ಚಿತ್ರದುರ್ಗ : ಜಿಲ್ಲೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ಸಾಕಷ್ಟು ಗಣಿ ಗುತ್ತಿಗೆ ಪ್ರದೇಶಗಳನ್ನು ಗಣಿ ಕಾಯ್ದೆ ಉಲ್ಲಂಘನೆ ಮೇರೆಗೆ ಹಾಗೂ ಪರಿಸರ ಸಂರಕ್ಷಣಾ ಹಿತದಿಂದ ಘನ ಸರ್ಕಾರವು ರದ್ದುಗೊಳಿಸಿದೆ. ಆ ಪ್ರದೇಶದಲ್ಲಿ ಗಿಡಮರಗಳನ್ನು ಬೆಳಸಲು ಘನ ಸರ್ಕಾರ ಮುಂದಾಗ ಬೇಕೆಂದು ಮನವಿ ಮಾಡಲಾಗಿದೆ.
ಜಾಗತಿಕ ತಾಪಮಾನದಿಂದ ಕಳೆದ 4 ವರ್ಷಗಳಿಂದ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆ ಯಾಗಿರುವುದು ಎಲ್ಲರಿಗೂ ತಿಳಿದಂತಹ ವಿಷಯ, ಜಾಗತಿಕ ತಾಪಮಾನ ತಗ್ಗಿಸಲು ಪ್ರತಿಯೊಬ್ಬರ ಹೊಣೆಯಾಗಿದೆ. ಜಾಗತಿಕ ತಾಪಮಾನಕ್ಕೆ ಕಾರಣಗಳಾದ ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಡ್ ಆಕ್ಸೈಡ್ ಮತ್ತು ಓಜೋನ್‍ಗಳ ಪ್ರಮಾಣ ಅಧಿಕಗೊಳ್ಳುವುದು. ಅರಣ್ಯಗಳ ನಾಶ, ಇಂಧನಗಳ ಬಳಕೆ, ನಗರಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು, ಡಾಂಬರಿಕರಣ ರಸ್ತೆಗಳು, ಗಿಡಮರಗಳ ನಾಶ ಜನಸಂಖ್ಯೆಯ ಹೆಚ್ಚಳ ಮತ್ತು ಸಾಂದ್ರತೆ ಕಾರ್ಖಾನೆ ಹಾಗೂ ಕೈಗಾರಿಕೆಗಳ ಹೆಚ್ಚಳ ಮುಂತಾದವುಗಳು ಕಾರಣವಿರುತ್ತವೆ. ಈ ಅಪಾಯವನ್ನು ದೂರಗೊಳಿಸಲು ಅರಣ್ಯಗಳ ವೃದ್ಧಿ ಪಡಿಸಬೇಕು. ವಿದ್ಯುಚ್ಛಕ್ತಿಯ ಮಿತವ್ಯಯ ಆಗಬೇಕು. ಅದೇ ರೀತಿ ಕಲ್ಲಿದ್ದಲು, ಇದ್ದಿಲು ಹಾಗೂ ಭೂಮಿಯ ಕೆಳಸ್ತರಗಳಲ್ಲಿನ ಇಂಧನದ ಬಳಕೆ ಕಡಿಮೆಯಾಗಬೇಕು. ಓಜೋನ್ ಬಹುಮುಖ್ಯವಾದುದು. ಈ ಓಜೋನ್ ಪದರವು ಸೂರ್ಯನಿಂದ ಭುಮಿಯತ್ತ ಹೊಮ್ಮುವ ತೀಕ್ಷ್ಣ ಹಾಗೂ ಅಪಾಯಕಾರಿ ಕಿರಣಗಳ ಪ್ರಭಾವವನ್ನು ನಾಶಗೊಳಿಸುತ್ತದೆ. ಓಜೋನ್ ಉತ್ಪತ್ತಿಯಾಗುತ್ತೆ ಮತ್ತು ನಶಿಸುತ್ತಾ ಇರುತ್ತದೆ. ಹಾಗಾಗಿ ಅದುಯಾವಾಗಲೂ ಸ್ಥಿರವಾಗಿ ರುವಂತದ್ದು. ಸೂರ್ಯನ ಕಿರಣಗಳಲ್ಲಿನ ಹಾನಿಕರಕ ನೀಲಿ ಲೋಹಿತಾತೀತ ಕಿರಣಗಳ ವಿರುದ್ಧ ಒಂದು ಅಡ್ಡಗೋಡೆಯಂತೆ ಕೆಲಸ ಮಾಡುತ್ತದೆ. ಹಾಗೂ ಭೂಮಟ್ಟಕ್ಕೆ ತಲಪದಂತೆ ತನ್ನೊಳಕ್ಕೆ ಹೀರಿಕೊಳ್ಳುತ್ತದೆ. ಇದು ಪ್ರಕೃತಿಯ ಬಹಳ ದೊಡ್ಡದು ಹಾಗೂ ಅಪೂರ್ವ ಕೊಡುಗೆಯಾಗಿದೆ. ಅದು ಇಲ್ಲದೇ ಹೋಗಿದ್ದರೆ ಭೂಮಿಯ ಮೇಲೆ ಜೀವಿಗಳು ಉಳಿಯುತ್ತಿರಲಿಲ್ಲ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆ. ಪರಶುರಾಮ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ.
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.) ಮೊ : 9448338821