ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ಯ ಭಾರಿ ಚರ್ಚೆಗೆ ಕಾರಣವಾಗಿರುವ ವಿಚಾರ ಅಂದ್ರೆ ಅದು ಬಿಟ್ ಕಾಯಿನ್ ದಂಧೆ. ಕಾಂಗ್ರೆಸ್ ನಾಯಕರು ಬಿಜೆಪಿಗರ ಮೇಲೆ ಇದೇ ವಿಚಾರಕ್ಕೆ ಹರಿಹಾಯುತ್ತಿದ್ದಾರೆ. ಇದೀಗ ಮತ್ತೆ ಪ್ರಿಯಾಂಕ ಖರ್ಗೆ, ಸಿಎಂ ಬೊಮ್ಮಾಯಿಗೆ ಸವಾಲು ಎಸೆದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಿಎಂ ಬಿಟ್ ಕಾಯಿನ್ ಕೇಸ್ ಅಷ್ಟು ಮುಖ್ಯವಲ್ಲ ಎಂದಿದ್ದಾರೆ. ಹಾಗಾದ್ರೆ ಪ್ರಧಾನಿ ಅಂತ ಹೋಗಿ ಈ ಬಗ್ಗೆ ಚರ್ಚೆ ಯಾಕೆ ಮಾಡಿದ್ರು ಅಂತ ಪ್ರಶ್ನಿಸಿದ್ದಾರೆ.
ಈ ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನವರು ಯಾರೇ ಭಾಗಿಯಾಗಿದ್ರು ಒದ್ದು ಒಳಗೆ ಹಾಕಿ. ಈ ಕೇಸ್ ಡೈವರ್ಟ್ ಮಾಡೋಕೆ ಕಾಂಗ್ರೆಸ್ ನವರು ಇದ್ದಾರೆ ಅಂತ ವಿಚಾರ ತಿರುಚೋದು ಬೇಡ. ಶ್ರೀಕಿ ಕಸ್ಟಡಿಯಲ್ಲಿದ್ದಾಗ ಡ್ರಗ್ಸ್ ಕೊಡಲಾಗಿತ್ತಾ..? 186 ಬಿಟ್ ಕಾಯಿನ್ ಮೊತ್ತ 100 ಕೋಟಿ ಇದೆಲ್ಲೋಯ್ತು..? ಶ್ರೀಕಿ ಹ್ಯಾಕ್ ಮಾಡಿದ 5 ಸಾವಿರ ಕಾಯಿನ್ ಎಲ್ಲೋಯ್ತು..?. ಇ.ಡಿ ಇಂಟರ್ ಪೋಲ್ ಗೆ ಮಾಹಿತಿ ನೀಡೋದಕ್ಕೆ ವಿಳಂಬವೇಕೆ..? 80 ಸಾವಿರ ಯೂರೋ ಟ್ರಾನ್ಸಫರ್ ಮಾಡಿದ್ರು ತನಿಖೆ ಯಾಕಿಲ್ಲ..? ಎಂಬ ಪ್ರಶ್ನೆಗಳನ್ನ ಕೇಳಿದ್ದಾರೆ.