ಸದ್ಯಕ್ಕೆ ಟಮೋಟೋ ಬೆಲೆ ಗಗನಕ್ಕೇರಿದೆ. ಈಗಲೇ ಅಂತು ಬೆಲೆ ಇಳಿಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಟಮೋಟೋ ಜಾಗದಲ್ಲಿ ಗೃಹಿಣಿಯರು ಹುಣಸೆ ಹಣ್ಣನ್ನು ಬಳಸಲು ಶುರು ಮಾಡಿದ್ದಾರೆ. ಆದರೆ ನಟಿ ರಾಖಿ ಸಾವಂತ್ ಮಾತ್ರ ಟಮೋಟೋ ಬೆಳೆಯನ್ನೇ ಬೆಳೆಯಲು ಹೊರಟಿದ್ದಾರೆ.

ರಾಖಿ ಸಾವಂತ್ ಅಂದ್ರೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಮದುವೆ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇತ್ತಿಚೆಗೆ ಮೈಸೂರಿನ ಹುಡುಗನ ಜೊತೆಗೂ ಮದುವೆಯನ್ನು ಮುರಿದುಕೊಂಡಿದ್ದಾರೆ. ಇದೀಗ ಟಮೋಟೋ ಬೆಲೆ ಜಾಸ್ತಿಯಾಗಿದ್ದಕ್ಕೆ ತಾನೇ ಕೃಷಿ ಮಾಡಲು ಹೊರಟಿದ್ದಾರೆ.

ರಾಖಿ, ಒಂದು ಪಾಟ್‌ನಲ್ಲಿ ಟೊಮ್ಯೊಟೋ ಸಸಿ ಬೆಳೆಸಲು ಹೋಗಿದ್ದಾರೆ. ಇದಕ್ಕೆ ಒಬ್ಬ ಮೆಂಟರ್ ಅನ್ನು ಕೂಡ ನೇಮಿಸಿಕೊಂಡಿದ್ದಾರೆ. ಟೊಮ್ಯೊಟೋ ಗಿಡ ನೆಡುವ ರಾಖಿ, ಪಾಟ್ ಒಳಗೆ ಮೊದಲು ನಾಲ್ಕೈದು ಟೊಮ್ಯೊಟೋ ಅನ್ನು ಹಾಕಿದ್ದಾರೆ. ಆಮೇಲೆ ಟೊಮ್ಯೊಟೋ ಗಿಡವನ್ನು ನೆಟ್ಟು ಇನ್ನು 15 ದಿನದಲ್ಲಿ ನನಗೆ ಟೊಮ್ಯಾಟೋ ಸಿಗುತ್ತಾ ಎಂದು ಕೇಳಿದ್ದಾರೆ. ಟಮೋಟೋ ಬೆಳೆಯಲು ಟಮೋಟೋಗಳನ್ನೇ ಹಾಕಿದ್ದಾರೆ.


