ಪಂಜಾಬ್: ಖ್ಯಾತ ಗಾಯಕ, ರ್ಯಾಪ್ ಸಾಂಗ್ ಗಳಿಂದಲೇ ಕೋಟ್ಯಾಂತರ ಅಭಿಮಾನಿ ಬಳಗ ಗಳಿಸಿದ್ದ ಸಿಧು ಮೂಸೆವಾಲಾನನ್ನು ನಿನ್ನೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದು, ಕೆನಡಾ ಮೂಲದ ಲಕ್ಕಿ ಎಂಬಾತ ಈ ಹತ್ಯೆಯ ಹೊಣೆ ಹೊತ್ತಿದ್ದಾನೆ. ಈ ಸಂಬಂಧ ಪಂಜಾಬ್ ಡಿಜಿಪಿ ವಿಕೆ ಭಾವ್ರಾ ಮಾಹಿತಿ ನೀಡಿದ್ದಾರೆ.
ಪಂಜಾಬ್ ನಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 424 ಜನರ ಭದ್ರತೆಯನ್ನು ವಾಪಾಸ್ ತೆಗೆದುಕೊಂಡಿತ್ತು. ಅದರಲ್ಲಿ ಸಿಧು ಕೂಡ. ಅದರೆ ಕಾಕತಾಳೀಯವೆಂಬಂತೆ ಭದ್ರತೆ ವಾಪಾಸ್ ಪಡೆದ 24 ಗಂಟೆಯಲ್ಲಿ ಸಿಧು ಹತ್ಯೆಯಾಗಿದೆ. 20 ಸುತ್ತು ಗುಂಡಿನ ಸುರಿಮಳೆ ಸುರಿಸಿ ಹತ್ಯೆ ಮಾಡಿದ್ದಾರೆ.
ಸಿಧು ಕಾಂಗ್ರೆಸ್ ಪಕ್ಷದಿಂದ ರಾಜಕೀಯದಲ್ಲೂ ಸಕ್ರೀಯವಾಗಿದ್ದವರು. ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೀಪ್ ನಲ್ಲಿ ಸಿಧು ಮತ್ತು ಅವರ ಸ್ನೇಹಿತರು ತೆರಳುತ್ತಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಸಿಧು ಮತ್ತು ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವಾದರೂ ಸಿಧು ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಸ್ನೇಹಿತನಿಗೆ ಚಿಕಿತ್ಸೆ ಮುಂದುವರೆದಿದೆ.