ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಏ. 17 : ನಗರದ ಗ್ರಾಮ ದೇವತೆಗಳಲ್ಲಿ ಒಂದಾದ ಶ್ರೀ ರಾಜ ಉತ್ಸವಾಂಬ ಉಚ್ಚಂಗಿಯಲ್ಲಮ್ಮ ಜಾತ್ರಾಮಹೋತ್ಸವವೂ ಏ. 21 ರಿಂದ ಮೇ 5 ರವರೆಗೆ ತಹಶೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿಗಳು, ಹಾಗೂ ಶ್ರೀ ರಾಜ ಉತ್ಸವಾಂಬ ದೇವಸ್ಥಾನ, ಭಕ್ತಮಂಡಳಿ ಮತ್ತು ಗ್ರಾಮಸ್ಥರು ಸಹಕಾರದಿಂದ ನಡೆಯಲಿದೆ.
ಏ. 21ರ ಮಂಗಳವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ಹಾಗೂ ರಾತ್ರಿ 11.30ಕ್ಕೆ ಜಾತ್ರೆಗೆ ಸಾರು ಹಾಕಲಾಗುವುದು. ಏ.25ರ ಶನಿವಾರ ಬೆಳಗ್ಗೆ 11.ಕ್ಕೆ ಅಮ್ಮನವರಿಗೆ ಕಂಕಣಧಾರಣೆ, ಮದಲಿಂಗಿತ್ತಿಯ ಪೂಜೆ ಹಾಗೂ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ. ರಾತ್ರಿ 8.30ಕ್ಕೆ “ಸಿಂಹ ಉತ್ಸವ” ಏ. 26ರ ಭಾನುವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ರಾತ್ರಿ 8.30ಕ್ಕೆ “ಸರ್ಪೋತ್ಸವ” ಏ. 27ರ ಸೋಮವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ರಾತ್ರಿ 8.30ಕ್ಕೆ “ನವಿಲು ಉತ್ಸವ” ಏ. 29ನೇ ಬುಧವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ಹಾಗೂ ಬೆಳಗ್ಗೆ 9.00 ಗಂಟೆಗೆ ದೇವಿಯು ಕೆಳಗಿಳಿದು ರಾಜಬೀದಿಯಲ್ಲಿ “ಕುದುರೆ ಉತ್ಸವ” ಮತ್ತು “ಅನ್ನಸಂತರ್ಪಣೆ” ಮೇ. 01ರ ಶುಕ್ರವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ಹೂವಿನ ಉಚ್ಚಾಯ “ರಥೋತ್ಸವ” ನಗರದ ರಾಜಬೀದಿಗಳಲ್ಲಿ ಭಕ್ತಾಧಿಗಳಿಂದ ಮೆರವಣಿಗೆ ಮೇ. 02ನೇ ಶನಿವಾರ ಮಧ್ಯಾಹ್ನ 12.ಕ್ಕೆ ದೇವಿಗೆ ವಿಶೇಷ ಭಂಡಾರದ ಪೂಜೆ ನಂತರ ಪ್ರಸಾದ ವಿನಿಯೋಗ, ಸಂಜೆ 6. ಗಂಟೆಗೆ “ಸಿಡಿ ಉತ್ಸವ” ಮೇ.03ರ ಭಾನುವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗ ಳಾರತಿ ರಾತ್ರಿ 9.ಕ್ಕೆ ದೇವಿಯ ಮಹಾ ಭಕ್ತರಾದ ಜೋಗಪ್ಪ ಮತ್ತು ಜೋಗಮ್ಮನವರಿಂದ “ಓಕುಳಿ” ಮೇ.05ರ ಮಂಗಳವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ಜಾತ್ರಾ ಮುಕ್ತಾಯವಾಗಲಿದೆ
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








