Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ :  ಕೌನ್ಸಿಲಿಂಗ್ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಸೂಚನೆಗಳು

Facebook
Twitter
Telegram
WhatsApp

 

ಚಿತ್ರದುರ್ಗ. ಅ.20:  2022ರ ಪದವೀಧರ ಪ್ರಾಥಮಿಕ ಶಿಕ್ಷಕ (6-8ನೇ ತರಗತಿ) ನೇಮಕಾತಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಇದೇ ಅಕ್ಟೋಬರ್ 21ರಂದು ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ.

ಶಿಕ್ಷಕರ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆಗಳನ್ನು ನೀಡಿದ್ದಾರೆ.

ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಕಡ್ಡಾಯ ಸೂಚನೆಗಳು: ಜಿಲ್ಲಾ ಉಪನಿರ್ದೇಶಕರ ಕಛೇರಿಗಳ ವಿಳಾಸ ಮತ್ತು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ವಿವರಗಳನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪಡೆದುಕೊಳ್ಳಬಹುದಾಗಿದೆ. ಕೌನ್ಸಿಲಿಂಗ್ ಪ್ರಕ್ರಿಯೆ 2023ರ ಅಕ್ಟೋಬರ್ 21 ರಿಂದ ಆಯಾ ನೇಮಕಾತಿ ಪ್ರಾಧಿಕಾರಿಯವರ ಕಛೇರಿಯಲ್ಲಿ ನಡೆಯಲಿದೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕಛೇರಿಯ ವಿಳಾಸದಲ್ಲಿ ಸಂಪರ್ಕಿಸಿ ಅಥವಾ ದೂರವಾಣಿ ಮುಖಾಂತರ ಪಡೆದುಕೊಳ್ಳಬಹುದಾಗಿದೆ.

ಕೌನ್ಸಿಲಿಂಗ್‍ಗಾಗಿ ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ವಿವರ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸ್ಪಷ್ಟಿಕರಣಗಳಿಗೆ ಆಯಾ ನೇಮಕಾತಿ ಪ್ರಾಧಿಕಾರಿ ಅಂದರೆ ಆಯಾ ಉಪನಿರ್ದೇಶಕರ ಕಚೇರಿಯನ್ನೇ ಸಂಪರ್ಕಿಸತಕ್ಕದ್ದು. ಅಕ್ಟೋಬರ್ 21 ರಿಂದ ವಿವಿಧ ವಿಷಯ, ಭಾಷೆ ಹುದ್ದೆಗಳಿಗೆ ಆರಂಭವಾಗುವ ಕೌನ್ಸಿಲಿಂಗ್ ಪ್ರಕ್ರಿಯೆಯು ವಿವರದಲ್ಲಿನ ಎಲ್ಲಾ ಅಭ್ಯರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆ ಮುಗಿಯುವವರೆಗೆ ನಿಗಧಿತ ದಿನಾಂಕಗಳಂದು ನಿರಂತರವಾಗಿ ನಡೆಯುತ್ತದೆ.

ಕೌನ್ಸಿಲಿಂಗ್‍ಗೆ ಅಭ್ಯರ್ಥಿಗಳೇ ಕಡ್ಡಾಯವಾಗಿ ಖುದ್ದು ಹಾಜರಿದ್ದು, ಸ್ಥಳ ಆಯ್ಕೆ ಮಾಡಿಕೊಳ್ಳತಕ್ಕದ್ದು, ಅಭ್ಯರ್ಥಿಗಳ ಪರವಾಗಿ ಮತ್ತೊರ್ವರು ಕೌನ್ಸಿಲಿಂಗ್‍ಗೆ ಹಾಜರಾಗಲು ಅವಕಾಶವಿರುವುದಿಲ್ಲ. ಕೌನ್ಸಿಲಿಂಗ್‍ಗೆ ಗೈರು ಹಾಜರಾದ ಅಭ್ಯರ್ಥಿಗಳ ಕುರಿತಂತೆ ಅವರ ನೇಮಕಾತಿಯನ್ನು ರದ್ದುಗೊಳಿಸಬಹುದಾದ ಕುರಿತಂತೆಯೂ ಸೇರಿ ಎಲ್ಲಾ ಕ್ರಮಗಳನ್ನು ಆಯಾ ನೇಮಕಾತಿ ಪ್ರಾಧಿಕಾರಿಯವರು ಕೈಗೊಳ್ಳಲು ಸಕ್ಷಮರಿರುತ್ತಾರೆ.

ಕೌನ್ಸಿಲಿಂಗ್‍ಗೆ ಹಾಜರಾಗುವ ಸಂದರ್ಭದಲ್ಲಿ ಆಭ್ಯರ್ಥಿಗಳು ಕಡ್ಡಾಯವಾಗಿ ಅಂಗೀಕೃತವಾಗುವ ಭಾವಚಿತ್ರ ಸಹಿತ ಇರುವ ದೃಢೀಕೃತ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಇದು ಅಭ್ಯರ್ಥಿಗಳ ಗುರುತಿಸುವಿಕೆಗೆ ಕಡ್ಡಾಯವಾಗಿರುತ್ತದೆ.

ಕೌನ್ಸಿಲಿಂಗ್‍ಗೆ ಹಾಜರಾಗುವ ಸಂದರ್ಭದಲ್ಲಿ ಅಭ್ಯರ್ಥಿಗಳು ಅವರ ನೇಮಕಾತಿ ಅರ್ಜಿಗೆ ಸಂಬಂಧಪಟ್ಟಂತೆ ಇರುವ ಇತರೆ ಅವಶ್ಯಕ ದಾಖಲೆಗಳನ್ನು ಸಹ ಹೊಂದಿರತಕ್ಕದ್ದು. ರಾಜ್ಯ ಉಚ್ಚ ನ್ಯಾಯಾಲಯ ಕೆ.ಎ.ಟಿ ನ್ಯಾಯಾಲಯಗಳಲ್ಲಿ ಆಯ್ಕೆ ಮತ್ತು ನೇಮಕಾತಿ ವಿಷಯದ ಬಗ್ಗೆ ಅಭ್ಯರ್ಥಿಯು ಯಾವುದೇ ದಾವೆಯನ್ನು ಹೂಡಿರುವುದಿಲ್ಲ ಎಂಬುದಾಗಿ ಕೆಳಗಿನ ನಿಗದಿತ ಮಾದರಿಯಲ್ಲಿ ರೂ 20 ಮೌಲ್ಯದ ದಸ್ತಾವೇಜಿನ ಮೇಲೆ ನೋಟರೀಕೃತ ಮುಚ್ಚಳಿಕೆಯನ್ನು ಕೌನ್ಸಿಲಿಂಗ್ ಸಂದರ್ಭದಲ್ಲಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಕೌನ್ಸಿಲಿಂಗ್ ಕ್ರಮಗಳು ಆನ್ ಲೈನ್ ವ್ಯವಸ್ಥೆಯಲ್ಲಿ ನೇಮಕಾತಿ ಪ್ರಾಧಿಕಾರಿಯವರ ಸಮ್ಮುಖದಲ್ಲಿ ಇರುತ್ತದೆ.

ಅಭ್ಯರ್ಥಿಯ ಆಯ್ಕೆ, ಮೆರಿಟ್ ರ್ಯಾಕಿಂಗ್ ಕ್ರಮದಲ್ಲಿ, ಕೌನ್ಸಿಲಿಂಗ್ ಇರುತ್ತದೆ. ಅಂಗವಿಕಲ ಮೀಸಲಾತಿಯು ನೇಮಕವಾದವರಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಅಂಗವಿಕಲ ಅಭ್ಯರ್ಥಿಗಳು ಕಡ್ಡಾಯವಾಗಿ ಅಂಗವಿಕಲತೆ ಕುರಿತಾದ ಚಾಲ್ತಿಯಲ್ಲಿರುವ ದಾಖಲೆಯನ್ನು ಪ್ರಸ್ತುತಪಡಿಸತಕ್ಕದ್ದು.

ಒಮ್ಮೆ ಆಯ್ಕೆ ಮಾಡಿಕೊಂಡ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸಿಕೊಳ್ಳಲು ಅಥವಾ ಮತ್ತೊಬ್ಬ ಅಭ್ಯರ್ಥಿಯ ಸ್ಥಳದೊಂದಿಗೆ ಪರಸ್ಪರ ವಿನಿಮಯಕ್ಕೆ ಅವಕಾಶವಿರುವುದಿಲ್ಲ.  ಕೌನ್ಸಿಲಿಂಗ್‍ಗೆ ನೀಡುವ ಹುದ್ದೆಗಳ ಹೊರತಾಗಿ ಅಭ್ಯರ್ಥಿಗಳಿಗೆ ಬೇರೆ ಆಯ್ಕೆ ಇರುವುದಿಲ್ಲ. ಅಭ್ಯರ್ಥಿಗಳಿಗೆ ಶಾಲೆ ಅಥವಾ ಕ್ಷೇತ್ರಶಿಕ್ಷಣಾಧಿಕಾರಿಯವರ, ಉಪನಿರ್ದೇಶಕರ ಡಯಟ್ ಕಚೇರಿಯ ಆಯ್ಕೆಯನ್ನು ನೀಡಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪನಿರ್ದೇಶಕರ ಡಯಟ್ ಕಚೇರಿಯನ್ನು ಆಯ್ಕೆ ಮಾಡಬೇಕಾದ ಅಭ್ಯರ್ಥಿಗಳು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗಿ ತಕ್ಷಣವೇ ವೃತ್ತಿ ಬುನಾದಿ ತರಬೇತಿಗೆ ನಿಯೋಜನೆಗೊಳ್ಳುತ್ತಾರೆ.  ಮತ್ತು ನಂತರದ ಮತ್ತೊಂದು ಕೌನ್ಸಿಲಿಂಗ್ ಮುಖಾಂತರ ನಿಯಮಾನುಸಾರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದಾದರೂ ಶಾಲೆಯ ಆಯ್ಕೆಯನ್ನು ಪಡೆಯುತ್ತಾರೆ.

ಜಿಲ್ಲೆಯಲ್ಲಿ ಇರುವ ಖಾಲಿ ಹುದ್ದೆಗಳಲ್ಲಿ ಗ್ರಾಮೀಣ ಪ್ರದೇಶದ ‘ಸಿ’ ವಲಯದ ಶಾಲೆಯನ್ನೇ ಆದ್ಯತೆಯಲ್ಲಿ ಕೌನ್ಸಿಲಿಂಗ್‍ಗೆ ನೀಡಲಾಗಿದೆ. ಈ ಕುರಿತಂತೆ ಕಾಯ್ದೆ-ನಿಯಮ ಇದ್ದು ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಅನ್ವಯವಾಗುವ ಕ್ರಮವಾಗಿರುತ್ತದೆ.

ಎಲ್ಲಾ ದಾಖಲೆಗಳು ಸಿಂದುತ್ವ ಇದ್ದಲ್ಲಿ ಕೌನ್ಸಿಲಿಂಗ್ ಮುಗಿದ ತಕ್ಷಣದಲ್ಲಿಯೇ ಅರ್ಹ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಸ್ಥಳದಲ್ಲಿಯೇ ಆಯಾ ನೇಮಕಾತಿ ಪ್ರಾಧಿಕಾರಿಯವರು ನೇಮಕಾತಿ ಆದೇಶವನ್ನು ವಿತರಿಸಲಿದ್ದಾರೆ.

ನೇಮಕಾತಿ ಅದೇಶದಲ್ಲಿ ಅಭ್ಯರ್ಥಿಯ ಮೂಲಭೂತ ವಿವರಗಳು ಮತ್ತು ಸ್ಥಳ ಆಯ್ಕೆ ವಿವರ ಇರುತ್ತದೆ. ನೇಮಕಾತಿ ಆದೇಶದಲ್ಲಿನ ವಿವರಗಳಂತೆ ಮುಂದಿನ ಕ್ರಮಗಳು ಇರುತ್ತದೆ. ನೇಮಕಾತಿ ಆದೇಶ ಪಡೆದ 15 ದಿನಗಳೊಳಗಾಗಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ತಪ್ಪಿದ್ದಲ್ಲಿ ನೇಮಕಾತಿ ಆದೇಶವು ತನ್‍ತಾನಾಗಿಯೇ ರದ್ದಾಗುತ್ತದೆ.

ದಾಖಲೆಗಳ ಪರಿಶೀಲನೆ ಬಾಕಿ ಇರುವ ಮತ್ತು ನೈಜತೆ ಸ್ವೀಕೃತಿ ಸಿಂಧುತ್ವ ಪ್ರಮಾಣ ಪತ್ರ ಇತ್ಯಾದಿ ಬಾಕಿ ಇರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶದ ವಿತರಣೆ ಇರುವುದಿಲ್ಲ. ಅಗತ್ಯ ದಾಖಲೆಗಳನ್ನು ನೇಮಕಾತಿ ಪ್ರಾಧಿಕಾರಿಯವರಿಗೆ ಸ್ವೀಕೃತವಾದ ನಂತರ ಪರಿಶೀಲಿಸಿ ನಿಯಮಾನುಸಾರ ನೇಮಕಾತಿ ಆದೇಶವನ್ನು ಪಡೆಯಲಿದ್ದಾರೆ. ನೇಮಕಾತಿ ಆದೇಶ ಪಡೆದ ಅಭ್ಯರ್ಥಿಗಳು ನಿಯಮಾನುಸಾರ ಆದೇಶದಲ್ಲಿನ ಕ್ರಮಗಳಂತೆ ಕ್ರಮವಹಿಸತಕ್ಕದ್ದು. ತಪ್ಪಿದಲ್ಲಿ ಮುಂದಿನ ಆಗುಹೋಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗೆ ಆಯಾ ನೇಮಕಾತಿ ಪ್ರಾಧಿಕಾರಿಯವರನ್ನೇ ಸಂಪರ್ಕಿಸಲು ತಿಳಿಸಿದೆ. ಕೌನ್ಸಿಲಿಂಗ್ ನಲ್ಲಿ ಸ್ಥಳ ಆಯ್ಕೆಗೆ ಯಾವುದೇ ರೀತಿಯ ಪ್ರಭಾವವನ್ನು ಬಳಸುವಂತಿಲ್ಲ. ಅಂತಹ ಸಂದರ್ಭಗಳನ್ನು ತೀವ್ರವಾಗಿ ಪರಿಗಣಿಸುವುದಲ್ಲದೇ ಯಾವುದೇ ಅನಪೇಕ್ಷಿತ ದುರ್ನಡತೆಗಾಗಿ ನೇಮಕಾತಿಯನ್ನು ರದ್ದುಪಡಿಸಬಹುದಾದ ಹಕ್ಕನ್ನು ಕಾಯ್ದಿರಿಸಿಕೊಂಡಿದೆ ಎಂದು  ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!