ಬೆಂಗಳೂರು: ದರ್ಶನ್ ಅಭಿಮಾನಿಗಳ ಹೆಸರಲ್ಲಿ ಒಂದಷ್ಟು ಜನ ರಮ್ಯಾ ವಿರುದ್ಧವೇ ಕೆಟ್ಟ ಕಮೆಂಟ್ ಗಳನ್ನ ಹಾಕಿ ಜೈಲು ಪಾಲಾಗಿದ್ದರು. ಇದೀಗ ಅವರನ್ನ ಕ್ಷಮಿಸ್ತಾ ಇದ್ದೀನಿ ಅಂತ ರಮ್ಯಾ ಅವರೇ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಮ್ಯಾ, ಆರೋಪಿಗಳನ್ನು ನಾನು ಯಾವಾಗಲೋ ಕ್ಷಮಿಸಿದ್ದೇನೆ. ಆದರೆ ಈ ರೀರಿ ಯಾರಿಗೂ ಮಾಡಬಾರದು ಅನ್ನೋದು ನನ್ನ ಉದ್ದೇಶ. ಇದು ಮತ್ತೆ ರಿಪೀಟ್ ಆಗಲ್ಲ ಎಂದು ಭಾವಿಸಿದ್ದೇನೆ. ಅವರಿಗೆ ಶಿಕ್ಷೆ ಕೊಡಬೇಕು ಅನ್ನೋ ಉದ್ದೇಶ ಇರಲಿಲ್ಲ. ಹೆಣ್ಣು ಮಕ್ಕಳ ವಿಚಾರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕಿತ್ತು. ನ್ಯಾಯಾಲಯದ ಮೂಲಕ ಬುದ್ಧಿ ಹೇಲಕಬೇಕಿತ್ತು ಈಗ ಎಲ್ಲರು ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ತಪ್ಪು ಮಾಡಿದವರ ಕುಟುಂಬ ನನ್ನ ಕ್ಷಮೆ ಕೇಳುವುದು ಬೇಡ. ನನಗೆ ಕ್ಷಮೆ ಕೇಳುವ ಬದಲು ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ. ಫೋನ್ ಇದೆ, ಡೇಟಾ ಇದೆ ಅಂತ ಹೀಗೆ ಮಾಡಬಾರದು ಎಂದಿದ್ದಾರೆ.

ಇನ್ನು ರಮ್ಯಾ ಕೊಟ್ಟ ದೂರಿನ ಆಧಾರದ ಮೇಲೆ ಕೆಟ್ಟ ಕಮೆಂಟ್ ಹಾಕಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಕೆಲ ದಿನಗಳ ಬಳಿಕ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದರು. ತಮ್ಮ ಮನೆಯ ಮಗ ಮಾಡಿದ ತಪ್ಪನ್ನು ಕ್ಷಮಿಸಬೇಕು. ಇಡೀ ಕುಟುಂಬ ಸಂಕಷ್ಟದಲ್ಲಿದೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ಕ್ಷಮಿಸಬೇಕು ಎಂದು ಕೇಳಿಕೊಂಡಿತ್ತು. ಆ ಕುಟುಂಬಗಳ ಕಣ್ಣೀರಿಗೆ ಕರಗಿದ ನಟಿ ರಮ್ಯಾ, ಕಡೆಗೂ ಆರೋಪಿಗಳನ್ನ ಕ್ಷಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಹಾಕುವವರಿಗೆ ಇದೊಂದು ದೊಡ್ಡ ಪಾಠವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










