ಹನುಮಾನ್ ಅವತಾರದಲ್ಲಿ ರಿಷಭ್ ಶೆಟ್ಟಿ : ಹೊಸ ಅವತಾರ ನೋಡಿ ಕರ್ನಾಟಕದ ಫ್ಯಾನ್ಸ್ ಶಾಕ್

1 Min Read

ಕಾಂತಾರಾ ಸಿನಿಮಾ ಮಾಡಿ ಇಡೀ ದೇಶದಾದ್ಯಂತ ಹೆಸರುವಾಸಿಯಾದ ರಿಷಬ್ ಶೆಟ್ಟಿ ಹೊಸ ಅವತಾರವೆತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಈಗ ಜೈ ಹನುಮಾನ್ ಆಗಿ ಬರ್ತಿದ್ದಾರೆ. ನಟ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಿರ್ದೇಶಕ ಪ್ರಶಾಂತ್ ವರ್ಮಾ ಹನುಮಾನ್ ಸಿನಿಮಾ ಮಾಡಿ‌ ಗೆದ್ದಿದ್ದರು. ಈಗ ಸೀಕ್ವೇಲ್ ಮಾಡಲು ಮುಂದಾಗಿದ್ದು ಅದಕ್ಕೆ ಜೈ ಹನುಮಾನ್ ಎಂದು ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ರಿಷವ್ ಶೆಟ್ಟಿ ಅಭಿನಯಿಸುತ್ತಿದ್ದಾರೆಂದು ಮಾತಿತ್ತು. ಇದೀಗಗ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಎಲ್ಲರು ಕಣ್ಣರಳಿಸಿ ನೋಡುವಂತೆ ಮಾಡಿದೆ.

ಮೈತ್ರಿ ಮೇಕರ್ಸ್ ಸಂಸ್ಥೆಯೊಂದಿಗೆ ಪ್ರಶಾಂತ್ ಕೈಜೋಡಿಸಿದ್ದಾರೆ. ಸಿನಿಮಾದ ಬಗ್ಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಯಾಕಂದ್ರೆ ಹನುಮಾನ್ ದೊಡ್ಡಮಟ್ಟಕ್ಕೆ ಸದ್ದು ಮಾಡಿತ್ತು. ಈಗ ಸೀಕ್ವೇಲ್ ಮೇಲೆ ಇನ್ನಷ್ಟು ನಿರೀಕ್ಷೆ ಸಹಜ. ಅದರಲ್ಲೂ ರಿಷಬ್ ಶೆಟ್ಟಿ ಅವರೇ ಆಂಜನೇಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕರ್ನಾಟಕದ ಜನತೆಗೆ ಖುಷಿಯಾಗಿದೆ. ಈಗ ಫಸ್ಟ್ ಲುಕ್ ನಲ್ಲೂ ರಿಷಬ್ ಶೆಟ್ಟಿ ಸಖತ್ತಾಗಿ ಕಾಣಿಸ್ತಾ ಇದಾರೆ. ಮೊದಲೇ ಡಿವೈನ್ ಸ್ಟಾರ್ ಎಂಬ ಹೆಸರು ಪಡೆದಿರುವ ರಿಷಬ್ ಶೆಟ್ಟಿ, ದೇವರ ಪಾತ್ರದಲ್ಲಿ ಪಕ್ಕಾ ಆಂಜನೇಯನ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ. ದೀಪಾವಳಿ ಮುನ್ನವೇ ಫಸ್ಟ್ ಲುಕ್ ರಿವೀಲ್ ಆಗಿದ್ದು, ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಸಿನಿಮಾ ಆದಷ್ಟು ಬೇಗ ತೆರೆ ಮೇಲೆ ಬರಲಿ‌ಎಂದು ಹಾರೈಸುತ್ತಿದ್ದಾರೆ. ರಿಷಬ್‌ ಶೆಟ್ಟಿ ಅವರನ್ನು ಆಂಜನೇಯನ ಅವತಾರದಲ್ಲಿ ಕಾಣಲು ಎಕ್ಸೈಟ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *