ಮೀಸಲಾತಿ ವಿಚಾರವಾಗಿ ಬದ್ಧ: ಸಚಿವ ಶ್ರೀರಾಮುಲು

suddionenews
2 Min Read

ಬೆಂಗಳೂರು: ನಮ್ಮ ಸರ್ಕಾರ ಮೀಸಲಾತಿ ವಿಚಾರವಾಗಿ ಬದ್ಧವಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಶ್ರೀರಾಮುಲು ಹೇಳಿದರು. ಈ ವೇಳೆ ಸುದ್ದೊಗೋಷ್ಠಿಯಲ್ಲಿ ಮಾತನಾಡಿದ ಅವರು,ನಮ್ಮ ಅವಧಿಯಲ್ಲೇ ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡುವ ಕೆಲಸ ಮಾಡುತ್ತದೆ ಎಂದರು.

ಇನ್ನೂ ನ್ಯಾ.ಸುಭಾಷ್ ಅಡಿ ಅವರು ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ. ಮೀಸಲಾತಿ ಬಗ್ಗೆ ನಾವು ಮೊದಲಿಂದಲೂ ಹೋರಾಟ ಮಾಡೊಕೊಂಡು ಬಂದಿದ್ದೇವೆ. ಸಾಧಕ-ಬಾಧಕ ನೋಡಿಕೊಂಡು ಸರ್ಕಾರ‌ ನಿರ್ಧಾರ ಕೈಗೊಳ್ಳುತ್ತದೆ. ನಮ್ಮ ಅವಧಿಯಲ್ಲೇ ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದರು.ಸಚಿವ ಶ್ರೀರಾಮುಲು ಹೇಳಿಕೆಆರ್ಥಿಕ ಸಂಕಷ್ಟದಿಂದ ಕಿಡ್ನಿ ಮಾರಾಟಕ್ಕಿದೆ ಎಂದು ಕೆಎಸ್​ಆರ್​ಟಿಸಿ ಡ್ರೈವರ್ ಸ್ಟೇಟಸ್ ಹಾಕಿರುವ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ವೇತನ ಸಮಸ್ಯೆ ಆಗುತ್ತಿಲ್ಲ. ಮೊನ್ನೆ ಸರ್ಕಾರದಿಂದ 171 ಕೋಟಿ ವೇತನ ಬಿಡುಗಡೆ ಆಗಿದೆ. ನಾನು ಇಲಾಖೆ ಹೊಣೆ ತಗೊಂಡ ನಂತರ ಹಿಂದೆ ಮಾಡಿದ್ದ ವರ್ಗಾವಣೆ, ಅಮಾನತು ರದ್ದು ಪಡಿಸಿದ್ದೇನೆ.

ಸ್ಟೇಟಸ್ ಹಾಕಿರುವ ಚಾಲಕನಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾದ ಡಿಪೋ ಮ್ಯಾನೇಜರ್​ಗೆ ನೋಟಿಸ್ ಕೊಡಲಾಗಿದೆ. ಅವರ ಸ್ಪಷ್ಟೀಕರಣ ಬಂದ ನಂತರ ವಿಚಾರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಮೊದಲ ಕ್ಯಾಬಿನೆಟ್​ನಲ್ಲಿ ಅನೇಕ ವರ್ಷಗಳಿಂದ ವಾಲ್ಮೀಕಿ ಸಮುದಾಯದ ಪ್ರತ್ಯೇಕ ಸಚಿವಾಲಯ ಬೇಡಿಕೆ ಇತ್ತು. ಅದನ್ನ ಮಾಡಲಾಗಿದೆ. ಇದಾ‌ದ ಬಳಿಕ‌ ಮೊದಲ ಬಾರಿಗೆ ವಾಲ್ಮೀಕಿ ಜಯಂತ್ಯುತ್ಸವ ಆಚರಿಸುತ್ತಿದ್ದೇವೆ ಎಂದರು.ಪ್ರತಿ ವರ್ಷ ಸಾಧನೆ ಮಾಡಿರುವವರನ್ನ ಗುರುತಿಸಿ, ಅವರಿಗೆ ಪ್ರಶಸ್ತಿ ನೀಡಲಾಗ್ತಿದೆ. ಈ ಬಾರಿ 2020-21ನೇ ಸಾಲಿನ ಪ್ರಶಸ್ತಿಗೆ ಸಮಿತಿ ರಚಿಸಲಾಗಿತ್ತು. ಮಹಾರಾಣಿ ಕಾಲೇಜು ಕ್ಲಸ್ಟರ್ ಗೋಮತಿ ಅವರ ನೇತೃತ್ವದಲ್ಲಿ ಕಮಿಟಿ‌ ರಚನೆ ಮಾಡಲಾಗಿತ್ತು.

ಸಮಿತಿ ಚರ್ಚೆ ಬಳಿಕ ಆರು ಜನರನ್ನು ಆಯ್ಕೆ ಮಾಡಲಾಗಿದೆ. 2020 ರ ಸಾಲಿನ ಪ್ರಶಸ್ತಿಗೆ ಐದು ಜನ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.ಬೆಂಗಳೂರು ವಿಭಾಗದಿಂದ ಕೆ.ಸಿ.ನಾಗರಾಜ್, ಬೆಳಗಾವಿ ವಿಭಾಗದಿಂದ ನಾಟಿ ವೈದ್ಯೆ ಲಕ್ಷ್ಮೀ ಗಣಪತಿ ಸಿದ್ದಿ, ಮೈಸೂರು‌ ವಿಭಾಗದಿಂದ ಶಿಕ್ಷಣ ಕ್ಷೇತ್ರದಿಂದ ಪ್ರೊ. ಎಸ್.ಆರ್ ನಿರಂಜನ್, ಕಲಬುರ್ಗಿ ವಿಭಾಗದಿಂದ ಭಟ್ರಹಳ್ಳಿ ಗೂಳಪ್ಪ, ಬೆಂಗಳೂರು ಕೇಂದ್ರ ಸ್ಥಾನದಿಂದ ಅಶ್ವತ್ಥರಾಮಯ್ಯ, ಸಮಾಜ ಸೇವೆಯಿಂದ ಜಂಬಯ್ಯ ನಾಯಕರನ್ನು ಆಯ್ಕೆ ಮಾಡಲಾಗಿದೆ. ನಾಳೆ ಸಿಎಂ ಬೊಮ್ಮಾಯಿ, ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ಐದು ಲಕ್ಷ ನಗದು, 20 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *