Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಶ್ಮಿಕಾಗೆ ಸಿಕ್ತು ವಿಜಯ್ ದೇವರಕೊಂಡ ಕುಟುಂಬದ ಆಭರಣ..!

---Advertisement---

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೀತಾ ಇದೆ. ರಾಜಸ್ಥಾನದ ಉದಯಪುರದ ವಿಲ್ಲಾದಲ್ಲಿ ಮದುವೆ ತಯಾರಿಗಳು ನಡೀತಾ ಇದ್ದು, ಈಗಾಗಲೇ ಕುಟುಂಬಸ್ಥರು, ಆತ್ಮೀಯರು ಉದಯಪುರಕ್ಕೆ ತಲುಪಿದ್ದಾರೆ. ಶಾಸ್ತ್ರಗಳು ಕೂಡ ನಡೆಯುತ್ತಿವೆ. ಇದರ ಜೊತೆಗೆ ವಿಹಯ್ ದೇವರಕೊಂಡ ಅವರ ಕುಟುಂಬದ ಒಡವೆಗಳು ಕೂಡ ರಶ್ಮಿಕಾ ಅವರ ಕೈಸೇರಿದೆ.

ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಅವರು, ಸಂಪ್ರದಾಯದಂತೆ ರಶ್ಮಿಕಾ ಅವರಿಗೆ ಚರಾಸ್ತಿಯ ಬಳೆಗಳನ್ನ ನೀಡಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರಿಗೆ ಬಳೆಗಳನ್ನ ನೀಡಿ, ಹಾರೈಸಿದ್ದಾರೆ ಎನ್ನಲಾಗಿದೆ. ನಾಳೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರು ಅಧಿಕೃತವಾಗಿ ದಂಪತಿಯಾಗುತ್ತಿದ್ದಾರೆ. ಬಹಳ ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಪ್ರೇಮಿಗಳು ತಮ್ಮ ಪ್ರೀತಿಯನ್ನ ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದರು. ಮದುವೆಯ ಎಲ್ಲಾ ತಯಾರಿಗಳು ನಡೆದಿದ್ದರು, ಈ ಬಗ್ಗೆ ಸತ್ಯ ಹೇಳಿರಲಿಲ್ಲ. ಆದರೆ ಕಳೆದ ವಾರವಷ್ಟೇ ವಿಜಯ್ ಹಾಗೂ ರಶ್ಮಿಕಾ ಈ ವಿಚಾರವನ್ನ ಹಂಚಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ತಮ್ಮ‌ಮದುವೆಯ ಆರತಕ್ಷತೆಗೆ ಕನ್ನಡದ ಸ್ಟಾರ್ ನಟರನ್ನು ಆಹ್ವಾನಿಸಿರುವುದು ವಿಶೇಷವಾಗಿದೆ. ಶಿವಣ್ಣ, ಸುದೀಪ್, ಯಶ್, ಸಿಂಪಲ್ ಸುನಿ, ನಂದಕಿಶೋರ್, ಎ ಹರ್ಷ ಅವರನ್ನು ಮದುವೆಗೆ ಆಹ್ವಾನ ಮಾಡಿದ್ದಾರೆ. ಇನ್ನು ನಟಿಯನ್ನು ಆಹ್ವಾನ ಮಾಡಿದ್ದು, ಆಶಿಕಾ ರಂಗನಾಥ್ ಮದುವೆಗೆ ಹಾಜರಾಗಿದ್ದಾರೆ. ಫ್ಯಾಮಿಲಿ, ಫ್ರೆಂಡ್ಸ್ ಸೇರಿ 100 ಜನರಿಗೆ ಮಾತ್ರ ಮದುವೆಯಲ್ಲಿ ಆಹ್ವಾನ ನೀಡಿದ್ದಾರೆ. ಮಾರ್ಚ್ 4ರಂದು ಅದ್ದೂರಿಯಾಗಿ ನಡೆಯುವ ಆರತಕ್ಷತೆಗೆ ಟಾಲಿವುಡ್, ಬಾಲಿವುಡ್ ಸ್ನೇಹಿತರನ್ನು ಆಹ್ವಾನಿಸಿದ್ದಾರೆ. ಸದ್ಯ ರಶ್ಮಿಕಾ ಹಾಗೂ ವಿಜಯ್ ಮದುವೆ ಟ್ರೆಂಡಿಂಗ್ ನಲ್ಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರೇಣುಕಾಸ್ವಾಮಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌: ಬೆದರಿಕೆ ಪ್ರಕರಣದ ಉದ್ಯಮಿ ಜೊತೆ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದೇಕೆ?

ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ: ಮಾಯಕೊಂಡ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದ ಬದ್ಧ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ

ಕಾವ್ಯ ಬರೆಯುವುದು, ಕಟ್ಟುವುದು ಹೃದಯಕ್ಕೆ ಸಂಬಂಧಿಸಿದ ಕೆಲಸ: ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ

ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದವನ ವಿರುದ್ಧ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು : ಬೊಮ್ಮಾಯಿ

ಬಾಂಗ್ಲಾದೇಶದಲ್ಲಿ ನಿವೃತ್ತ ಶಿಕ್ಷಕ ಸೇರಿ ಒಂದೇ ಕುಟುಂಬದ ನಾಲ್ವರ ಸಾವು : ಮನೆಯಲ್ಲಿ ಮೃತದೇಹಗಳು ಪತ್ತೆ.!