Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಬೆನ್ನಲ್ಲೇ ಹೆಣ್ಣು ಮಕ್ಕಳಲ್ಲಿ ಭಯ..!

---Advertisement---

ತಂತ್ರಜ್ಞಾನ ಬೆಳೆದಷ್ಟು ಸಮಾಜದಲ್ಲಿ ಆತಂಕ ಹುಟ್ಟಿಸುವ ಘಟನೆಗಳು ಹೆಚ್ಚಾಗುತ್ತವೆ. ಅದರಲ್ಲಿ ಈ ಡೀಪ್ ಫೇಕ್ ವಿಡಿಯೋ ಕೂಡ ಒಂದು. ಇತ್ತಿಚೆಗೆ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಎಲ್ಲೆಡೆ ಹಲ್ ಚಲ್ ಕ್ರಿಯೇಟ್ ಮಾಡಿತ್ತು. ಒಂದು ಕ್ಷಣ ನೋಡಿದವರೆಲ್ಲ, ರಶ್ಮಿಕಾ ಯಾಕಿಂಗಾದ್ರೂ ಅಂತಾನೇ ಪ್ರಶ್ನೆ ಹಾಕಿಕೊಂಡಿದ್ದರು. ಆ ವಿಡಿಯೋ ರಶ್ಮಿಕಾ ಮಂದಣ್ಣನಿಗೂ ಶಾಕ್ ಎನಿಸಿತ್ತು. ಅದಕ್ಕೆ ನಟಿ ಕ್ಲಾರಿಟಿಯನ್ನು ನೀಡಿದ್ದರು. ಈ ವಿಡಿಯೋ ನನ್ನ ರಿಯಲ್ ವಿಡಿಯೋ ಅಲ್ಲ ಅಂತ.

ರಶ್ಮಿಕಾ ಮಂದಣ್ಣ ಆ ವಿಡಿಯೋ ನನ್ನದಲ್ಲ ಎಂದು ಹೇಳುವ ತನಕ ಅದನ್ನ ರಿಯಲ್ ಎಂದೇ ಭಾವಿಸಿದ್ದರು. ಆದರೆ ಅದ್ಯಾವಾಗ ಫೇಕ್ ವಿಡಿಯೋ ಎಂದು ಗೊತ್ತಾಯ್ತೋ ಅಂದಿನಿಂದ ಹೆಣ್ಣು‌ ಮಕ್ಕಳಲ್ಲಿ ಆತಂಕ ಮನೆ ಮಾಡಿದೆ. ರಶ್ಮಿಕಾ ಮಂದಣ್ಣ ಕೂಡ ಆ ಪ್ರಶ್ನೆಯನ್ನೇ ಎತ್ತಿದ್ದಾರೆ. ನಟಿಯಾಗಿರುವಾಗ ಇಂಥ ವಿಡಿಯೋಗಳು ಬಂದಿದೆ. ಈಗ ನನ್ನ ಬೆಂಬಲಕ್ಕೆ ಪೋಷಕರು, ಅಭಿಮಾನಿಗಳು ನಿಂತಿದ್ದಾರೆ. ಒಂದು ವೇಳೆ ನಾನು ಕಾಲೇಜಿನಲ್ಲಿ ಇರಬೇಕಾದಾಗ ಈ ರೀತಿ ಆಗಿದ್ದರೆ ಎಂದೇ ಆತಂಕ ವ್ಯಕ್ತಪಡಿಸಿದ್ದಾರೆ.

ಡೀಪ್ ಫೇಕ್ ನಟಿಯರ ಮುಖಗಳನ್ನು ಬಳಸಿಕೊಂಡು ಮಾಡಲಾಗುತ್ತಿದೆ. ಶಕ್ತಿಶಾಲಿ ಕಂಪ್ಯೂಟರ್ ಟೆಕ್ನಾಲಜಿಗಳನ್ನು ಬಳಸಿಕೊಂಡು, ಒಬ್ಬ ವ್ಯಕ್ತಿಯ ಮುಖದೊಂದಿಗೆ ಇನ್ನೊಬ್ಬ ವ್ಯಕ್ತಿಯ ಮುಖವನ್ನು ಬದಲಾಯಿಸಿ, ಸೃಷ್ಟಿಸುವ ನಕಲಿ ವಿಡಿಯೋ ಇದಾಗಿದೆ. ಸದ್ಯಕ್ಕೆ ಈ ಟೆಕ್ನಾಲಜಿ ಬಳಸಿ ವೈರಲ್ ಮಾಡುತ್ತಿರುವ ವಿಡಿಯೋಗಳು ಅಸಹ್ಯವನ್ನೇ ಹುಟ್ಟಿಸುತ್ತಿವೆ. ಒಳ್ಳೆಯ ರೀತಿಯ ವಿಡಿಯೋಗಳಾಗಿ ಹೊರ ಬರುತ್ತಿಲ್ಲ. ಇದು ಸಹಜವಾಗಿಯೇ ಹೆಣ್ಣು ಮಕ್ಕಳ ಆತಂಕಕ್ಕೆ ಕಾರಣವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment