ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಆ ಸಿಡಿ ವಿಚಾರವನ್ನು ರಮೇಶ್ ಜಾರಕಹೊಳಿ ಅವರೇ ತೆಗೆದಿದ್ದಾರೆ. ಈ ಸಂಬಂಧ ಮಹಾನಾಯಕನ ಆಡಿಯೋ ರಿಲೀಸ್ ಮಾಡಲು ಸುದ್ದಿಗೋಷ್ಠಿ ನಡೆಸಿದ್ದಾರೆ.
ಒಂದೂವರೆ ವರ್ಷದಿಂದ ಸಮಾಧಾನದಿಂದ ಕೂತಿದ್ದೆ. ನನ್ನ ವಿರೋಧ ಮಾಡುವವರು ನಾನು ಹೆದರಿದ್ದೇನೆ ಅಂದುಕೊಂಡಿದ್ದರು. ನಂಗೆ ಹೊಡೆದಂತೆ ನಾನು ಸಮಯ ನೋಡಿ ಹೊಡೆಯಬೇಕು ಅಂತ ಇದ್ದೆ. ಈಗ ಚುನಾವಣೆ ಸಮಯ ಅದಕ್ಕೆ ಈಗ ಬಹಿರಂಗ ಪಡಿಸುತ್ತಿದ್ದೇನೆ.
ಮಿಸ್ಟರ್ ಡಿ.ಕೆ. ಶಿವಕುಮಾರ್ ರಾಜಕೀಯ ಮಾಡುವುದಕ್ಕೆ ಲಾಯಕ್ಕು ಇಲ್ಲ. ಈ ರೀತಿ ವೈಯಕ್ತಿಕವಾಗಿ ಮಾಡಬಾರದು. ರಾಜಕಾರಣದಲ್ಲಿ ಷಡ್ಯಂತ್ರ ಮಾಡಿ, ವೈಯಕ್ತಿಕ ಜೀವನ ಹಾಳು ಮಾಡಿದ್ರೆ ಅವನು ರಾಜಕಾರಣಕ್ಕೆ ನಾಲಾಯಕ್ಕು. ಸಿಡಿ ವಿಚಾರದಲ್ಲಿ ನನ್ನ ಬಳಿ ಎವಿಡೆನ್ಸ್ ಇದೆ. ಮಾಧ್ಯಮದಲ್ಲಿ ಬಿಡಲ್ಲ. ನೇರವಾಗಿ ಸಿಐಡಿಗೆ ಕೊಡ್ತೀನಿ. ಡಿಕೆ ಶಿವಕುಮಾರ್ ಗೆ ಸಂಬಂಧಿಸಿದ ಸಣ್ಣ ಝಲಕ್ ತೋರಿಸುತ್ತೇನೆ. ಇದೊಂದು ಕ್ರಿಮಿನಲ್ ಕೇಸ್. ಈಗ ಎವಿಡೆನ್ಸ್ ಬಿಡುಗಡೆ ಮಾಡಿದ್ರೆ ಅವರು ಅಲರ್ಟ್ ಆಗುತ್ತಾರೆ. ಡಿಕೆ ಶಿವಕುಮಾರ್ ಅವರು ಮಹಿಳೆ ಮೂಲಕ ನನ್ನ ತೇಜೋವಧೆ ಮಾಡಿದ್ದಾರೆ. ನಾನು ತಪ್ಪು ಮಾಡದೆ ಹೋದರೂ ನಾನೇ ಮಾಡಿದೆ ಅಂತ ಹೇಳಬೇಕಾಯಿತು. ಆದರೆ ನನ್ನ ವ್ಯಕ್ತಿತ್ವ ಏನು ಅನ್ನೋದು ಇಡೀ ಜನತೆಗೆ ಗೊತ್ತು. ನನ್ನ ಮಂದಿಗೆ, ಮನೆಯವರಿಗೆ ಗೊತ್ತು.
ಡಿಕೆ ಶಿವಕುಮಾರ್ ಆಗರ್ಭ ಶ್ರೀಮಂತರಾಗಿದ್ದಾನೆ. ಆದ್ರೆ 85ರಲ್ಲಿ ಹರಿದ ಚಪ್ಪಲಿ ಹಾಕುತ್ತಿದ್ದ. ಈಗ ಲೂಟಿ ಮಾಡಿ ಶ್ರೀಮಂತನಾಗಿದ್ದಾನೆ. ಈಗ ಸಿಡಿ ಕೇಸ್ ನಲ್ಲಿ ಆ ಹುಡುಗಿಯನ್ನು ಅರೆಸ್ಟ್ ಮಾಡಬೇಕು. ಆ ಇಬ್ಬರು ಹುಡುಗರು ಶ್ರವಣ್ ಮತ್ತು ನರೇಶ್ ನನ್ನು ಅರೆಸ್ಟ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.