ಅಕ್ಟೋಬರ್ 15ರವರೆಗೆ ಮಳೆ : ಹವಮಾನ ವರದಿ ಹೇಳ್ತಿರೋದೇನು..?

1 Min Read

ಬೆಂಗಳೂರು: ಈಗಿನ ಪರಿಸ್ಥಿತಿಗೆ ರೈತನ ಕಷ್ಟ ನೋಡುವುದಕ್ಕೆ ಆಗ್ತಿಲ್ಲ. ಮಳೆಗಾಗಿ ಕಾಯ್ತಾನೆ ಇದ್ದಾನೆ. ಇದರ ನಡುವೆ ಮಳೆ ಹೋಗಿದೆ. ಇದೀಗ ಹವಮಾನ ಇಲಾಖೆ ಕೊಟ್ಟ ವರದಿಯ ಪ್ರಕಾರ ಅಕ್ಟೋಬರ್ 15ರ ವರೆಗೂ ಮಳೆಯಾಗುವ ಸೂಚನೆಯನ್ನು ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ, ಎಷ್ಟೆಷ್ಟು ಮಳೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

 

ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂ ಬೆಳಗ್ಗೆಯೇ ಜೋರು ಬಿಸಿಲು ಮೂಡಿದ್ದು, ಮಧ್ಯಾಹ್ನದ ವೇಳೆಗೆ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮೈಸೂರು, ರಾಮನಗರ, ತುಮಕೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಾಳೆಯೂ ಬೆಳಗ್ಗೆನೆ ಬಿಸಿಲಿನ ವಾತಾವರಣ ಇದ್ದು, ಮಧ್ಯಾಹ್ನದ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ನಾಳೆಯೂ ಮಳೆ ಮುಂದುವರೆಯಲಿದೆ. ರಾಮನಗರ, ಚಾಮರಾಜನಗರ, ಕೋಲಾರ, ಹಾಸನ, ಮೈಸೂರು, ಮಂಡ್ಯ ಮತ್ತು ತುಮಕೂರು ಭಾಗದಲ್ಲಿ ನಾಳೆ ಸಾಧಾರಣ ಮಳೆಯಾಗಲಿದೆ. ಈ ಜಿಲ್ಲೆಗಳ ಹೆಚ್ವಿನ ಪ್ರದೇಶಗಳು ಮೋಡ ಕವಿದ ವಾತಾವರಣದಿಂದಾನೇ ಕೂಡಿರುತ್ತವೆ. ಹಾಗೇ ಚಿತ್ರದುರ್ಗ ಮತ್ತು ಗದಗ ಜಿಲ್ಕೆಯ ಭಾಗದಲ್ಲೂ ಸಣ್ಣ ಪ್ರಮಾಣದ ಮಳೆಯೊಂದಿಗೆ ಇದೇ ರೀತಿಯ ವಾತಾವರಣ ಇರಲಿದೆ. ಅಕ್ಟೋಬರ್ 15ರ ವರೆಗೂ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೈತರ ನಿರೀಕ್ಷೆಯಂತೆ ಜೋರು ಮಳೆ ಬಂದರೆ ಅದೇ ಖುಷಿ.

Share This Article