ಸುದ್ದಿಒನ್ : ನೀವು ಎಲ್‌ಪಿಜಿ (LPG) ಮತ್ತು ಪಿಎನ್‌ಜಿ (PNG – ಪೈಪ್ಡ್ ಗ್ಯಾಸ್) ಎರಡನ್ನೂ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ, ನಿಮ್ಮ ಮೊಬೈಲ್‌ಗೆ ಸದ್ಯದಲ್ಲೇ ಒಂದು ಸಂದೇಶ ಬರಬಹುದು ಅಥವಾ ಈಗಾಗಲೇ ಬಂದಿರಬಹುದು. ದೇಶಾದ್ಯಂತ “ಒಂದು ಮನೆ, ಒಂದು ಗ್ಯಾಸ್ ಸಂಪರ್ಕ” ಎಂಬ ಕಟ್ಟುನಿಟ್ಟಿನ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.
ಏನಿದು ಹೊಸ ನಿಯಮ?

ಮನೆಗಳಿಗೆ ಪೈಪ್ ಮೂಲಕ ಗ್ಯಾಸ್ (PNG) ಸೌಲಭ್ಯ ದೊರೆತ ನಂತರವೂ ಅನೇಕರು ಹಳೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಇಟ್ಟುಕೊಂಡಿದ್ದಾರೆ. ಸರ್ಕಾರದ ಹೊಸ ಆದೇಶದಂತೆ ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಎರಡೂ ಇಟ್ಟುಕೊಳ್ಳುವಂತಿಲ್ಲ.ಯಾರ ಮನೆಯಲ್ಲಿ ಪಿಎನ್‌ಜಿ ಸಂಪರ್ಕವಿದೆಯೋ, ಅವರು ತಕ್ಷಣವೇ ತಮ್ಮ ಎಲ್‌ಪಿಜಿ ಸಿಲಿಂಡರ್ ಅನ್ನು ಸರೆಂಡರ್ (ವಾಪಸ್) ಮಾಡಬೇಕು.ತೈಲ ಕಂಪನಿಗಳು ಈಗಾಗಲೇ ಅಂತಹ ಗ್ರಾಹಕರಿಗೆ ಎಸ್‌ಎಂಎಸ್ (SMS) ಮತ್ತು ಆ್ಯಪ್ ಮೂಲಕ ನೋಟಿಸ್ ನೀಡಲು ಪ್ರಾರಂಭಿಸಿವೆ.
ಸಂದೇಶದಲ್ಲಿ ಏನಿದೆ?
ಗ್ರಾಹಕರಿಗೆ ಬರುತ್ತಿರುವ ಸಂದೇಶದಲ್ಲಿ ಹೀಗೆ ಹೇಳಲಾಗಿದೆ: “ಸರ್ಕಾರದ ನಿಯಮಗಳ ಪ್ರಕಾರ, ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಎರಡನ್ನೂ ಹೊಂದುವಂತಿಲ್ಲ. ನೀವು ಈಗಾಗಲೇ ಪಿಎನ್‌ಜಿ ಸಂಪರ್ಕ ಹೊಂದಿದ್ದರೆ, ಕೂಡಲೇ ಎಲ್‌ಪಿಜಿ ಸಂಪರ್ಕವನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿ.
ಸರ್ಕಾರ ಈ ಕ್ರಮ ಕೈಗೊಳ್ಳುತ್ತಿರುವುದು ಏಕೆ?

ಒಂದೇ ಮನೆಯಲ್ಲಿ ಹಲವು ಗ್ಯಾಸ್ ಸಂಪರ್ಕಗಳಿರುವುದನ್ನು ತಡೆದು, ಪಾರದರ್ಶಕತೆ ತರುವುದು. ಅಗತ್ಯವಿರುವವರಿಗೆ, ಅಂದರೆ ಪೈಪ್ಡ್ ಗ್ಯಾಸ್ ಸೌಲಭ್ಯವಿಲ್ಲದವರಿಗೆ ಎಲ್‌ಪಿಜಿ ಸಿಲಿಂಡರ್‌ಗಳು ಸರಿಯಾಗಿ ತಲುಪುವಂತೆ ಮಾಡುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಪೂರೈಕೆಯ ಮೇಲೆ ಒತ್ತಡವಿರುವುದರಿಂದ, ದೇಶೀಯ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಾಪಸ್ ನೀಡದಿದ್ದರೆ ಏನಾಗುತ್ತದೆ?
ಒಂದು ವೇಳೆ ನೀವು ಎಲ್‌ಪಿಜಿ ಸಿಲಿಂಡರ್ ವಾಪಸ್ ನೀಡದಿದ್ದರೆ ಯಾವುದೇ ಮುನ್ಸೂಚನೆ ಇಲ್ಲದೆ ನಿಮ್ಮ ಎಲ್‌ಪಿಜಿ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.ಸಿಲಿಂಡರ್ ರಿಫಿಲ್ಲಿಂಗ್ (Refilling) ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.ಪರಿಶೀಲನೆಯ ಸಮಯದಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ದಂಡ ವಿಧಿಸುವ ಸಾಧ್ಯತೆಯೂ ಇದೆ.ಈಗಾಗಲೇ ದೇಶಾದ್ಯಂತ ಸುಮಾರು 43,000ಕ್ಕೂ ಹೆಚ್ಚು ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕವನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟಿದ್ದಾರೆ. ನಿಮ್ಮ ಬಳಿಯೂ ಎರಡೂ ಸಂಪರ್ಕಗಳಿದ್ದರೆ, ತೊಂದರೆ ತಪ್ಪಿಸಲು ಕೂಡಲೇ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಅಥವಾ ಆನ್‌ಲೈನ್ ಮೂಲಕ ಸರೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ.



















