Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಮೇದೇಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಆರ್. ನಿರಂಜನ್ ಅವಿರೋಧ ಆಯ್ಕೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಆ. 30 : ತಾಲ್ಲೂಕಿನ ಮೇದೇಹಳ್ಳಿ ಪಂಚಾಯಿತಿಗೆ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಆರ್. ನಿರಂಜನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇದೇಹಳ್ಳಿ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಕಾವ್ಯ ವಿಜಯಕುಮಾರ್ ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಯನ್ನು ನಡೆಸಲಾಯಿತು. ಚಿತ್ರದುರ್ಗದ ಉಪ ವಿಭಾಗಾಧಿಕಾರಿಗಳಾದ ಮೆಹಬೂಬ ಜಿಲಾನಿ ಖುರೇಷಿ ಚುನಾವಣಾ ಅಧಿಕಾರಿಗಳಾಗಿ ಅಗಮಿಸಿದ್ದರು, ನಾಮಪತ್ರ ಸಲ್ಲಿಸುವ ಸಮಯದಲ್ಲಿ ವಿದ್ಯಾನಗರದಿಂದ ಮೇದೇಹಳ್ಳಿ ಪಂಚಾಯಿತಿಗೆ ಆಯ್ಕೆಯಾದ ಆರ್. ನಿರಂಜನ್ ರವರೊಬ್ಬರೆ ನಾಮಪತ್ರವನ್ನು ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವರ ಅಯ್ಕೆಯನ್ನು ಅವಿರೋಧವಾಗಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರಂಜನ್ ನನ್ನ ಅಧ್ಯಕ್ಷ ಅವಧಿ ಕಡಿಮೆ ಇದ್ದರೂ ಸಹಾ ಇರುವ ಸಮಯದಲ್ಲಿಯೇ ಮೇದೇಹಳ್ಳಿ ಪಂಚಾಯಿತಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಲಾಗುವುದು, ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೇದೇಹಳ್ಳಿ ಪಂಚಾಯಿತಿ ಸದಸ್ಯರಾದ ಶ್ರೀಮತಿ ಕಾವ್ಯ ವಿಜಯಕುಮಾರ್,ನಿಂಗಪ್ಪ, ಹೆಚ್.ತಿಮ್ಮಣ್ಣ, ಶ್ರೀಮತಿ ಲಕ್ಷ್ಮೀದೇವಿ ಶ್ರೀನಿವಾಸ್, ದುಗ್ಗಪ್ಪ ಎಸ್. ಶ್ರೀಮತಿ ಸುಶೀಲಮ್ಮ ಮಂಜಣ್ಣ, ಹೆಚ್ ಶ್ರೀನಿವಾಸ್, ಶ್ರೀಮತಿ ಡಿ.ಎಂ.ಶೃತಿ ವಿಜಯಕುಮಾರ್, ಶ್ರೀಮತಿ ಹೆಚ್,ಗೌರಮ್ಮ ಕೆ.ಹನುಮಂತಪ್ಪ, ಎಂ,ಜಿ, ಜಯರಾಮರೆಡ್ಡಿ, ಎಸ್.ಸಿ.ಧನ್ಯಕುಮಾರ್, ಶ್ರೀಮತಿ ಎ.ಸಿ.ಮಮತಾ ಜೆ.ಎಸ್.ಶಿವಪ್ರಕಾಶ್, ಶ್ರೀಮತಿ ಎನ್.ಎಂ, ಪ್ರಿಯಾದರ್ಶಿನಿ ಬಸವರಾಜ್ ಎ, ಶ್ರೀಮತಿ ಆರ್.ಶಶಿಕಲಾ ಮಹೇಶ್, ಆರ್ ನಿರಂಜನ್ ರಮೇಶಮೋತ್ಕೊರ್, ಶ್ರೀಮತಿ ಹೆಚ್.ಸುಲೋಚನ ಎಂ.ಸಿ.ಶಂಕರ್, ಶ್ರೀಮತಿ ವನಜಾಕ್ಷಿ ಎಂ. ಅನಂತರಾಜ್, ಶ್ರೀಮತಿ ಭಾಗ್ಯಮ್ಮ ಮಂಜಪ್ಪ, ಚಂದ್ರಶೇಖರ್ ಟಿ ಹಾಗೂ ಪಂಚಾಯಿತಿಯ ಕಾರ್ಯದರ್ಶಿ ಎನ್.ಓಮೂರ್ತಿ  ಪಂಚಾಯಿತಿ ಅಭೀವೃದ್ದಿ ಅಧಿಕಾರಿ ಆರ್.ಪಾತಣ್ಣ ಹಾಜರಿದ್ದರು.

ಈ ಸಮಯದಲ್ಲಿ ಬಂಡೇ ರುದ್ರಪ್ಪ, ವಿದ್ಯಾ ನಗರದ ನಿವಾಸಿಗಳಾದ ಮಲ್ಲಿಕಾರ್ಜನ್, ವಿಜಯಕುಮಾರ್, ಶಂಕರ್, ವನಜಾಕ್ಷಮ್ಮ, ಮಂಜುನಾಥ್, ಸಿದ್ದೇಶ್, ಆನಂತಕುಮಾರ್, ಎಸ್.ಟಿ.ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು,

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...