ಬೆಂಗಳೂರು; ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಸವೇಶ್ವರ ನಗರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಬಿಟ್ಟಿದ್ದರು. ಆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ರಜತ್ ಮತ್ತು ವಿನಯ್ ಅವರನ್ನು ಬಂಧಿಸಿದ್ದರು. ಆದರೆ ಬಂಧನವಾದ ಬಳಿಕ ರಜತ್ ಪತ್ನಿ ಅಕ್ಷತಾ ಫೈಬರ್ ಮಚ್ಚು ಕೊಟ್ಟು ಯಾಮಾರಿಸಿದ್ದರು. ಅಸಲಿ ಮಚ್ಚು ಅದಾಗಿಲ್ಲವಾಗಿದ್ದ ಕಾರಣ ವಿನಯ್ ಹಾಗೂ ರಜತ್ ಇಬ್ಬರನ್ನು ಬಂಧಿಸಿ, ಜೈಲು ವಾಸ ಅನುಭವಿಸುವಂತೆ ಮಾಡಿದ್ದರು.
ಆನಂತರ ಷರತ್ತು ಬದ್ಧ ಜಾಮೀನು ಪಡೆದು ಇಬ್ಬರು ಹೊರಗೆ ಬಂದಿದ್ದರು. ವಿಚಾರಣೆಯ ವೇಳೆ ರಜತ್ ಮಚ್ಚನ್ನ ಎಲ್ಲಿ ಬಿಸಾಡಿದ್ದೀವಿ ಎಂಬ ಮಾಹಿತಿಯನ್ನು ನೀಡಿದ್ದರು. ಈ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಶವ ಬಿಸಾಡಿದ್ದ ಜಾಗ ಸುಮ್ಮನಹಳ್ಳಿ ರಾಜಕಾಲುವೆ ಬಳಿ ಶವ ಬಿಸಾಡಿರುವ ಬಗ್ಗೆ ಮಾಹಿತಿ ಅಲ್ಲಿ ಹೋಗಿ ನೋಡಿದಾಗಲೂ ಮಚ್ಚು ಸಿಕ್ಕಿರಲಿಲ್ಲ. ರೀಲ್ಸ್ ನಲ್ಲಿ ಬಳಸಿದ್ದ ಮಚ್ಚು ಎಲ್ಲಿ ಹೋಗಿದೆ ಎಂಬುದರ ಸ್ಪಷ್ಟ ಮಾಹಿತಿ ಇನ್ನು ಪೊಲೀಸರಿಗೆ ಸಿಕ್ಕಿಲ್ಲ.
ಇದರ ನಡುವೆ ಪ್ರತಿ ವಿಚಾರಣೆಗೂ ರಜತ್ ಅಂಡ್ ವಿನಯ್ ಹಾಜರಾಗಬೇಕು ಎಂಬುದನ್ನ ಕೋರ್ಟ್ ಸೂಚನೆ ನೀಡಿತ್ತು. ಆದರೆ ರಜತ್ ಕಿಶನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಕಾರಣಕ್ಕೆ ನ್ಯಾಯಾಲಯವೂ ರಜತ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಹೀಗಾಗಿ ಇಂದು ಪೊಲೀಸರು ಮತ್ತೆ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮತ್ತೆ ಮತ್ತೆ ಅರೆಸ್ಟ್ ಆದರೂ ರಜತ್ ಹಾಗೂ ವಿನಯ್ ಬಳಸಿದ್ದ ರಿಯಲ್ ಮಚ್ಚು ಮಾತ್ರ ಪೊಲೀಸರಿಗೆ ಸಿಗುತ್ತಿಲ್ಲ.






