Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇಶದಲ್ಲಿ ಮತಾಂತರ, ಭಯೋತ್ಪಾದನೆ, ಹಿಂಸಾವಾದ, ರಕ್ತಪಾತ ನಡೆಯುತ್ತಿದೆ : ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು

Facebook
Twitter
Telegram
WhatsApp

ಚಿತ್ರದುರ್ಗ : ಭಾರತೀಯ ಸಂಸ್ಕೃತಿಯ ಧಾರ್ಮಿಕ ವೈವಿಧ್ಯತೆಯನ್ನು ಕ್ರಿಶ್ಚಿಯನ್ ಮತ್ತು ಮುಸಲ್ಮಾನರು ಒಪ್ಪಿಕೊಳ್ಳದ ಕಾರಣ ದೇಶದಲ್ಲಿ ಮತಾಂತರ, ಭಯೋತ್ಪಾದನೆ, ಹಿಂಸಾವಾದ, ರಕ್ತಪಾತ ನಡೆಯುತ್ತಿದೆ ಎಂದು ಹರಿಹರ ಪುರದ ಶಾರದ ಲಕ್ಷ್ಮೀ ನರಸಿಂಹ ಪೀಠ ಶ್ರೀಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ವಿಶಾದ ವ್ಯಕ್ತಪಡಿಸಿದರು.

ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮೂರು ದಿನಗಳಲ್ಲಿಂದ ನಡೆಯುತ್ತಿರುವ ಗುರುಭಿಕ್ಷಾ ವಂದನಾ ಹಾಗೂ ಶತಚಂಡಿಕಾ ಯಾಗದ ಭಾನುವಾರದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನವಾದುದು ಭಾರತೀಯ ಸಂಸ್ಕೃತಿ. ಈ ಸಂಸ್ಕøತಿಯನ್ನು ಯಾರು ಒಪ್ಪಿಕೊಳ್ಳುವುದಿಲ್ಲವೋ ಅವರದು ವಿದೇಶಿ ಸಂಸ್ಕೃತಿ. ಸ್ವಾರ್ಥ ಪ್ರೇರಿತ, ಸಂಕುಚಿತ ಸಂಸ್ಕೃತಿಯಿಂದ ಭಾರತದೇಶ ಮತಾಂತರ, ಹಿಂಸೆ, ರಕ್ತಪಾತದಂತಹ ದಾಳಿಗೆ ಒಳಗಾಗಿದೆ. ಭಾರತೀಯ ಸಂಸ್ಕೃತಿಗೆ ಸವಾಲಾಗಿ  ಭಾಹ್ಯ, ಆಂತರಿಕ ದಾಳಿ ನಮ್ಮ ದೇಶದ ಮೇಲೆ ನಡೆಯುತ್ತಿದೆಯಲ್ಲದೆ, ಸಹಸ್ರ-ಸಹಸ್ರ ವರ್ಷಗಳಿಂದ ಭಾರತದ ಸಂಸ್ಕøತಿ ಮೇಲೆ ಅನೇಕರು ನಿರಂತರವಾಗಿ ದಾಳಿ ನಡೆಸಿದ್ದಾರೆ. ವೈವಿದ್ಯತೆಯಲ್ಲಿ ಏಖತೆಯನ್ನು ಸಾರುವ ಸಂಸ್ಕøತಿ ನಮ್ಮದು. ಹಾಗಾಗಿ ಏಕತೆಯ ಸೂತ್ರವನ್ನು ಮರೆಯಬಾರದು. ಇದರಿಂದ ಸಂಸ್ಕøತಿ ಬಲಹೀನವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಏಕತೆ, ಸಮಾನತೆದಿಂದ ಇರಬೇಕಾದ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು, ಬೇದ-ಭಾವ ಎನ್ನುವ ತಾರತಮ್ಯ ನಾಶವಾಗಬೇಕು. ಮುಂದಿನ ದಿನಗಳಲ್ಲಿ ಅಸ್ತಿತ್ವಕ್ಕೆ ಹೋರಾಟ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ದೇವರು ಇಲ್ಲ ಎಂದು ನಿರ್ಣಯ ಮಾಡಲು ಯಾರಿಗೂ ಅಧಿಕಾರವಿಲ್ಲ ಎಂದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ ನಾಗರಾಜ್ ಭಟ್ ರವರ ಪೂಜಾಫಲದಿಂದ ಗೋನೂರಿನಲ್ಲಿ ಶ್ರೀ ರಾಜರಾಜೇಶ್ವರ ತಲೆ ಎತ್ತಿದೆ. ಅಗೋಚರವಾದ ಶಕ್ತಿ ಎಲ್ಲರನ್ನೂ ರಕ್ಷಿಸುತ್ತದೆ. ಜಗತ್ತನ್ನು ಅತ್ಯಂತ ಸೂಕ್ಷ್ಮವಾಗಿ ಹೊತ್ತಿರುವುದು ಭಗವಂತನ ಕೃಪೆ. ಕಾಡು ಭೂಮಿಯನ್ನು ತಪೋವನವನ್ನಾಗಿ ಮಾಡಿರುವುದರ ಹಿಂದೆ ಇವರ ಅಪಾರ ಪರಿಶ್ರಮವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾವಂತರುಗಳಿಂದಲೇ ದೇಶದಲ್ಲಿ ಭಯೋತ್ಪಾದನೆ, ಕೋಮುವಾದ ಜಾಸ್ತಿಯಾಗುತ್ತಿದೆ. ದೇಶಕ್ಕೆ ವಿದ್ಯಾವಂತರುಗಳೇ ಮಾರಕವಾಗಿದ್ದಾರೆ. ಶಿಕ್ಷಣ ಸಂಸ್ಥೆಗಳು ವಿದ್ಯೆ ನೀಡಬಹುದೇ ವಿನಃ ಬುದ್ದಿವಂತರನ್ನಾಗಿ ಮಾಡುವುದು ಕಷ್ಟ. ಜ್ಞಾನವಂತರನ್ನಾಗಿ ಮಾಡುವುದೇ ನಿಜವಾದ ವಿದ್ಯೆ. ಗುರುಕುಲದಲ್ಲಿ ಬೆಳೆದರೆ ಫಲ ಸಿಗುತ್ತದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿರವರು ಈಶ್ವರನನ್ನು ಒದಗಿಸಿಕೊಟ್ಟಿರುವುದು ನಮ್ಮೆಲ್ಲರ ಪುಣ್ಯ. ಭಗವಂತನ ಅನುಗ್ರಹ ಬೇಕು. ಶ್ರದ್ಧಾ ಭಕ್ತಿಯಿಂದ ನಡೆದುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನ ಹಸಿರು ಪರಿಸರದಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ನಮ್ಮ ಜಿಲ್ಲೆ ಒಳಗೊಂಡಂತೆ ಬೇರೆ ಬೇರೆ ಕಡೆಯಿಂದ ಭಕ್ತರು ಇಲ್ಲಿಗೆ ಬಂದು ಪೂಜೆ ಮಾಡಿಸುವುದುಂಟು. ಈ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ರಾಷ್ಟ್ರೀಯ ಹೆದ್ದಾರಿ ಜಿ.ಆರ್. ಹಳ್ಳಿಯಿಂದ ನೇರವಾಗಿ ಟಾರ್ ರಸ್ತೆ ಮಾಡಿಸಲಾಗುವುದು. ರಾಜ್ಯ ಸರ್ಕಾರ ಅನೇಕ ಮಠಗಳಿಗೆ ಕೋಟ್ಯಾಂತರ ರೂಗಳ ಅನುದಾನ ಕೊಟ್ಟಿದೆ. ಅದೇ ರೀತಿ ಈ ದೇವಸ್ಥಾನಕ್ಕೂ ಅನುದಾನ ನೀಡುವಂತೆ ಟ್ರಸ್ಟ್‍ನವರು ಮನವಿ ಮಾಡಿದ್ದಾರೆ.

ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಒಂದು ಕೋಟಿ ರೂಗಳನ್ನು ಮಂಜೂರು ಮಾಡಿದ್ದು ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಕೂಡ ಒಂದು ಕೋಟಿ ರೂಗಳನ್ನು ನೀಡಿರುವುದು ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ ಪ್ರತಿ ವರ್ಷವೂ ಇಲ್ಲಿ ಲೋಕಕಲ್ಯಾಣಾರ್ಥವಾಗಿ ಗುರುಭಿಕ್ಷಾ ವಂದನಾ ಹಾಗೂ ಶತಚಂಡಿಕಾ ಯಾಗ ನಿರಂತರವಾಗಿ  ನಡೆಯುತ್ತಿದೆ. ಕಷ್ಟಗಳು ನೀಗಿ ಭಕ್ತರ ಇಷ್ಟಾರ್ಥ ನೆರವೇರಲಿ ಎನ್ನುವ ಉದ್ದೇಶದಿಂದ ನಾಗರಾಜ್ ಭಟ್ ರವರು ಮೂರು ದಿನಗಳ ಕಾಲ ಈ ಕಾರ್ಯಕ್ರಮ ಏರ್ಪಡಿಸಿದ್ದಾರೆಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡುತ್ತಾ ಚಂಡಿಕಾ ಯಾಗದ ಮೂಲಕ ರಾಜ ರಾಜೇಶ್ವರಿ ದೇವಿಯ ಅನುಗ್ರಹ ಎಲ್ಲರಿಗೂ ಸಿಗಲಿ ದೇವಸ್ಥಾನಗಳು ಬರೀ ದೇವಸ್ಥಾನಗಳಾಗಿ ಉಳಿಯಬಾರದು. ಸಂಸ್ಕಾರ ಕಲಿಸುವ ಕೇಂದ್ರಗಳಾಗಬೇಕು. ಹಿಂದುಗಳಿಗೆ ದೇವಾಲಯ ಎನ್ನುವುದು ದೊಡ್ಡ ಕೊಡುಗೆ  ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆಯೇ ವಿನಃ ಸಂಸ್ಕಾರ ಸಿಗುತ್ತಿಲ್ಲ. ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ. ಯುವಕ ಯುವತಿಯರಲ್ಲಿ ದೇವಸ್ಥಾನಗಳಿಂದಲಾದರೂ ಸಂಸ್ಕಾರ ಸಿಗಬೇಕು ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಲೋಕೋಪಯೋಗಿ ನಿವೃತ್ತ ಮುಖ್ಯ ಇಂಜಿನಿಯರ್ ಎಮ್. ರವೀಂದ್ರಪ್ಪ ಇವರುಗಳು ಮಾತನಾಡಿದರು.

ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಧಾನ ಆಚಾರ್ಯರಾದ ಬಾಲಚಂದ್ರ ಶಾಸ್ತ್ರಿಗಳು ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!