ಬೆಂಗಳೂರು: ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಟ್ರಯಲ್ ಕೂಡ ನಡೀತಾ ಇದೆ. ಆದ್ರೆ ಇದರ ನಡುವೆ ದರ್ಶನ್ ಅವರ ಬಳಿ ಇದ್ದ ಗನ್ ಲೈಸೆನ್ಸ್ ವಿಚಾರಕ್ಕೆ ರಿಲೀಫ್ ಸಿಕ್ಕಿದೆ. ಕಳೆದ ಬಾರಿ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಂತ ನಟ ದರ್ಶನ್, ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದರು. ಆ ಬಳಿಕ 2024ರಲ್ಲಿಯೇ ಪೊಲೀಸರು ದರ್ಶನ್ ಬಳಿ ಇದ್ದಂತ ಗನ್ ಲೈಸೆನ್ಸ್ ಅನ್ನು ಕ್ಯಾನ್ಸಲ್ ಮಾಡಿದ್ದರು.
ಇಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಯಾರಿಗೂ ಗನ್ ತೋರಿಸಿ ಬೆದರಿಕೆ ಹಾಕಬಾರದು ಎಂಬ ಉದ್ದೇಶದಿಂದ. ಗನ್ ಲೈಸೆನ್ಸ್ ಅಮಾನತುಗೊಳಿಸಿದ ಪೊಲೀಸರ ನಡೆಯನ್ನು ಪ್ರಶ್ನಿಸಿ, ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2008ರಿಂದಾನೂ ದರ್ಶನ್ ಗನ್ ಲೈಸೆನ್ಸ್ ಹೊಂದಿದ್ದಾರೆ. ಆದರೆ ಜಾಮೀನು ರದ್ದಾದ ಬಳಿಕ ಗನ್ ಸರೆಂಡರ್ ಮಾಡಲಾಗಿದೆ. ದರ್ಶನ್ ಹೆಸರಿನ ಕಾರಣಕ್ಕೆ ಲೈಸೆನ್ಸ್ ಅಮಾನತುಗೊಳಿಸಿದ್ದಾರೆ ಎಂದು ದರ್ಶನ್ ಪರ ವಕೀಲರು ವಾದ ಮಂಡನೆ ಮಾಡಿದ್ದರು.
ಅದೇ ಸಮಯದಲ್ಲಿ ಹೈಕೋರ್ಟ್ ಕೂಡ ಹೆಸರಿನ ಕಾರಣಕ್ಕಲ್ಲ, ಆರೋಪವಿರುವ ಕಾರಣಕ್ಕೆ ಎಂದು ಸ್ಪಷ್ಟನೆ ನೀಡಿತ್ತು. ಆ ಬಳಿಕ ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ. ಇದು ಮಾರ್ಚ್ 6ರವರೆಗೂ ಅನ್ವಯವಾಗಲಿದೆ. ಸದ್ಯ ದರ್ಶನ್ ಅವರು ಜೈಲಿನಲ್ಲಿಯೇ ಇದ್ದು, ಸಾಕ್ಷಿಗಳ ಟ್ರಯಲ್ ನಡೀತಾ ಇದೆ. ಸುಮಾರು ಒಂದು ವರ್ಷಗಳ ಕಾಲ ಸಾಕ್ಷಿಗಳ ಟ್ರಯಲ್ ಆಗಬಹುದು ಎಂದೇ ಹೇಳಲಾಗ್ತಾ ಇದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















