Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರೇಣುಕಾಸ್ವಾಮಿ ದೇಹದಲ್ಲಿ ರಕ್ತಸುರಿಯುತ್ತಿದ್ದರು ಹೊಡೆದ ಪಾಪಿಗಳು : ಏನಿದೆ ಚಾರ್ಜ್ ಶೀಟ್ ನಲ್ಲಿ..?

---Advertisement---

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣ, ಆತನನ್ನು ಹುಡುಕಿ ಬೆಂಗಳೂರಿಗೆ ಕರೆತಂದಿದ್ದರು ದರ್ಶನ್ ಗ್ಯಾಂಗ್. ಬಳಿಕ ಕೊಲೆ, ಜೈಲು ಈ ಎಲ್ಲಾ ವಿಚಾರ ಗೊತ್ತೆ ಇದೆ. ರೇಣುಕಾಸ್ವಾಮಿಯನ್ನ ಎಷ್ಟು ಕ್ರೂರವಾಗಿ ಕೊಂದಿದ್ದರು ಎಂಬುದು ಲೀಕ್ ಆದ ಫೋಟೋಗಳಿಂದಾನು ಎಲ್ಲರಿಗೂ ಅರ್ಥವಾಗಿತ್ತು. ಇದೀಗ ಪೊಲೀಸರು 3991 ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಇನ್ನಷ್ಟು ಭೀಕರತೆ ಅರ್ಥವಾಗಿದೆ.

ರೇಣುಕಾಸ್ವಾಮಿಯನ್ನು ಶೆಡ್ ಗೆ ಕರೆದುಕೊಂಡು ಬಂದ ಮೇಲೆ ರಕ್ತ ಬರುವಂತೆ ಹೊಡೆದಿದ್ದಾರೆ. ಮುಖ, ತಲೆಯಲ್ಲಿ ರಕ್ತ ಕಿತ್ತುಕೊಂಡಿದೆ. ಆದರೂ ಆತನನ್ನು ಬಿಟ್ಟಿಲ್ಲ. ದರ್ಶನ್ ಜೊತೆಗಿದ್ದವರು ಮೃಗಗಳಂತೆ ಹೊಡೆದಿದ್ದಾರೆ. ದರ್ಶನ್ ಗ್ಯಾಂಗ್ ನಲ್ಲಿದ್ದ 12 ಮಂದಿ ದಾಳಿ ಮಾಡಿದ್ದಾರೆ. ಏಟು ತಿದ ರೇಣುಕಾಸ್ವಾಮಿ ದೇಹದಲ್ಲಿ ರಕ್ತ ಸುರಿದರು ಬಿಡದೆ ಗ್ಯಾಂಗ್ ನಲ್ಲಿದ್ದವರು ಹೊಡೆದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದರು ಮತ್ತೆ ಮತ್ತೆ ಹೊಡೆದಿದ್ದಾರೆ. ದರ್ಶನ್ ಕೂಡ ರೇಣುಕಾಸ್ವಾಮಿಗೆ ಹೊಡೆದಿದ್ಸಾರೆ ಎಂಬುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ತಕ್ತದ ಮಡುವಿನಲ್ಲಿ ಬಿದ್ದಿದ್ದ ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿ ದರ್ಶನ್ ಹಲ್ಲೆ ಮಾಡಿದ್ದಾರಂತೆ. ಮರ್ಮಾಂಗದ ಮೇಲೆ ದರ್ಶನ್ ತುಳಿದಿದ್ದಾರೆ. ಅಲ್ಲಿಯೇ ಇದ್ದ ಇನ್ನಿಬ್ಬರು ಅದಕ್ಕೆ ಬೆಂಬಲ ನೀಡಿದ್ದಾರೆ. ದರ್ಶನ್ ಮರ್ಮಾಂಗದ ಜಾಗಕ್ಕೆ ಬಲವಾಗಿ ಒದ್ದಾಗಲೇ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲೂ ಜೋರಾಗಿ ಒದ್ದ ಪರಿಣಾಮದಿಂದಾನೆ ಸಾವನ್ನಪ್ಪಿರುವುದು ಎಂದು ದೃಢವಾಗಿದೆ. ಪೊಲೀಸರು ತಾವೂ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಈ ಅಂಶವನ್ನು ಸೇರಿಸಲಾಗಿದೆ. ಇದರಿಂದ ದರ್ಶನ್ ಅವರಿಗರ ಮತ್ತಷ್ಟು ಸಂಕಷ್ಟ ಎದುರಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...