ಬೆಳಗಾವಿ: ಸಿಡಿ ಕೇಸ್ ವಿಚಾರಕ್ಕೆ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ನಡೆಸಿ, ಡಿಕೆಶಿ ವಿರುದ್ಧ ನೇರವಾಗಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನನ್ನ ಮತ್ತು ಡಿಕೆಶಿ ಸಂಬಂಧ ಹಾಳಾಗುವುದಕ್ಕೆ ಗ್ರಾಮೀಣ ಶಾಸಕಿಯೇ ಕಾರಣ ಎಂದಿದ್ದಾರೆ.
ಅಂದು ಅಧಿವೇಶನದಲ್ಲಿ ಇದ್ದೆ. ಆಗ ಒಬ್ಬ ಕರೆ ಮಾಡಿ ಗ್ರಾಮೀಣ ಶಾಸಕಿ ಆಡಿದ್ದ ಮಾತನ್ನು ಹೇಳಿದ. ಕಿತ್ತೂರು ರಾಣಿ ಚನ್ನಮ್ಮ ಬಗ್ಗೆ ಈ ಯಮ್ಮಾ ಮಾತಾಡ್ತಾರೆ. ಅವರ ಬಗ್ಗೆ ಹೀಗೆಲ್ಲಾ ಮಾತಾಡ್ತಾ ಅಂದ. ಆಗ ನಾನು ಕೆಟ್ಟ ಶಬ್ದ ಮಾತಾನಾಡಿದೆ. ಆ ಶಾಸಕಿಗೆ ಮಾತನಾಡಿದೆ. ಅದೇ ಆಡಿಯೋವನ್ನು ಜೋಡಿಸಿ, ಕಿತ್ತೂರು ರಾಣಿ ಚನ್ನಮ್ಮ ಬಗ್ಗೆ ಜೋಡಿಸಿ, ಕಿತ್ತೂರು ರಾಣಿ ಚನ್ನಮ್ಮ ಬಗ್ಗೆ ಅವಹೇಳನ ಮಾಡಿದ್ದಾರೆ ಅಂತ ಕಟ್ ಅಂಡ್ ಪೇಸ್ಟ್ ಮಾಡಿ ಚುನಾವಣೆ ಸಂದರ್ಭದಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ.
ಆ ಆಡಿಯೋ ರಿಲೀಸ್ ಮಾಡಿ ಸಂಘರ್ಷ ಆದ್ರೆ ನೇರ ಹೊಣೆ ಗ್ರಾಮೀಣ ಶಾಸಕಿ ಹಾಗೂ ಡಿಕೆ ಶಿವಕುಮಾರ್. ನಾನು ಮಾತನಾಡಿದ್ದೀನಿ ಸತ್ಯ. ಆದ್ರೆ ಅದು ಆ ಗ್ರಾಮೀಣ ಶಾಸಕಿಗೆ ಮಾತನಾಡಿರುವುದು. ಡಿಕೆಶಿ ಹಾಗೂ ನನ್ನ ಸಂಬಂಧ ಹಾಳಾಗಿದ್ದೆ ಆ ಶಾಸಕಿಯಿಂದ.
ಕಿತ್ತೂರು ರಾಣಿ ಚೆನ್ನಮ್ಮ ಎಂಥಾ ಮಹಿಳೆ. ಅವರಿಗೆ ಹೋಲಿಕೆ ಮಾಡಿ ಲಿಂಗಾಯತ ಸಮುದಾಯದ ನಾಯಕ ಮಾತನಾಡಿದ್ದ. ಆಗ ನಾನು ಡ್ಯಾಶ್ ಡ್ಯಾಶ್ ಎಂದು ಬೈದಿದ್ದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದಿದ್ದಾರೆ. ಮುಂದೆ ಕಾಂಗ್ರೆಸ್ ಹಾಳಾಗುವುದಕ್ಕೆ ಕಾರಣ ಡಿಕೆಶಿ ಕಂಪನಿ ಹಾಗೂ ವಿಷಕನ್ಯೆ ಕಾರಣ ಎಂದಿದ್ದಾರೆ.