ದಾವಣಗೆರೆ ಮಂದಿಗೆ ಉಚಿತ ಬೋರ್ ವೆಲ್ ಸೇವೆ : ಇದು ಪುನೀತ್ ಮೇಲಿನ‌ ಅಭಿಮಾನಕ್ಕಾಗಿ..!

1 Min Read

 

ದಾವಣಗೆರೆ: ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಬದುಕಿದ್ದಾಗ ಅದೆಷ್ಟು ಸಮಾಜ ಸೇವೆ ಮಾಡಿಬಿಟ್ಟರೋ. ಒಂದು ದಿನವೂ ಅದರ ಪ್ರಚಾರ ತೆಗೆದುಕೊಂಡವರಲ್ಲ. ಮನೆಯವರಿಗೂ ಹೇಳದೆ ಅದೆಷ್ಟೋ ಜನರ ಬದುಕಿಗೆ ನೆರವಾದವರೂ. ಅವರಿಲ್ಲ ಅನ್ನೋದು ಕಹಿಸತ್ಯ. ಅಭಿಮಾನಿಗಳು ಅವರ ಹೆಸರಲ್ಲಿ ಸಾಕಷ್ಟು ಉಚಿತ ಕಾರ್ಯಗಳನ್ನ ಮಾಡ್ತಾ ಇದ್ದಾರೆ. ಇದೀಗ ಇಲ್ಲೊಬ್ಬ ಅಭಿಮಾನಿ ಅವರ ಹೆಸರಲ್ಲಿ ಉಚಿತ ಬೋರ್ವೆಲ್ ವ್ಯವಸ್ಥೆ ಮಾಡಿದ್ದಾರೆ.

ಹೌದು, ಕುಬೇರ ಎಂಬಾತ ದಾವಣಗೆರೆಯಲ್ಲಿ ಬೋರ್ವೆಲ್ ಏಜೆನ್ಸಿ ಇಟ್ಟಿದ್ದಾರೆ. ಕುಬೇರ ಅವರು ಅಪ್ಪುಗೆ ಅಪ್ಪಟ ಅಭಿಮಾನಿ. ಹೀಗಾಗಿ ಅವರ ಅಭಿಮಾನಿಯಾಗಿ ಏನಾದರೂ ಮಾಡಬೇಕೆಂಬ ಹಂಬಲದಿಂದಾಗಿ ಅವರು ಮತ್ತು ಸ್ನೇಹಿತರು ಸೇರಿಕೊಂಡು ಈ ಒಂದು ಯೋಜನೆ ರೂಪಿಸಿದ್ದಾರೆ. ದಾವಣಗೆರೆ ನಗರದ ಜನರಿಗೆ ಈ ಯೋಜನೆಯ ಫಲ ನೀಡಲು ನಿರ್ಧರಿಸಿದ್ದಾರೆ.

ಅಪ್ಪು ಅಗಲಿಕೆಯಿಂದಾಗಿ 101 ಉಚಿತ ಬೋರ್ವೆಲ್ ಕೊರೆಯುವ ಸೇವೆ ಆರಂಭಿಸಿದ್ದಾರೆ. ಅವರ ಏಜೆನ್ಸಿಯಲ್ಲಿ ಬುಕ್ ಮಾಡಿಕೊಂಡರೆ ಅವರಿಗೆ ಈ ಸೇವೆ ಇದಗಿಸಿಕೊಡಲಿದ್ದಾರೆ. ಅಪ್ಪು ಅವರಿಗೆ ಈ ಮೂಲಕ ನಮನ ಸಲ್ಲಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *