ಕೊಟ್ಟ ಮಾತಿಗೆ ತಪ್ಪದ ರಾಹುಲ್ ಗಾಂಧಿ : ರೈತ ಮಹಿಳೆಯರಿಗೆ ಸೋನಿಯಾ, ಪ್ರಿಯಾಂಕ ಭೇಟಿ, ಪ್ರೀತಿಯ ಆತಿಥ್ಯ

ನವದೆಹಲಿ: ಇಂದು ಸೋನಿಯಾ ಗಾಂಧಿ ನಿವಾಸದಲ್ಲಿ ರೈತ ಮಹಿಳೆಯರು ಮನಸ್ಸಾರೆ ನಕ್ಕಿದ್ದಾರೆ, ಪ್ರೀತಿಯಿಂದ ಕುಣಿದಿದ್ದಾರೆ. ಹಾಗಂತ ಅವರು ಒಬ್ಬರೇ ಅಲ್ಲ, ಜೊತೆಗೆ ಸೋನಿಯಾ ಗಾಂಧಿ‌ ಕೂಡ ಎಲ್ಲರ ಜೊತೆಗೆ ಸಾಮಾನ್ಯರಂತೆ ಬೆರೆತಿದ್ದಾರೆ. ಆತ್ಮೀಯತೆಯನ್ನು ತೋರಿಸಿದ್ದಾರೆ.

ಇದೆಲ್ಲದ್ದಕ್ಕೂ ಕಾರಣ ರಾಹುಲ್ ಗಾಂಧಿ ಆ ರೈತ ಮಹಿಳೆಯರಿಗೆ ಕೊಟ್ಟಿದ್ದಂತ ಮಾತು. ಆದ್ರೆ ಆ ಮಾತನ್ನು ಕಾಂಗ್ರೆಸ್ ನಾಯಕ ಮರೆತು ಹೋಗಿದ್ದಾರೆ ಎಂದೇ ಮಾತುಗಳು ಕೇಳಿ ಬಂದಿತ್ತು. ಆದ್ರೆ ಈಗ ಮನೆಗೆ ಕರೆದು ಕೊಟ್ಟ ಮಾತು, ಯಾವತ್ತು ತಪ್ಪುವವರಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುವ ಮೂಲಕ ಇಡೀ ದೇಶದ ಜನರನ್ನು ಭೇಟಿ ಮಾಡಿ ಬಂದಿದ್ದರು. ಈ ವೇಳೆ ಹರಿಯಾಣದ ಸೋನಿಪತ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ರೈತ ಮಹಿಳೆಯರು ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದರು. ಒಬ್ಬ ವೃದ್ದೆಯೊಬ್ಬರಿಗೆ ದೆಹಲಿಗೆ ಬನ್ನಿ, ಕಣ್ಣಿನ ಆಪರೇಷನ್ ಮಾಡಿಸುತ್ತೇನೆ ಎಂದು ಹೇಳಿದ್ದರು. ಆಗ ನಾವು ದೆಹಲಿಯನ್ನೇ ನೋಡಿಲ್ಲ, ಸೋನಿಯಾ ಗಾಂಧಿಯವರನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು.

ಇದೀಗ ಆ ಆಸೆಗೆ ಇಂದು ಕಾಲ ಕೂಡಿ ಬಂದಿದೆ. ರಾಹುಲ್ ಗಾಂಧಿ ಟೆಂಪೋ ಕಳುಹಿಸಿ, ಆ ರೈತ ಮಹಿಲಕೆಯರನ್ನು ಕರೆತರಿಸಿದ್ದಾರೆ. ಸೋನಿಯಾ ಗಾಂಧಿ ನಿವಾಸಕ್ಕೆ‌ಬರುವುದಕ್ಕೂ ಮುನ್ನ ದೆಹಲಿಯಲ್ಲೆಲ್ಲಾ ಸುತ್ತಾಡಿ ಬಂದಿದ್ದಾರೆ. ಸೋನಿಯಾ ಗಾಂಧಿಗಾಗಿ ಪ್ಯೂರ್ ಹಸುವಿನ ತುಪ್ಪ ಸೇರಿದಂತೆ ಹಲವು ಖಾದ್ಯಗಳನ್ನು ತಂದಿದ್ದರು. ಸೋನಿಯಾ ಗಾಂಧಿ, ಪ್ರಿಯಾಂಕರನ್ನು ನೋಡಿದ ಮಹಿಲಕೆಯರು ತುಂಬಾ ಖುಷಿ ಪಟ್ಟಿದ್ದಾರೆ. ಅವರನ್ನು ಮುಟ್ಟಿ ಸಂತಸ ವ್ಯಕ್ತಪಡಿಸಿದ್ದಲ್ಲದೇ, ಹರಸಿದ್ದಾರೆ. ಇನ್ನು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಕೂಡ ಅವರ ಜೊತೆಗೆ ಕೂತು, ಊಟ ಮಾಡಿ, ಡ್ಯಾನ್ಸ್ ಕೂಡ ಆಡಿದ್ದಾರೆ. ಈ ವೇಳೆ ಹಲವು ಸಮಸ್ಯೆಗಳು, ದರ ಏರಿಕೆಯ ಬಗ್ಗೆಯೂ ಚರ್ಚೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *