ಬೆಂಗಳೂರು: ಆಸ್ಪತ್ರೆಯ ಬಿಲ್ ಬಾಕಿ ಉಳಿದಿದೆ ಎಂಬ ಕಾರಣಕ್ಕೆ ಮೃತದೇಹವನ್ನು ಹಸ್ತಾಂತರಿಸದೆ ತಡೆಹಿಡಿಯುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳ ಸಂಘಟನೆಗೆ (ಫನಾ) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸಲಾಗುವ ಅತಿಯಾದ ಬಿಲ್ಲಿಂಗ್ ನಿಯಂತ್ರಣಕ್ಕೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದು, ವೈದ್ಯಕೀಯ ವೆಚ್ಚದ ಹೊರೆ ಕಡಿಮೆ ಮಾಡುವುದು ಮತ್ತು ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. ಜನಸಾಮಾನ್ಯರಿಗೆ ನ್ಯಾಯಯುತ ಆರೋಗ್ಯ ಸೇವೆ ಒದಗಿಸುವುದು ಹಾಗೂ ರೋಗಿಗಳ ಹಿತಾಸಕ್ತಿಯನ್ನು ರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬಾಕಿ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮೃತದೇಹ ಹಸ್ತಾಂತರಿಸದೆ ತಡೆಹಿಡಿಯುವಂತಿಲ್ಲ ಎಂದು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಇದರ ಜೊತೆಗೆ, ಅತಿಯಾದ ವೈದ್ಯಕೀಯ ವೆಚ್ಚದ ಹೊರೆ ಕಡಿಮೆ ಮಾಡುವ ಮತ್ತು ಬಿಲ್ಲಿಂಗ್ನಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಹ ಮುಂದಾಗಿದೆ. ರೋಗಿಗಳ ಹಿತಾಸಕ್ತಿಯ ರಕ್ಷಣೆ, ಜನಸಾಮಾನ್ಯರಿಗೆ ನ್ಯಾಯಯುತ ಆರೋಗ್ಯ ಸೇವೆಯೇ ಸರ್ಕಾರದ ಬದ್ಧತೆಯಾಗಿದೆ.
ಇದನ್ನು ಓದಿಪಿಎಂ ಕಿಸಾನ್ ಫಲಾನುಭವಿಗಳೇ ಗಮನಿಸಿ : ಮನೆಯಲ್ಲೇ ಕುಳಿತು ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ— DIPR Karnataka (@KarnatakaVarthe) October 24, 2026
ಮೃತದೇಹ ಹಸ್ತಾಂತರಕ್ಕೆ ಅಡ್ಡಿಪಡಿಸುವಂತಿಲ್ಲ: ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಅಥವಾ ಬಿಲ್ ಪಾವತಿ ಬಾಕಿ ಇದ್ದರೂ ಸಹ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವುದನ್ನು ತಡೆಯುವಂತಿಲ್ಲ.

ಅತಿಯಾದ ಬಿಲ್ಲಿಂಗ್‌ಗೆ ಕಡಿವಾಣ: ಅತಿಯಾದ ಶುಲ್ಕ ಮತ್ತು ಬಿಲ್ಲಿಂಗ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಗಳ ಜಾರಿ.
ಫನಾಗೆ ಅಧಿಕೃತ ನಿರ್ದೇಶನ: ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆಗೆ (PHANA) ಸರ್ಕಾರ ಸೂಚನೆ ರವಾನಿಸಿದೆ











