Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಮನೆ ಮನೆಗೂ ತಲುಪಿಸಿ : ಸರ್ದಾರ ಸೇವಾಲಾಲ್ ಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್. 27 : ಹಿಂದೂಗಳಿಗೆ ಅಯೋಧ್ಯೆ ಭಕ್ತಿಯ ಕೇಂದ್ರವಾಗಿದೆ. ಹಲವಾರು ವರ್ಷಗಳ ಹೋರಾಟದ ಪ್ರತಿಫಲವಾಗಿ ಜನವರಿಯಲ್ಲಿ ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದೆ. ಧರ್ಮವನ್ನು ನಾವು ಕಾದರೆ ಅದು ನಮ್ಮನ್ನು ಕಾಯುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಲಂಭಾಣಿ ಗುರು ಪೀಠದ ಶ್ರೀ ಸರ್ದಾರ ಸೇವಾಲಾಲ್ ಶ್ರೀಗಳು ತಿಳಿಸಿದರು.

ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ತಾಲೂಕು ಕೇಂದ್ರಗಳಿಗೆ ನಗರದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿತರಣಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

1992ರಲ್ಲಿ ಬಾಬರಿ ಮಸೀದಿ ವಿಷಯದಲ್ಲಿ ನಡುಕವನ್ನುಂಟು ಮಾಡಿತ್ತು. ಆಂದು ಜನರಲ್ಲಿ ಆತಂಕ ಹಾಗೂ ಭಯವನ್ನು ಉಂಟು ಮಾಡಿತ್ತು, ಅಯೋಧ ಎನ್ನುವುದು ಹಿಂದುಗಳಿಗೆ ಶಕ್ತಿ ಕೇಂದ್ರವಾಗಿ ಹೊರ ಹೊಮ್ಮಿದೆ.ಅಯೋದ್ಯೆ ಹಿಂದುಗಳ ಸಂಘಟನೆಯ ಕೇಂದ್ರವಾಗಿದೆ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೂಡ್ಡದಾದ ಹೋರಾಟವೇ ನಡೆದಿದೆ. ನಾವು ಧರ್ಮವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎನ್ನವುದಕ್ಕೆ ಅಯೋಧ್ಯಯ ಶ್ರೀರಾಮ ಮಂದಿರವೇ ಸಾಕ್ಷಿಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಹಲವಾರು ತೊಂದರೆಗಳು ಬಂದರೂ ಸಹಾ ಶ್ರೀರಾಮ ಭಕ್ತಾಧಿಗಳು ಅದನ್ನು ಲೆಕ್ಕಿಸದೇ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೋರಾಟಗಾರರ ಕನಸು ಜನವರಿಯಲ್ಲಿ ಸಾಕ್ಷತ್ಕಾರವಾಗಲಿದೆ. ಧರ್ಮದಲ್ಲಿ ನಡೆಯುವವರಿಗೆ ಜಯ ಖಂಡಿತವಾಗಿರುತ್ತದೆ ಆದರೆ ಅದಕ್ಕಾಗಿ ಕಾಯಬೇಕಿದೆ ಬೇಗ ಅದು ಸಿಗುವುದಿಲ್ಲ ಎಂದರು.

ಅಯೋಧ್ಯೆಯ ಕರ ಸೇವೆಯಲ್ಲಿ ಹಲವಾರು ಜನತೆ ಭಾಗಿಯಾಗಿದ್ದರು ಅದರಲ್ಲಿ ಈಗ ಹಲವಾರು ಜನತೆ ಇಲ್ಲವಾಗಿದ್ದಾರೆ. ಇನ್ನು ಕೆಲವರು ವಯೋವೃದ್ದರಾಗಿದ್ದಾರೆ. ಇವರ ಸೇವೆಯನ್ನು ನಾವುಗಳು ಸ್ಮರಣೆ ಮಾಡಬೇಕಿದೆ ಅವರ ಹೋರಾಟದ ಫಲವಾಗಿ ನಾವುಗಳು ಜನವರಿಯಲ್ಲಿ ಶ್ರೀರಾಮ ಮಂದಿರವನ್ನು ಕಾಣುತ್ತಿದ್ದೇವೆ ಎಂದು ಶ್ರೀಗಳು, ಇಂದು ನೀಡುವ ಮಂತ್ರಾಕ್ಷತೆಯನ್ನು ಜಿಲ್ಲೆಯ ಪ್ರತಿಯೊಂದು ಮನೆ ಮನೆಗೂ ತಲುಪಿಸಬೇಕಿದೆ. ಇದರಿಂದ ಅವರಲ್ಲಿ ಭಕ್ತಿ ಹೆಚ್ಚಾಗುತ್ತದೆ ಎಂದು ಸೇವಾಲಾಲ್ ಶ್ರೀಗಳು ತಿಳಿಸಿದರು.

ಮಾದಾರ ಗುರು ಪೀಠದ ಶ್ರೀ ಇಮ್ಮಡಿ ಕೇತೇಶ್ವರ ಶ್ರೀಗಳು ಮಾತನಾಡಿ, ಹಿಂದುಗಳಿಗೆಲ್ಲಾ 2024ರ ಜನವರಿಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಐತಿಹಾಸಿಕ ದಿನವಾಗಿದೆ. ಇದರಿಂದ ಶ್ರೀರಾಮನಿಗೂ ಸಂತೋಷವಾಗಲಿದೆ. ಇದರ ಬಗ್ಗೆ ಹೋರಾಟವನ್ನು ಮಾಡಿದವರಿಗೂ ಸಹಾ ಜಯ ಸಿಗಲಿದೆ. ಶ್ರೀರಾಮನ ಚರಿತೆಯನ್ನು ಎಲ್ಲರು ತಿಳಿಯಬೇಕಿದೆ. ಧರ್ಮವನ್ನು ಎಲ್ಲರು ಕಾಪಾಡಬೇಕಿದೆ. ನಮಗೆ ಈ ರೀತಿಯಾದ ಕಾರ್ಯಕ್ರಮದಲ್ಲಿ ಬಾಗಿಯಾಗಲು ಅವಕಾಶ ಸಿಕ್ಕಿರುವುದು ಸಂತೋಷವನ್ನು ತಂದಿದೆ. ಇಲ್ಲಿ ನೀಡುವ ಮಂತ್ರಾಕ್ಷತೆಯನ್ನು ಮನೆ ಮನೆಗೂ ತಲುಪಿಸಬೇಕಿದೆ. ಅದು ಎಲ್ಲರ ಕರ್ತವ್ಯವಾಗಿದೆ. ಶ್ರೀರಾಮ ಹಿಂದು ದೇವರಾಗಿದ್ದಾನೆ ಎಂದು ತಿಳಿಸಿದರು.

ವಿಶ್ವ ಹಿಂದು ಪರಿಷತ್‍ನ ಪ್ರಾಂತ ಸಹ ಸಂಯೋಜಕರಾದ ಪ್ರಭಂಜನ್ ಮಾತನಾಡಿ, ರಾಮಾಯಣದಲ್ಲಿ ಸಾಮನ್ಯಜರ ಜೀವನದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬದುಕಿನಲ್ಲಿ ಯಾವ ರೀತಿ ಇರಬೇಕು ಎಂಬುದನ್ನು ರಾಮಾಯಣ ತಿಳಿಸುತ್ತದೆ. ಪ್ರತಿಯೊಂದು ಮನೆಯಿಂದಲೂ ಸಹಾ ಶ್ರೀರಾಮ ಮತ್ತು ಸೀತೆಎಂತಹ ಮಕ್ಕಳ ಜನನವಾಗಬೇಕಿದೆ. ಅದೇ ರೀತಿ ಮನೆಯಲ್ಲಿ ಸಹೋದರರು ರಾಮ ಭರತರಂತೆ ಇರಬೇಕಿದೆ. ರಾಮ ಎಲ್ಲರಿಗೂ ಆದರ್ಶನಾಗಿದ್ಧಾನೆ. ರಾಮನಲ್ಲಿ ಎಲ್ಲಾ ರೀತಿಯ ಒಳ್ಳೇಯ ಗುಣಗಳು ಇವೆ. ಮಂದಿರ ನಿರ್ಮಾಣಕ್ಕೆ ಸುಧೀರ್ಘವಾದ ಹೋರಾಟ ನಡೆದಿದ್ದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮಾತ್ರವಾಗಿದೆ ಎಂದರು.

ಇದೇ ಸಂದರ್ಭಧಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕರೆ, ಹೊಸದುರ್ಗ ಮೊಳಕಾಲ್ಮೂರು ಮತ್ತು ಹಿರಿಯೂರು ತಾಲ್ಲೂಕುಗಳಿಗೆ ಮಂತ್ರಾಕ್ಷಾತೆಯನ್ನು ವಿತರಣೆ ಮಾಡಲಾಯಿತು. ಹಾಗೂ ಕರ ಸೇವಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾದ ಮಧುಕರ್, ವಿಭಾಗ ಸಹಾ ಕಾರ್ಯದರ್ಶಿ ಚಂದ್ರಶೇಖರ್, ಸ್ವಯಂ ಸೇವಕರಾದ ನಾಗರಾಜ್ ಜಿಲ್ಲಾ ಕಾರ್ಯದರ್ಶೀ ರುದ್ರೇಶ್ ಭಾಗವಹಿಸಿದ್ದರು.ಇದಕ್ಕೂ ನಗರದ ರಾಮ ಮಂದಿರದಲ್ಲಿ ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಕರ ಪತ್ರಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು.

ಭೋವಿ ವಸತಿ ಗೃಹದ ಮಕ್ಕಳು ಪ್ರಾರ್ಥನೆ ಸಲ್ಲಿಸಿದರೆ, ಕೇಶವ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ. ಎಸ.ಕೆ.ಬಸವರಾಜನ್, ಮುಖಂಡರಾದ ಅನಿತ್ ಕುಮಾರ್, ರಘುಚಂದನ್, ಮುರಳಿ, ಡಾ,ಸಿದ್ಧಾರ್ಥ, ಮಲ್ಲಿಕಾರ್ಜನ್, ಸುರೇಶ್ ಸಿದ್ದಾಪುರ ಬದರಿನಾಥ್, ಶಿವಣ್ಣಚಾರ್, ವಿಶ್ವನಾಥಯ್ಯ, ಜಿ.ಎಂ.ಸುರೇಶ್, ನಂದಿ ನಾಗರಾಜ್, ಈಶ್ವರಪ್ಪ, ರಾಮದಾಸ್, ತಿಪ್ಪೇಸ್ವಾಮಿ ಬಾಗರಾಜ್ ಬೇದ್ರೇ, ರಂಗನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!