Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಂಗಭೂಮಿ ಎಲ್ಲ ಮಾಧ್ಯಮಗಳಿಗಿಂತ ಪರಿಣಾಮಕಾರಿ : ಬಿ.ಧನಂಜಯ

Facebook
Twitter
Telegram
WhatsApp

ಚಿತ್ರದುರ್ಗ : ರಂಗಭೂಮಿ ಎಲ್ಲ ಮಾಧ್ಯಮಗಳಿಗಿಂತ ಪರಿಣಾಮಕಾರಿ ಮಾಧ್ಯಮ ಹಾಗಾಗಿ ಅದನ್ನು ಎಲ್ಲರಿಗೂ ತಲುಪಿಸುವ ಕೆಲಸವಾಗಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ವಾರ್ತಾಧಿಕಾರಿ ಬಿ.ಧನಂಜಯ ತಿಳಿಸಿದರು.

ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಭಾನುವಾರ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ತಲೆಮಾರಿನ ಜನಕ್ಕೆ ರಂಗಭೂಮಿಯಲ್ಲಿ ಇಂದಿಗೂ ಸಹ ಆಸಕ್ತಿ ಇದೆ. ಆದರೆ ಇಂದಿನ ಯುವ ಜನಾಂಗ ರಂಗಭೂಮಿಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಅದರ ಬಗ್ಗೆ ಹಿರಿಯ ರಂಗಕರ್ಮಿಗಳು ಚಿಂತನೆ ಮಾಡಿ ಯುವ ಜನಾಂಗವನ್ನು ರಂಗಭೂಮಿಯಲ್ಲಿ ತೋಡಗಿಸಿಕೊಳ್ಳುವಂತೆ ಮಾಡಬೇಕಿದೆ. ಟಿವಿಯಲ್ಲಿ ಬರುವ ನಾನಾ ಮನೋರಂಜನಾ ಕಾರ್ಯಕ್ರಮಗಳಿಗೆ ಸಿಗುತ್ತಿರುವ ಮಹತ್ವ ಪರಿಣಾಮಕಾರಿಯಾಗಿರುವ ನಾಟಕಗಳಿಗೆ ಸಿಗುತ್ತಿಲ್ಲ. ನಾಟಕಗಳಲ್ಲಿ ಪರಿಣಾಮಕಾರಿ ಕಥಾವಸ್ತು ಇದ್ದರೂ ಸಹ ಜನ ಟವಿ ಮಾಧ್ಯಮಕ್ಕೆ ಮಾರುಹೋಗಿದ್ದಾರೆ. ಯುವ ಜನಾಂಗವನ್ನು ಸೆಳೆಯುವಂತಹ ಕಥಾವಸ್ತುಗಳನ್ನು ನಾಟಕಗಳಲ್ಲಿ ಅಳವಡಿಸಿ ಅವರನ್ನು ರಂಗಭೂಮಿಯತ್ತ ಸೆಳೆಯಬೇಕಿದೆ ಎಂದರು.

ರಂಗಭೂಮಿ ಎಷ್ಟು ಪ್ರಭಾವಶಾಲಿ ಮಾಧ್ಯಮ ಎಂದರೆ ಅನೇಕ ಹೋರಾಟ ಹಾಗೂ ಚಳುವಳಿಗಲ್ಲಿ ಹೋರಾಟಗಾರರು ತಮ್ಮ ಗಾಯನ ಹಾಗೂ ಅಭಿನಯದ ಮೂಲಕ ಒಂದು ವಿಚಾರವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಮಾಸ್ಟರ್ ಹಿರಣಯ್ಯ. ಅವರು ತಮ್ಮ ನಾಟಕಗಳ ಮೂಲಕ ತೀಕ್ಷ್ಣವಾದ ಮಾತುಗಳಿಂದ ಸಮಾಜದ ಹಾಗೂ ಸರಕಾರದ ಬಗ್ಗೆ ಕೊರತೆಗಳನ್ನು ಜನರಿಗೆ ತಲುಪಿಸುತ್ತಿದ್ದರು ಎಂದರು.

ಸಾಹಿತಿ ಡಾ.ಅಶೋಕ್‍ಕುಮಾರ್ ಸಂಗೇನಹಳ್ಳಿ ಮಾತಾನಾಡಿ, ರಂಗಭೂಮಿಯ ಮೂಲ ಬೇರು ಗ್ರೀಕ್, ನೃತ್ಯ, ಸಂಗೀತ ಜೊತೆಗೆ ಸಂಭಾóಷಣೆಯ ರೀತಿಯಲ್ಲಿ ನಾಟಕಗಳನ್ನು ಕಟ್ಟಿಕೊಟ್ಟರು. ಭಾರತೀಯ ರಂಗಭೂಮಿಯಲ್ಲಿ ವಿವಿಧ ಹಂತಗಳಿವೆ. ಭಾರತದಲ್ಲಿ ವಿಶೇಷವಾಗಿ ಜಾನಪದ ರಂಗಭೂಮಿಯ ಮೂಲಕವೇ ರಾಮಾಯಣ ಮಹಾಭಾರತದಂತಹ ಕಥೆಗಳು ರಂಗಭೂಮಿಯ ಮೂಲ ಕಥಾವಸ್ತುಗಳಾಗಿ ಜೀವನದ ನೈತಿಕ ಮೌಲ್ಯಗಳನ್ನು ಬಿತ್ತುವ ನಾಟಕಗಳು ಪ್ರದರ್ಶನ ಕಂಡಿವೆ. ಬ್ರೀಟಿಷರ ಕಾಲಘಟ್ಟದಲ್ಲಿ ಮಧ್ಯಮ ವರ್ಗದವರ ಮನೋರಂಜನೆಗಾಗಿ ಆಳುವವರ ಮತ್ತು ದುಡಿಯುವವರ ನಡುವೆ ವೃತ್ತಿ ರಂಗಭೂಮಿ ಹುಟ್ಟನ್ನು ಪಡೆಯಿತ್ತು. ಇದರಿಂದ ಅನೇಕ ಕುಟುಂಬಗಳು ನೆಮ್ಮದಿಯ ಬದುಕನ್ನು ಕಟ್ಟಿಕೊಂಡವು. ಕಲ್ಕತ್ತಾದಲ್ಲಿ ಮೊಟ್ಟಮೊದಲ ಬಾರಿಗೆ ವಿಧ್ಯಾಸುಂದರಾನ್ ನಾಟಕ ಪ್ರದರ್ಶನ ಕಂಡಿತ್ತು. ಇದರ ಪ್ರೇರೇಪಣೆಯಿಂದ ಮಹಾರಾಷ್ಟ್ರದಲ್ಲಿ ಮರಾಠಿ ರಂಗಭೂಮಿ ಹುಟ್ಟಿಕೊಂಡಿತು. ಮರಾಠಿ ನಾಟಕಗಳ ಪ್ರಭಾವ ಅಂದಿನ ಕಾಲದಲ್ಲಿ ಅಧಿಕವಾಗಿತ್ತು. ಮರಾಠಿ ರಂಗಭೂಮಿಯ ಪ್ರಭಾವದಿಂದ ಕರ್ನಾಟಕದಲ್ಲಿ ರಂಗಭೂಮಿ ಚಟುವಟಿಕೆಗಳು ಪ್ರಾರಂಭಗೊಂಡವು. ಗದಗ್‍ನಲ್ಲಿ ಶಾಂತಕವಿಗಳು ಚುರಮುರಿ ಶೇಷಗಿರಿರಾಯರ ಶಾಕುಂತಲ ನಾಟಕವನ್ನು ಪ್ರದರ್ಶನ ನೀಡಿದರು. ಹೀಗೆ ಬೆಳದು ಬಂದ ರಂಗಭೂಮಿ ಇಂದು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಮತ್ತು ಬೆಳೆಸುವ ಹಂತಕ್ಕೆ ಬಂದು ತಲುಪಿದೆ ಎಂದರು.

ಇದೇ ಸಂದರ್ಭದಲ್ಲಿ ಕಲಾವಿದರಿಗೆ ರಂಗ ತಾಲೀಮು ಮಾಡಲು ಸ್ಥಳ ನೀಡುವಂತೆ ಸ್ಥಳೀಯ ಕಲಾವಿದರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಲಾವಿದ ಚೆನ್ನಬಸಣ್ಣ ಮತ್ತು ತಂಡದವರು ರಂಗ ಗೀತೆಗಳನ್ನು ಹಾಡಿದರು. ಹಿರಿಯ ರಂಗಭೂಮಿ ಕಲಾವಿದೆ ಎಚ್.ಸಿ.ಪದ್ಮಾ ರಂಗ ಉಪನ್ಯಾಸ ನೀಡಿದರು.
ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಅಧ್ಯಕ್ಷೆ ಅನುಸೂಯ ಬಾದರದಿನ್ನಿ, ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ರಂಗ ನಿರ್ದೇಶಕ ಧೀಮಂತ, ಕಲಾವಿದ ಶ್ರೀಕುಮಾರ, ಜನಪದ ಕಲಾವಿದ ಕಾಲ್ಕೆರೆ ಚಂದ್ರಪ್ಪ, ಕಲಾವಿದರಾದ ಯುವರಾಜ್, ಗುರುಕಿರಣ, ಸ್ಪೂರ್ತಿ ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇದೆಲ್ಲಾ ಮಾಡಿಸಿದ್ದು ಡಿಕೆಶಿ.. ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ : ವಕೀಲ ದೇವರಾಜೇಗೌಡ ಶಾಕಿಂಗ್ ಹೇಳಿಕೆ..!

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ನಾಯಕ, ವಕೀಲ ದೇವರಾಜೇಗೌಡರನ್ನು ಪೊಲೀಸರು ಅರೆಸ್ಟ್ ಮಾಡಿ, ತನಿಖೆ ಚುರುಕುಗೊಳಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಇಂದು ಕೋರ್ಟ್ ಮುಂದೆ ದೇವರಾಜೇಗೌಡರನ್ನು ಹಾಜರುಪಡಿಸಿದ್ದರು. ಹೆಚ್ಚಿನ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರವನ್ನು ಕೆಡವಲಿದೆ : ನರೇಂದ್ರ ಮೋದಿ

ಸುದ್ದಿಒನ್ : ದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಜೋರಾಗಿದೆ. ಚುನಾವಣೆ ಅಂತಿಮ ಘಟ್ಟ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಮತ್ತು ಪ್ರತಿಪಕ್ಷಗಳು ಪರಸ್ಪರ ಟೀಕೆಗಳ ಮೂಲಕ ಪ್ರಚಾರದ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ

ಮೋದಿ ಬಗ್ಗೆ ಹೊಗಳಿದ್ದ ನಟಿ : ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ ಮಂದಣ್ಣ..!

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹ್ಯಾಟ್ರಿಕ್ ಬಾರಿಸುವ ಕನಸು ಕಾಣುತ್ತಿದ್ದಾರೆ ಮೋದಿ. ಈ ಮಧ್ಯೆ ರಶ್ಮಿಕಾ ಮಂದಣ್ಣ ಮೋದಿಯವರ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಚರ್ಚೆಗೆ ಬಂದಿದ್ದು, ಪರ-ವಿರೋಧ ಕೇಳಿ ಬರುತ್ತಿದೆ. ರಶ್ಮಿಕಾ

error: Content is protected !!