ತುಮಕೂರು: ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರೀ ಸಾಕಷ್ಟು ಪೈಪೋಟಿ ಇತ್ತು. ಗುಬ್ಬಿ ಶ್ರೀನಿವಾಸ್ ಅವರು ಈ ಬಾರಿ ಹೇಗಾದ್ರೂ ಮಾಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನ ತಮ್ಮವರ ಪರ ಮಾಡಿಕೊಳ್ಳಬೇಕೆಂಬ ಹಠ ಹೊಂದಿದ್ದರು. ಮತಗಳ್ಳತನ ಬಗ್ಗೆ ರಾಜಣ್ಣ ಮಾತನಾಡಿದ್ದರ ಪರಿಣಾಮ, ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಹೀಗಾಗಿ ತುಮಕೂರಿನಲ್ಲಿ ಹಿಡಿತ ತಪ್ಪಬಹುದು ಎಂದೇ ಹಲವರು ನಿರೀಕ್ಷೆ ಮಾಡಿಕೊಂಡಿದ್ದರು. ಆದರೆ ಈಗ ನೋಡಿದ್ರೆ ಎಲ್ಲಾ ಆಲೋಚನೆಗಳು ಉಲ್ಟಾ ಹೊಡೆದಿದ್ದು, ಮತ್ತೆ ರಾಜಣ್ಣ ಅವರೇ ಮೇಲು ಗೈ ಸಾಧಿಸಿದ್ದಾರೆ.
ಇಂದು ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ರಾಜಣ್ಣ ಒಬ್ಬರೆ ಅರ್ಜಿ ಸಲ್ಲಿಕೆ ಮಾಡಿದ್ದರು. ಹೀಗಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 6 ಅವಧಿಗೆ ಅಧ್ಯಕ್ಷರಾಗಿ ಕೆ.ಎನ್. ರಾಜಣ್ಣ ಆಯ್ಕೆಯಾಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕವೂ ಸತತ ಏಳನೇ ಬಾರಿಗೆ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೆ.ಎನ್.ರಾಜಣ್ಣ ಕೆಎನ್ ರಾಜಣ್ಣ ಹೊಸ ದಾಖಲೆ ನಿರ್ಮಿಸಿದ್ದಾರೆ.

ತುಮಕೂರು ಜಿಲ್ಲೆಯ ಎಲ್ಲಾ 10 ತಾಲೂಕುಗಳಲ್ಲೂ ಕೆ.ಎನ್.ರಾಜಣ್ಣ ಅವರ ಬೆಂಬಲಿಗರ ಪಡೆ ಇದೆ. 14 ನಿರ್ದರೆಶಕ ಸ್ಥಾನಕ್ಕರ ಚುನಾವಣೆ ನಡೆದಿತ್ತು. 8 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ತಿಪಟೂರು ತಾಲೂಕಿನಿಂದ ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಹಾಗೂ ಪಾವಗೆ ತಾಲೂಕಿನಿಂದ ಕಾಂಗ್ರೆಸ್ ಶಾಸಕ ವೆಂಕಟೇಶ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಬೇರೆ ಜಿಲ್ಲೆಗಳಲ್ಲಿ ರಾಜಣ್ಣ ಅವರ ಬೆಂಬಲಿಗರೇ ಆಯ್ಕೆಯಾಗಿದ್ದಾರೆ.


















