ರಾಕೇಶ್ ಪೂಜಾರಿ ಸಾವಿನಿಂದ ಕನ್ನಡ ಚಿತ್ರರಂಗ ನಿಜಕ್ಕೂ ಬೇಸರದಲ್ಲಿದೆ. ರಾಕೇಶ್ ಪೂಜಾರಿ ಇನ್ನಿಲ್ಲ ಎಂದು ಗೊತ್ತಾದ ಕೂಡಲೇ ಕಿರುತೆರೆ, ಹಿರಿತೆರೆ ನಟ – ನಟಿಯರು, ಅಂತಿಮ ದರ್ಶನಕ್ಕೆ ಓಡಿ ಹೋಗಿದ್ದಾರೆ. ರಾಕೇಶ್ ಅಂತಿಮ ವಿಧಿ ವಿಧಾನದಲ್ಲೂ ಭಾಗಿಯಾಗಿದ್ದಾರೆ. ಎಲ್ಲರೂ ಅವರವರ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಅವರ ಬಗ್ಗೆ ಬರೆದು ಸಂತಾಪ ಸೂಚಿಸಿದ್ದಾರೆ. ನಿಜಕ್ಕೂ ಸಾಕಷ್ಟು ಕಲಾವಿದರ ಕಣ್ಣಲ್ಲಿ ನೀರು ತರಿಸಿದೆ, ಮನಸ್ಸು ಭಾರವಾಗಿದೆ. ಇಷ್ಟೆಲ್ಲಾ ಬೆಳವಣಿಗೆಯನ್ನು ನೋಡಿದರೆ ರಾಕೇಶ್ ಪೂಜಾರಿ ಎಷ್ಟು ಒಳ್ಳೆಯ ಗೆಳೆತನವನ್ನು ಎಲ್ಲರಿಂದ ಸಂಪದಾನೆ ಮಾಡಿದ್ದರು ಎಂಬುದು ಅರ್ಥವಾದಂತೆ ಕಾಣಿಸುತ್ತದೆ.
ರಾಕೇಶ್ ಪೂಜಾರಿಯ ಸಾವಿಗೆ ನಟ ದರ್ಶನ್ ಕೂಡ ಸಂಕಟ ಪಟ್ಟುಕೊಂಡಿದ್ದಾರೆ. ಈ ವಿಚಾರವನ್ನ ನಟಿ ರಕ್ಷಿತಾ ಹಂಚಿಕೊಂಡಿದ್ದಾರೆ. ರಕ್ಷಿತಾ ಅವರಿಗೆ ರಾಕೇಶ್ ಪೂಜಾರಿ ಎಂದರೆ ಬಲು ಇಷ್ಟ. ಅಕ್ಕ ಅಕ್ಕ ಎಂದೇ ಬಾಯ್ತುಂಬ ಕರೆಯುತ್ತಿದ್ದ ಹುಡುಗ. ಆದರೆ ಈಗ ಅಕ್ಕ ಅನ್ನೋದಿರಲಿ ಕಣ್ಣು ಬಿಟ್ಟು ನೋಡಲು ಆಗದಂತೆ ಮಲಗಿದ್ದಾರೆ. ಇದು ರಕ್ಷಿತಾ ಅವರಿಗೂ ತೀರಾ ಸಂಕಟ ತರಿಸಿದೆ.

ರಾಕೇಶ್ ತುಂಬಾ ವರ್ಷಗಳಿಂದ ಪರಿಚಯ. ಕಾಮಿಡಿ ಕಿಲಾಡಿ ಗೆದ್ದಿದ್ದ. ಆತ ಅಷ್ಟೇ ಪ್ರತಿಭಾವಂತ ಕೂಡ. ತೆರೆ ಹಿಂದೆಯೂ ಅಷ್ಟೇ ತುಂಬಾ ಒಳ್ಳೆಯ ಹುಡುಗ. ಕಾಮಿಡಿ ಕಿಲಾಡಿಗಳು ತಂಡ ಯಾವಾಗಲೂ ಒಂದೊಳ್ಳೆ ಕುಟುಂಬದ ರೀತಿ ಇತ್ತು. ಅವನಿಗೆ ಇನ್ನು ಸಣ್ಣ ವಯಸ್ಸು. ಇಷ್ಟು ಬೇಗ ಹೋಗಬಾರದಿತ್ತು. ರಾಕೇಶ್ ಮನೆಯಲ್ಲಿ ದುಡಿಯುತ್ತಾ ಇದ್ದದ್ದು ಅವನೊಬ್ಬನೆ. ಈಗ ಅವರ ಅಮ್ಮ, ತಂಗಿ ಇಬ್ಬರೆ ಇರೋದು. ರಾಕೇಶ್ ಸಾವಿನಿಂದ ನಮ್ಮೆಲ್ಲರಿಗೂ ನೋವಾಗಿದೆ. ದರ್ಶನ್ ಕೂಡ ಈ ಬಗ್ಗೆ ಕಾಲ್ ಮಾಡಿ ಕೇಳಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








