ಇತ್ತಿಚೆಗಷ್ಟೇ ಗೆಲುವಿನ ಹಾದಿಯಲ್ಲಿ ಆರ್ಸಿಬಿ : ಇಂದು ನಡೆಯಬೇಕಿದ್ದ ಮ್ಯಾಚ್ ರದ್ದಾಗುತ್ತಾ..?

ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಮಳೆರಾಯನ ದರ್ಶನವಾಗಿದೆ. ಎಲ್ಲೆಲ್ಲೂ ಉತ್ತಮ ಮಳೆ ಬಂದಿದೆ. ಇನ್ನು ಮೂರು ದಿನಗಳ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಇದು ಕ್ರಿಕೆಟ್ ಪ್ರಿಯರಿಗೆ ಮ್ಯಾಚ್ ಬಗ್ಗೆ ಚಿಂತೆ ಹೆಚ್ಚಿಸಿದೆ‌.

ಇಂದು ಗುಜರಾತ್ ಟೈಮ್ಸ್ ಎದುರು ಆರ್ಸಿಬಿ ಮ್ಯಾಚ್ ನಡೆಯಬೇಕಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ತಂಡ ಇತ್ತಿಚೆಗೆ ಎರಡು ಮ್ಯಾಚ್ ಗಳಲ್ಲಿ ಭರ್ಜರಿಯಾಗಿ ಗೆಲುವು ಕಂಡಿತ್ತು. ಹತ್ತು ಪಂದ್ಯಗಳಲ್ಲಿ ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದಿತ್ತು. ಸದ್ಯ ನೆಟ್ ರನ್ ರೇಟ್ ಕೂಡ ಸುಧಾರಿಸಿದೆ. ಆದರೆ ಈಗಿರುವಾಗಲೇ ಪಂದ್ಯಗಳು ಕ್ಯಾನ್ಸಲ್ ಆಗುವ ಸಾಧ್ಯತೆ ಆರ್ಸಿಬಿ ಫ್ಯಾನ್ಸ್ ಗೆ ಬೇಸರ ತರಿಸಿದೆ.

ಈಗಂತೂ ವಿರಾಟ್, ದಿನೇಶ್ ಕಾರ್ತಿಕ್, ಫಾಫ್, ರಜತ್ ಪಾಟಿದಾರ್, ವಿಲ್ ಜಾಕ್ಸ್ ಎಲ್ಲರು ತಮ್ಮ ತಮ್ಮ ಫಾರ್ಮ್ ಗೆ ಮರಳಿದ್ದಾರೆ‌ ಈಗ ಗುಜರಾತ್ ಟೈಟನ್ಸ್ ನ ಕಡೆಗಣಿಸುವಂತೆ ಇಲ್ಲ. ಆದರೆ ಇಂದು ಕೂಡ ಬೆಂಗಳೂರಿನಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ರಾತ್ರಿ ಮಳೆ ಬರುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ಕೊಟ್ಟಿದೆ. ವಾತಾವರಣ ಕೂಡ ಕೊಂಚ ಕೂಲಾಗಿದೆ. ಹೀಗಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆರಂಭದಲ್ಲಿ ಸತತ ಸೋಲು ಕಾಣುತ್ತಿದ್ದರು, ಆರ್ಸಿಬಿ ಮುಂದೆ ಗೆದ್ದೆ ಗೆಲ್ಲುತ್ತದೆ ಎಂಬ ದಿಡ್ಡ ಕನಸು ಅಭಿಮಾನಿಗಳದ್ದು. ಅದರಲ್ಲೂ ಇತ್ತಿಚೆಗೆ ಎರಡು ಮ್ಯಾಚ್ ಗೆದ್ದ ಮೇಲಂತು ಕಪ್ ಗೆದ್ದಷ್ಟೇ ಖುಷಿಯಾಗಿದ್ದಾರೆ. ಹೀಗಿರುವಾಗ ಮಳೆಯಿಂದಾಗಿ‌ಪಂದ್ಯ ರದ್ದಾದರೆ ಅಭಿಮಾನಿಗಳ ಎದೆ ಹೊಡದೆ ಹೋಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *