Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ನಿನ್ನೆ ಬೈಕ್ ನಲ್ಲಿ ಇಂದು BMTC ಬಸ್ ನಲ್ಲಿ ರಾಹುಲ್ ಗಾಂಧಿ ಪ್ರಯಾಣ : ಜನರು ಹೇಳಿದ್ದೇನು ಗೊತ್ತಾ..?

---Advertisement---

ಬೆಂಗಳೂರು: ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ರಾಹುಲ್ ಗಾಂಧಿಯಂತು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಮಾಡಿದ್ದಾಯ್ತು, ಈಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಓಡಾಡುತ್ತಾ ಇದ್ದಾರೆ. ಅದರಲ್ಲೂ ಜನಸಾಮಾನ್ಯರ ನಡುವೆ ಸಾಮಾನ್ಯರಂತೆ ಎಲ್ಲರ ಜೊತೆಗೂಡುತ್ತಿರುವುದು, ಜನಸಾಮಾನ್ಯರಿಗೆ ಸಂತಸ ತಂದಿದೆ.

ಇಂದು ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹತ್ತಿ ಸಂಚಾರ ನಡೆಸಿದ್ದಾರೆ. ಕನ್ನಿಂಗ್ ಹ್ಯಾಮ್ ರೋಡ್ ನಿಂದ BMTC ಬಸ್ ಹತ್ತಿದ ರಾಹುಲ್ ಗಾಂಧಿ, ಸಹ ಪ್ರಯಾಣಿಕರ ಜೊತೆ ಆತ್ಮೀಯವಾಗಿ ಬೆರೆತಿದ್ದಾರೆ. ಶೇಕ್ ಹ್ಯಾಂಡ್ ಮಾಡಿ, ಸಮಸ್ಯೆಗಳನ್ನು ಕೇಳಿದ್ದಾರೆ. ಚರ್ಚೆ ನಡೆಸಿದ್ದಾರೆ. ಅಲ್ಲಿಯೇ ಖಾಲಿ ಇದ್ದ ಲೇಡಿಸ್ ಸೀಟಿನಲ್ಲಿಯೇ ಅನುಮತಿ ಕೇಳಿ ಕುಳಿತುಕೊಂಡಿದ್ದಾರೆ.

ಜೊತೆಗೆ ತಮ್ಮ ಜೊತೆಗೆ ಇದ್ದ ಬಾಡಿ ಗಾರ್ಡ್ ಗಳಿಗೆ ಸೇರಿ, 20 ಟಿಕೆಟ್ ಕೇಳಿ ಪಡೆದಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಫ್ರೀ ಬಸ್ ಪಾಸ್ ನೀಡುತ್ತೇವೆ ಎಂದಿದ್ದಾರೆ. ಹೀಗೆ ಮಾತನಾಡುತ್ತಾ ಮಾತನಾಡುತ್ತ ರಾಹುಲ್ ಗಾಂಧಿ ಸುಮಾರು 6 ಕಿಮೀ ಬಸ್ ನಲ್ಲಿಯೇ ಸಂಚಾರ ಮಾಡಿದ್ದಾರೆ. ಬಳಿಕ ಲಿಂಗರಾಜಪುರ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ. ರಾಹುಲ್ ಗಾಂದಿಯವರನ್ನು ಕಂಡ ಜನ ಸೆಲ್ಫೀ ತೆಗೆದುಕೊಂಡು, ಶೇಕ್ ಹ್ಯಾಂಡ್ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment