ನೂಪೂರ್ ಶರ್ಮಾ ವಿವಾದ : ಬಾಂಗ್ಲಾದೇಶದ ಗಮನ ಸೆಳೆಯುವಂಥ ವಿಷಯವೇ ಅಲ್ಲ ಎಂದ ಸಚಿವ ಹಸನ್..!

suddionenews
1 Min Read

ಢಾಕಾ: ನೂಪೂರ್ ಶರ್ಮಾ ನೀಡಿದ್ದ ಪೈಗಂಬರ ಅವರ ಬಗೆಗಿನ ಅವಹೇಳನಕಾರಿ ಹೇಳಿಕೆಯಿಂದ ದೇಶದೆಲ್ಲೆಡೆ ಗಲಭೆ ಸೃಷ್ಟಿಯಾಗಿದೆ. ಮುಸ್ಲಿಂ ಮುಖಂಡರು ಪ್ರತಿಭಟನೆ ಮಾಡುತ್ತಿದ್ದು, ಹಲವು ಕಡೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದೆ. ಈ ವಿಚಾರದಲ್ಲಿ ಬಾಂಗ್ಲಾದೇಶ ಸರ್ಕಾರವು ರಾಜಿ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಸಂಬಂಧ ಸಚಿವ ಹಸನ್ ಪ್ರತಿಕ್ರಿಯೆ ನೀಡಿದ್ದು, ಬಾಂಗ್ಲಾದೇಶವನ್ನು ಸೆಳೆಯುವಂಥ ವಿಚಾರವೇ ಅಲ್ಲ ಎಂದಿದ್ದಾರೆ.

ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದ ವಿವಾದ ಭಾರತದ ಆಂತರಿಕ ವಿಚಾರ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಹಸನ್ ಮಹಮೂದ್ ಹೇಳಿದ್ದಾರೆ.

ಆರೋಪಗಳನ್ನು ಅವರು ತಳ್ಳಿಹಾಕಿದ್ದು, ಅದು ಬಾಂಗ್ಲಾದೇಶದ ಗಮನ ಸೆಳೆಯುವಂಥ ವಿಷಯವೇ ಅಲ್ಲ ಎಂದಿದ್ದಾರೆ.‌ ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಾಯಕರ ವಿರುದ್ಧ ಕ್ರಮ ಕೈಗೊಂಡಿರುವುದಕ್ಕೆ ಬಿಜೆಪಿಯನ್ನು ಅವರು ಅಭಿನಂದಿಸಿದ್ದಾರೆ. ಢಾಕಾದಲ್ಲಿ ಭಾರತೀಯ ಪತ್ರಕರ್ತರ ತಂಡವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಾದಕ್ಕೆ ಸಂಬಂಧಿಸಿ ಭಾರತದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಭಾರತ ಸರ್ಕಾರವು ಇನ್ನಷ್ಟು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *