀಕರಿಸಿ ಕಾಲೇಜಿನ ಮುಖ್ಯಸ್ಥರು ಬಹುಮಾನ ವಿತರಿಸಿದರು.

ಬಫೆಟ್ ತಂಡಕ್ಕೆ (ಡಿ. ನಾಗಮಣಿ, ಭೂಮಿಕ ಡಿ., ರಶ್ಮಿ ಬಿ.ಟಿ.)-ಮೊದಲ ಬಹುಮಾನ, ಸೌತ್ ಇಂಡಿಯನ್ ಫುಡ್ ಸಿಸ್ಟಂ ತಂಡಕ್ಕೆ (ಅರ್ಚನ, ರಕ್ಷಿತ ಮತ್ತು ಪಲ್ಲವಿ ಡಿ.ಸಿ.)-ದ್ವಿತೀಯ ಬಹುಮಾನ, ಸಿಲ್ವರ್ ಸರ್ವೀಸ್ ತಂಡಕ್ಕೆ (ಸೈಯದಾಫಾತಿಮಾ, ಇಸ್ರಾರ್‍ಬಾನು ಮತ್ತು ಸುಪ್ರಿತಾ)-ಮೂರನೆಯ ಬಹುಮಾನ ಪಡೆದುಕೊಂಡವು. ಉಳಿದಂತೆ ಮೂರು ತಂಡಗಳಿಗೆ ಸಮಾಧಾನಕರ ಬಹುಮಾನ ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಐಕ್ಯೂಎಸಿ ಕೋಆರ್ಡಿನೇಟರ್ ಎನ್. ಚಲುವರಾಜು, ಉಪನ್ಯಾಸಕರಾದ ಕುಮಾರ್, ರಮ್ಯ, ಶ್ವೇತ, ಉಷಾ, ವಸಂತಕುಮಾರಿ, ಗಜೇಂದ್ರ ಮಿಸ್‍ಬಾ ಮೊದಲಾದವರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ, ಈ ರಾಶಿಯವರಿಗೆ ವಂಶೋದ್ಧಾರ ಗಂಡು ಸಂತಾನದ ಚಿಂತೆ ಭಾನುವಾರ-ರಾಶಿ ಭವಿಷ್ಯ ಮೇ-12,2024 ಶಂಕರಾಚಾರ್ಯ ಜಯಂತಿ, ತಾಯಿ ದಿನ ಸೂರ್ಯೋದಯ: 05:49, ಸೂರ್ಯಾಸ್ತ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

error: Content is protected !!