ಬೆಂಗಳೂರು: ಜೂನ್ 10 ರಂದು ಬೆಳಗ್ಗೆ 10 ಗಂಟೆಯಿಂದ ರಾಜ್ಯಸಭಾ ಚುನಾವಣೆ ನಡೆಯಲಿದೆ. ವಿಧಾನಸೌಧದ ಮೊದಲನೇಮಹಡಿಯಲ್ಲಿರುವ 106 ನೇ ಕೊಠಡಿಯಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ವಿಪ್ ಜಾರಿ ಮಾಡಿದೆ.
ರಾಜ್ಯಸಭೆ ಚುನಾವಣೆಯ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ, ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡಲೇಬೇಕೆಂದು ಗುರುವಾರವೇ ವಿಪ್ ಜಾರಿ ಮಾಡಿದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಅದರಲ್ಲಿ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಸ್ಪರ್ಧೆ ನಡೆಸಿದ್ದು, ಅಭ್ಯರ್ಥಿಗಳನ್ನು ಹಾಕಿದೆ.
ಮೊದಲ ಅಭ್ಯರ್ಥಿ ಜೈರಾಂ ರಮೇಶ್ ಮತ್ತು ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಅವರನ್ನು ಹಾಕಲಾಗಿದೆ. ಎರಡನೇ ಅಭ್ಯರ್ಥಿಯನ್ನು ಹಿಂಪಡೆಯಲು ಜೆಡಿಎಸ್ ಸಾಕಷ್ಟು ಕಸರತ್ತು ನಡೆಸಿದ್ದರು, ಎರಡನೇ ಅಭ್ಯರ್ಥಿ ಕಣದಲ್ಲಿಯೇ ಇದ್ದಾರೆ. ಕಾಂಗ್ರೆಸ್ ಒಳಗೇನೆ ಎರಡನೇ ಅಭ್ಯರ್ಥಿ ಪರ ಅಪಸ್ವರ ಕೇಳಿ ಬಂದಿದೆ. ಕೆಲವರು ಪರೋಕ್ಷವಾಗಿ ಜೆಡಿಎಸ್ ಬೆಂಬಲ ಸೂಚಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮನ್ಸೂರ್ ಖಾನ್ ಗೆಲುವು ಅನುಮಾನವಿದ್ದರು, ಜೈರಾಂ ರಮೇಶ್ ಗೆಲುವು ಖಚಿತವಾಗಿದೆ.
ಕುಪೇಂದ್ರ ರೆಡ್ಡಿಯವರ ಮಾತಿನ ಮೇಲೆ ಕಾಂಗ್ರೆಸ್ ಮತಗಳು ಛಿದ್ರವಾಗುವ ಸಾಧ್ಯತೆಯೂ ಇದೆ. ಜೂನ್ 10 ರಂದೇ ಚುನಾವಣೆ ನಡೆದು ಅಂದೇ ಫಲಿತಾಂಶವು ಹೊರಬೀಳಲಿದೆ. ಹೀಗಾಗಿ ಒಂದೇ ದಿನದಲ್ಲಿ ಶಾಸಕರ ಒಲವು ತಿಳಿಯಲಿದೆ.