ನವದೆಹಲಿ: ರೈಲಿನಲ್ಲಿ ಹೋಗೋದು ಸುಖಕರ ಪ್ರಯಾಣ ಅಂತಾನೆ ಎಲ್ಲಾ ಭಾವಿಸೋದು. ಆದ್ರೆ ರೈಲು ಪ್ರಯಾಣಕ್ಕೆ ಹೊರಟರೆ ಸರಿಯಾದ ಸಮಯಕ್ಕೆ ಒಮ್ಮೊಮ್ಮೆ ರೈಲು ಸಿಗೋದೆ ಇಲ್ಲ. ರೆಗ್ಯೂಲರ್ ರೈಲು ಪ್ರಯಾಣಿಕರಾಗಿದ್ರೆ ಆ ಬಗ್ಗೆ ನಿಮ್ಗೆ ಖಂಡಿತ ಗೊತ್ತೆ ಇರುತ್ತೆ. ಇನ್ಮುಂದೆ ಹೀಗ್ ಹಾಗೋ ಆಗಿಲ್ಲ ಅಂತ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆಯನ್ನು ರವಾನಿಸಿದೆ.
ಒಂದು ವೇಳೆ ರೈಲು ವಿಳಂಬವಾಗಿ ಬರುವುದಿದ್ದರೆ ಪ್ರಯಾಣಿಕರಿಗೆ ಮುಂಚಿತವಾಗಿಯೇ ತಿಳಿಸಬೇಕು. ಇಲ್ಲವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಯಾಣಿಕರ ಸಮಯವೂ ಅಮೂಲ್ಯವಾದದ್ದು. ರೈಲು ಸಮಯಗಳಲ್ಲಿ ವ್ಯತ್ಯಾಸವಾದಲ್ಲಿ ಇನ್ನು ಮುಂದೆ ವ್ಯತ್ಯಾಸವಾದಲ್ಲಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.
ಈ ಆದೇಶಕ್ಕೆ ಕಾರಣ 2016ರಲ್ಲಿ ನಡೆದ ಘಟನೆ. ಸಂಜಯ್ ಶುಕ್ಲಾ ಎಂಬುವವರು ಕುಟುಂಬ ಸಮೇತರಾಗಿ ಜಮ್ಮು ಕಾಶ್ಮೀರಕ್ಕೆ ಹೊರಟಿದ್ದರಂತೆ. ರೈಲು ಅಂದು ನಾಲ್ಕು ಗಂಟೆ ವಿಳಂಬವಾಗಿದೆ. ಈ ಹಿನ್ನೆಲೆ ಸಂಜಯ್ ಶುಕ್ಲಾ ಪರಿಹಾರ ಕೇಳಿ ಎನ್ಸಿಡಿಆರ್ಸಿಗೆ ಅರ್ಜಿ ಹಾಕಿದ್ರು. ಯಾಕಂದ್ರೆ ಅಂದು ವಿಮಾನಯಾನ ಮಿಸ್ ಆದ ಕಾರಣ ದುಬಾರಿ ಹಣ ನಷ್ಟವಾಗಿತ್ತು. ಎನ್ಸಿಡಿಆರ್ಸಿ ಸಂಜಯ್ ಶುಕ್ಲಾ ಪರವೇ ತೀರ್ಪು ಬಂದಿತ್ತು.
ಬಳಿಕ ಈ ಅರ್ಜಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿತ್ತು. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪಿನ ವಿರುದ್ಧ ಪಶ್ಚಿಮ ರೈಲ್ವೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಸಂಜಯ್ ಶುಕ್ಲಾ ಪರ ಆದೇಶ ಹೊರಡಿಸಿದೆ.