ಬೆಂಗಳೂರು: ತಮಿಳುನಾಡಿಗೆ ಹೋಗುವಾಗ ದಾರಿ ಮಧ್ಯೆ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರು ಇಳಿದಿದ್ದರು. ಸಿಎಂ ಹಾಗೂ ಡಿಸಿಎಂ ಗ್ಯಾಪ್ ನಲ್ಲಿ ಭೇಟಿಯಾಗಿ ಮಾತು ಕಥೆಯನ್ ನಡೆಸಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಮತ್ತು ಅಧ್ಯಕ್ಷರು ಮಾತನ್ನಾಡಿದ್ದು ಅವರೇ. ಅವರೇ ಈ ಬಗ್ಗೆ ಹೇಳಬೇಕು. ನೀವೂ ನಮ್ಮನ್ನ ಕೇಳಿದರೆ ಹೇಗೆ ಹೇಳೋದು ಎಂದು ಹೇಳುತ್ತಲೇ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಲಿ ಚರ್ಚೆ ಏನು ಮಾಡಿದಂತೆ ಕಾಣಿಸಲಿಲ್ಲ. ಉಭಯ ಕುಶಲೋಪರಿ ಇದ್ದಂತೆ ಇತ್ತು. ಆ ಬಗ್ಗೆ ನಾನೇನು ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.
ಹೈಕಮಾಂಡ್ ಒಂದು ಕ್ಲಾರಿಟಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನ ಎಲ್ಲರು ಬಯಸ್ತಾ ಇದ್ದಾರೆ. ರಾಜಣ್ಣ ಅವರು ಹೇಳುವುದು ಒಂದು ಅರ್ಥದಲ್ಲಿ ಸರಿ ಇದೆ. ಈ ಗೊಂದಲ ಇರಬಾರದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ರಾಜಣ್ಣ ಅವರು ಓಪನ್ ಆಗಿ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಳ್ಳಾರಿ ಕೇಸಲ್ಲಿ ಭರತ್ ರೆಡ್ಡಿ ಅರೆಸ್ಟ್ ಆಗದೆ ಇರುವುದಕ್ಕೆ ಬಿಜೆಪಿ ಗರಂ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತನಿಖೆ ಮಾಡ್ತಾ ಇದ್ದಾರೆ. ದಿನನಿತ್ಯ ವಿರೋಧ ಪಕ್ಷದವರನ್ನ ಕೇಳಿಕೊಂಡು, ಕಾಂಗ್ರೆಸ್ ನವರನ್ನ ಕೇಳಿಕೊಂಡು ಮಾಡಲ್ಲ ಪೊಲೀಸವರು. ನಿರ್ದಿಷ್ಟವಾದಂತ ತನಿಖೆ ಮಾಡೋದಕ್ಕೆ ಹೇಳಿರ್ತಾರೆ ಅವರು ಮಾಡ್ತಾರೆ. ಯಾರನ್ನ ಅರೆಸ್ಟ್ ಮಾಡಬೇಕು, ಯಾವಾಗ ಮಾಡಬೇಕು ಎಂಬುದು ಪೊಲೀಸರಿಗೆ ಗೊತ್ತಿದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










