ಇಂದು ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬ. ಅಭಿಮಾನಿಗಳ ಹೃದಯದಲ್ಲಿ ಈಗಲೂ ಜೀವಂತವಾಗಿರುವ ಅಣ್ಣಾವ್ರನ್ನ ಪೂಜಿಸುತ್ತಲೆ ಬಂದಿದ್ದಾರೆ. ಅಭಿಮಾನಿಗಳ ಆರಾಧ್ಯ ದೈವ. ಇಂದು ಅಭಿಮಾನಿಗಳು ಅಣ್ಣಾವ್ರ ಹೆಸರಿನಲ್ಲಿ ನಾನಾ ಸಮಾಜಸೇವೆಯ ಕೆಲಸಗಳನ್ನು ಮಾಡುತ್ತಾ, ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಅಷ್ಟೇ ಅಲ್ಲ ಇವತ್ತು ಆರ್ಸಿಬಿ ಕೂಡ ಅಣ್ಣಾವ್ರ ನೆನಪನ್ನು ಮೆಲುಕು ಹಾಕಿದೆ.
"ನಾವಾಡುವ ನುಡಿಯೇ ಕನ್ನಡ ನುಡಿ." ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ|| ರಾಜ್ ಕುಮಾರ್ ಅವರ 93ನೆ ಜನ್ಮಮಹೋತ್ಸವದ ನೆನಪಿನಲ್ಲಿ. ❤️
Remembering one of the greatest icons of Kannada and Indian cinema, Dr. Rajkumar on his birth anniversary! 🙏#ನಮ್ಮRCB #DrRajkumar pic.twitter.com/hYU8Xi0UaA
— Royal Challengers Bengaluru (@RCBTweets) April 24, 2022
ಆರ್ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಣ್ಣಾವ್ರಿಗೆ ವಿಶೇಷ ವಾಗಿ ಶುಭಕೋರಿದ್ದಾರೆ. “ನಾವಾಡುವ ನುಡಿಯೇ ಕನ್ನಡ ನುಡಿ.” ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ|| ರಾಜ್ ಕುಮಾರ್ ಅವರ 93ನೆ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಟ್ವೀಟ್ ಮಾಡಿದೆ.
ಈ ಟ್ವೀಟ್ ನೋಡಿ ಅಣ್ಣಾವ್ರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಣ್ಣಾವ್ರ ಹಾಡಿನ ಮೂಲಕವೇ ಅಣ್ಣಾವ್ರಿಗೆ ವಿಶ್ ಮಾಡಿರುವುದು ಸಂತಸ ತಂದಿದೆ. ಇದೇ ನಿಟ್ಟಿನಲ್ಲಿ ಇಂದು ಅಣ್ಣಾವ್ರ ಸ್ಮಾರಕದ ಬಳಿ ಜನ ಸಾಗರವೇ ಸೇರಿತ್ತು. ಸಮಾಧಿಗೆ ನಮಸ್ಕರಿಸಿದರು. ಸಮಾಧಿ ಬಳಿಯೇ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಕುಟುಂಬಸ್ಥರು ಕೂಡ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅಣ್ಣಾವ್ರ ಇಂದಿಗೂ ಸಾಕಷ್ಟು ಜನರ ಜೀವನಕ್ಕೆ ಮಾದರಿಯಾಗಿಯೇ ಇದ್ದಾರೆ. ಅವರ ಸಿನಿಮಾಗಳಿಂದ ಅದೆಷ್ಟೋ ಜನ ಈಗಲೂ ಬದಲಾವಣೆಯತ್ತ ಸಾಗುತ್ತಲೆ ಇದ್ದಾರೆ.