Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಬಿ.ದುರ್ಗದಲ್ಲಿ ಹೆಚ್ಚು ಮಳೆ

Facebook
Twitter
Telegram
WhatsApp

 

ಚಿತ್ರದುರ್ಗ,(ಆಗಸ್ಟ್ 30) : ಜಿಲ್ಲೆಯಲ್ಲಿ ಆಗಸ್ಟ್ 29ರಂದು ಸುರಿದ ಮಳೆ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ 128.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಉಳಿದಂತೆ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 65.8 ಮಿ.ಮೀ, ರಾಮಗಿರಿ 24.2 ಮಿ.ಮೀ, ಚಿಕ್ಕಜಾಜೂರು 50.2 ಮಿ.ಮೀ, ಹೆಚ್.ಡಿ.ಪುರ 63 ಮಿ.ಮೀ, ತಾಳ್ಯ 9.2 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 26.8 ಮಿ.ಮೀ, ಬಾಗೂರು 31.1 ಮಿ.ಮೀ,  ಮತ್ತೋಡು 15.4 ಮಿ.ಮೀ, ಮಾಡದಕೆರೆ 37.2 ಮಿ.ಮೀ, ಶ್ರೀರಾಂಪುರ 40.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 61.6 ಮಿ.ಮೀ, ಬಬ್ಬೂರಿನಲ್ಲಿ 61.4 ಮಿ.ಮೀ, ಈಶ್ವರಗೆರೆ 42 ಮಿ.ಮೀ, ಸೂಗೂರಿನಲ್ಲಿ 13.2 ಮಿ.ಮೀ, ಇಕ್ಕನೂರಿನಲ್ಲಿ 28.6 ಮಿ,ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 105.2 ಮಿ.ಮೀ, ಚಿತ್ರದುರ್ಗ -2ರಲ್ಲಿ 65.7, ಹಿರೇಗುಂಟನೂರು 11.5 ಮಿ.ಮೀ, ಐನಳ್ಳಿ 60.4 ಮಿ.ಮೀ, ಭರಮಸಾಗರ 27.4 ಮಿ.ಮೀ, ಸಿರಿಗೆರೆ 60.2ಮಿ.ಮೀ, ತುರುವನೂರು 25.6 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 36.8 ಮಿ.ಮೀ, ಪರಶುರಾಂಪುರ 54.2 ಮಿ.ಮೀ, ನಾಯಕನಹಟ್ಟಿ 65.2 ಮಿ.ಮೀ,  ಡಿ.ಮರಿಕುಂಟೆ 43.3 ಮಿ.ಮೀ, ತಳುಕು 42.2 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರಿನ ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 46 ಮಿ.ಮೀ, ರಾಯಾಪುರ 34.6 ಮಿ.ಮೀ, ಬಿ.ಜಿ.ಕೆರೆ 36.8 ಮಿ.ಮೀ, ರಾಂಪುರ 20.2 ಮಿ.ಮೀ, ದೇವಸಮುದ್ರ 23.2 ಮಿ.ಮೀ ಮಳೆಯಾಗಿದೆ

ಸೋಮವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 76 ಮನೆಗಳು ಭಾಗಶಃ ಹಾನಿ, 02 ಮನೆಗಳು ತೀವ್ರ ಹಾನಿಗೆ ಒಳಗಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 24 ಮನೆಗಳು, ಹಿರಿಯೂರು 17, ಚಳ್ಳಕೆರೆ 06, ಹೊಸದುರ್ಗ 05, ಹೊಳಲ್ಕೆರೆ 19, ಮೊಳಕಾಲ್ಮೂರು 05 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಕೃಷಿ ಬೆಳೆಗೆ ಸಂಬಂಧಿಸಿದಂತೆ 45 ಹೆಕ್ಟೇರ್ ಪ್ರದೇಶ, ತೋಟಗಾರಿಕೆಗೆ ಸಂಬಂಧಿಸಿದಂತೆ 18 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!