ಸುದ್ದಿಒನ್, ಭರಮಸಾಗರ, ಆಗಸ್ಟ್. 18 : ಚಿತ್ರದುರ್ಗ ಜಿಲ್ಲಾ ಗೃಹರಕ್ಷಕ ದಳದ ಭರಮಸಾಗರ ಘಟಕದಲ್ಲಿ ಘಟಕ ಅಧಿಕಾರಿಯಾಗಿ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೆಚ್. ಪ್ರಕಾಶ್ ಅವರಿಗೆ ಇಂದು (ಆಗಸ್ಟ್. 18, ಮಂಗಳವಾರ) ಭರಮಸಾಗರದ ಪ್ರವಾಸಿ ಮಂದಿರದಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ ಜಿಲ್ಲಾ ಗೃಹರಕ್ಷಕ ದಳದ ಭರಮಸಾಗರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ, ನಿವೃತ್ತರಾದ ಹೆಚ್. ಪ್ರಕಾಶ್ ಅವರ ಸೇವೆಯನ್ನು ಮುಕ್ತಕಂಠದಿಂದ ಸ್ಮರಿಸಲಾಯಿತು. ಅವರ ಅಪಾರ ಕೊಡುಗೆಯನ್ನು ಪ್ರಶಂಸಿಸಿ, ಅವರ ನಿವೃತ್ತ ಜೀವನವು ಸುಖ, ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ಘಟಕದ ವತಿಯಿಂದ ಹೃತ್ಪೂರ್ವಕವಾಗಿ ಹಾರೈಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ಗೃಹರಕ್ಷಕ ದಳದ ಸಮಾದೇಷ್ಠರಾದ ಸಿ.ಕೆ. ಸಂಧ್ಯಾ, ಉಪಸಮಾದೇಷ್ಠರಾದ ಲೋಕೇಶ್ ಜಿ.ಹೆಚ್, ಸಹಾಯಕ ಬೋಧಕರಾದ ಶರಣಬಸವರಾಜ್, ವೆಂಕಟೇಶ್ ಹಾಗೂ ಭರಮಸಾಗರ ಘಟಕದ ಸಿಬ್ಬಂದಿ ವರ್ಗ ಮತ್ತು ಗೃಹರಕ್ಷಕರು ಉಪಸ್ಥಿತರಿದ್ದು ಶುಭ ಕೋರಿದರು.












