ಸುದ್ದಿಒನ್, ಹಿರಿಯೂರು, ಜೂನ್. 05 : ಕಾಡುಗೊಲ್ಲ ಸಮುದಾಯ ಅಭಿವೃದ್ಧಿಗಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಕರೆ ನೀಡಿದರು.
ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಜೆಜಿ ಹಳ್ಳಿ ಜಿಪಂ ವ್ಯಾಪ್ತಿಯ ಮುಖಂಡರೊಂದಿಗೆ ಚಿಂತನೆ ಮಂಥನ ಸಭೆ ನಡೆಸಿ ಮಾತನಾಡಿದರು.
ಸಮಾಜದ ಏಳಿಗೆಗೆ ಸಮುದಾಯದ ಯುವಕರ ಪಾತ್ರ ಅತ್ಯವಶ್ಯಕವಾಗಿದೆ. ನಾವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬಲಗೊಳ್ಳಬೇಕು. ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಅಸ್ತಿತ್ವ ಕಂಡುಕೊಂಡಾಗ ಮಾತ್ರ ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ. ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿದ್ದೆವೆ. ಜನಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ನಾವು ರಾಜಕೀಯ ಅಸ್ತಿತ್ವವ ಸಾಧಿಸಬೇಕು. ಕೇವಲ ನಾವು ಮತ ಹಾಕುವುದಕ್ಕೆ ಅಷ್ಟೇ ಸೀಮಿತವಾಗಬಾರದು ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಹಾಗೂ ಯುವಕರು ಎಚ್ಚೆರಗೊಳ್ಳಬೇಕು ಎಂದರಲ್ಲದೆ ಸಭೆಯಲ್ಲಿ ಸಮುದಾಯದ ವಿಚಾರವಾಗಿ ಕೆಲವು ಮಹತ್ವದ ತಿರ್ಮಾನಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಚಿಕ್ಕಣ್ಣ ಸೇರಿದಂತೆ ಹೋಬಳಿಯ ಗ್ರಾಮಗಳ ಮುಖಂಡರು, ಯುವಕರು ಸೇರಿದಂತೆ ಮತ್ತಿತರರು ಹಾಜರಿದ್ದರು.











