ಪುನೀತ್ ಅಭಿಮಾನಿಗಳ ಸಾವಿನ ಸಂಖ್ಯೆ 14ಕ್ಕೇರಿಕೆ..!

suddionenews
1 Min Read

ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವನ್ನ ಯಾರು ಇಂದಿಗೂ ಅರಗಿಸಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಕುಟುಂಬಸ್ಥರು ಇನ್ನು ಅದೇ ದುಃಖದಲ್ಲಿದ್ದಾರೆ. ಅಭಿಮಾನಿಗಳಿಗಂತು ಆ ನೋವನ್ನ ತಡೆಯಲಾಗ್ತಿಲ್ಲ. ಅದು ಎಷ್ಟರಮಟ್ಟಿಗಿದೆ ಅಂದ್ರೆ ಅಪ್ಪು ಇನ್ನಿಲ್ಲ ಅನ್ನೋದು ಕೇಳಿ ಅದೆಷ್ಟೋ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಇದೀಗ ಮತ್ತಿಬ್ಬರು ಅಭಿಮಾನಿಗಳು ಅಪ್ಪು ಇಲ್ಲದ ಸುದ್ದಿ ಅರಗಿಸಿಕೊಳ್ಳಲಾಗದೆ ಜೀವ ಬಿಟ್ಟಿದ್ದಾರೆ.

ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯಲ್ಲಿ ಅಪ್ಪು ಅಭಿಮಾನಿ ಇದ್ದರು. ರವಿಕುಮಾರ್ ಎಂಬಾತ ಪುನೀತ್ ಅಪ್ಪಟ ಅಭಿಮಾನಿಯಾಗಿದ್ದರು. ಅಪ್ಪು ನಿಧನರಾದ ದಿನದಿಂದಲೂ ಊಟ, ತಿಂಡಿ ಬಿಟ್ಟಿದ್ದರು.‌ ಇದರಿಂದಾಗಿ ರವಿಕುಮಾರ್ ಆರೋಗ್ಯ ತೀರಾ ಹದಗೆಟ್ಟಿತ್ತಂತೆ.‌ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನು ಚಾಮರಾಜನಗರದ ಕೊಳ್ಳೆಗಾಲದಲ್ಲಿ 31 ವರ್ಷದ ಶಿವಮೂರ್ತಿ ಎಂಬಾತ ನಿಧನ ಹೊಂದಿದ್ದಾರೆ. ಪುನೀತ್ ರಾಜ್ ಕುಮಾರ್ ಸಾವಿನಿಂದಾಗಿ ಆಘಾತಗೊಳಗಾಗಿದ್ದ ಅಭಿಮಾನಿ ಶಿವಮೂರ್ತಿ, ಊಟ, ತಿಂಡಿ ತ್ಯಜಿಸಿದ್ದರು ಎನ್ನಲಾಗಿದೆ. ಇದೀಗ ಶುವಮೂರ್ತಿ ಕೂಡ ಸಾವನ್ನಪ್ಪಿದ್ದಾರೆ. ಈ ಮೂಲಕ ಅಭಿಮಾನಿಗಳ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *