ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಹೊರ ಹೋಗಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಏಳು ವರ್ಷ ನಾಯಕತ್ವ ಸ್ಥಾನದಲ್ಲಿದ್ದುಕೊಂಡು ಈಗ ಹೊರ ಹೋಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಬೇಸರವೂ ಮೂಡಿದೆ. ಇದೆಲ್ಲಾ ಬೆಳವಣಿಗೆ ನಡೆದದ್ದು ರಾಹುಲ್ ದ್ರಾವಿಡ್ ಬಂದ ಮೇಲೆ ಎನ್ನಲಾಗುತ್ತಿದೆ.
ರವಿಶಾಸ್ತ್ರಿ ಅವರು ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದ ಬಳಿಕ, ರಾಹುಲ್ ದ್ರಾವಿಡ್ ಕೋಚ್ ಹೆಡ್ ಆಗಿ ಎಂಟ್ರಿ ಕೊಟ್ರು. ಬಳಿಕ ಸಾಕಷ್ಟು ಬದಲಾವಣೆಯೂ ಶುರುವಾಯ್ತು. ದ್ರಾವಿಡ್ ಬರುವ ಮುನ್ನ ಎಲ್ಲ ಆಟಗಾರರು ಕೊಹ್ಲಿ ಅವರ ಹಿಡಿತದಲ್ಲಿದ್ರು. ಆದ್ರೆ ರಾಹುಲ್ ದ್ರಾವಿಡ್ ಎಂಟ್ರಿ ಬಳಿಕ ಡ್ರೆಸ್ಸಿಂಗ್ ರೂಮ್ ವಾತಾವರಣವೂ ಬದಲಾಯಿತು.
ಈ ಹಿಂದೆ ಕೊಹ್ಲಿ ನಾಯಕನಾಗಿದ್ದರೆ ನಾನು ಕೋಚ್ ಹುದ್ದೆ ಸ್ವೀಕರಿಸಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ರು. ಯಾಕಂದ್ರೆ 2017 ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅಂದಿನ ಕೋಚ್ ಅನಿಲ್ ಕುಂಬ್ಳೆ ನಡುವೆ ಸಾಕಷ್ಟು ವೈಮನಸ್ಸು ಏರ್ಪಟ್ಟಿತ್ತು. ಕೊಹ್ಲಿ ನಾಯಕನಾಗಿದ್ದರೆ ನನ್ನ ಮಾತು ಕೇಳಲ್ಲ. ಸಾಮಾನ್ಯ ಆಟಗಾರನಾಗಿದ್ದರೆ ನನ್ನ ಮಾತು ಕೇಳುತ್ತಾನೆ ಎಂಬ ಉದ್ದೇಶ ದ್ರಾವಿಡ್ ಅವರದ್ದಾಗಿತ್ತು ಎನಿಸುತ್ತದೆ.
ಹೀಗಾಗಿ ದ್ರಾವಿಡ್ ಅವರನ್ನ ಹೆಡ್ ಕೋಚ್ ಮಾಡೋದಕ್ಕೆ ಹೊರಟಿದ್ದ ಬಿಸಿಸಿಐ ಅವರೆಲ್ಲಾ ಷರತ್ತುಗಳಿಗೆ ಒಪ್ಪಿತ್ತು. ಅಂದಿನಿಂದ ಕೊಹ್ಲಿ ಅವರ ಆಟಗಳಿಗೆ ಬ್ರೇಕ್ ಬೀಳುತ್ತಾ ಬಂದಿದೆ. ಆದ್ರೀಗ ಸಂಪೂರ್ಣವಾಗಿ ನಾಯಕತ್ವದಿಂದ ಕೊಹ್ಲಿ ಕೆಳಗಿಳಿದಿರುವುದು ಬಿಸಿಸಿಐ ಕಿರುಕುಳದಿಂದಲೇ ಎನ್ನಲಾಗಿದೆ.