Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ : ಶಾಸಕ ಟಿ. ರಘುಮೂರ್ತಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ,
ಮೊ : 9739875729

ಸುದ್ದಿಒನ್, ಚಳ್ಳಕೆರೆ, ಜೂನ್. 07 : ಇಂದು ಶಿಕ್ಷಣಕ್ಕೆ ಇರುವಂತಹ ಶಕ್ತಿ ಮತ್ತೆ ಯಾವುದಕ್ಕೂ ಇಲ್ಲ. ಆದುದರಿಂದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ 80 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಆಸ್ತಿ, ಹಣ ಮತ್ತು ಇನ್ನಿತರ ಸಂಪತ್ತಿಗೆ ಮಹತ್ವವುಳ್ಳದ್ದು ಶಿಕ್ಷಣ. ಹೀಗಾಗಿ ಚಿಕ್ಕವಯಸ್ಸಿನ ಮಕ್ಕಳನ್ನು ದುಡಿಮೆಗೆ ಹಚ್ಚುವ ಬದಲು ವಂಚಿತ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಈ ಭಾಗದಲ್ಲಿ ಜಿಟಿಟಿಸಿ ಕೇಂದ್ರ ತೆರೆದಿದ್ದರಿಂದ ನೂರಕ್ಕೂ ಹೆಚ್ಚು ಯುವಜನರು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. 80 ಜನ ವಿದ್ಯಾರ್ಥಿಗಳು ಎಂಜಿನಿಯರ್ ಪದವಿ ಪಡೆದುಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ಕಲಿಕಾ ಪರಿಸರ ಮತ್ತು ಗ್ರಾಮದ ಶಾಲೆ ಅಭಿವೃದ್ಧಿ ವಿಚಾರವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಇಲ್ಲಿನ ಯುವಕರಾದ ಜಯಣ್ಣ ಹಾಗೂ ಗ್ರಾಮಸ್ಥರು ಬಂದು ಈ ಶಾಲೆಯ ವಿಚಾರ ಮಾತನಾಡಿದಾಗ ನಾನು ಇಲ್ಲಿ ವಸ್ತುಸ್ಥಿತಿ ನೋಡಿ ಇದು ಒಂದು ಉತ್ತಮವಾದ ಸ್ಥಳವಾಗಿದ್ದು ಇಲ್ಲಿ ಶಿಕ್ಷಣಕ್ಕೆ ಪೂರಕವಾಗುವಂತಹ ಅಭಿವೃದ್ಧಿ ಕಾರ್ಯ ಮಾಡಲು ಮುಂದಾಗಿದ್ದೇನೆ ಯುವಕರು ಸಹ ಹೆಚ್ಚಿನ ಇಲ್ಲಿನ ಶಿಕ್ಷಣಕ್ಕೆ ಒತ್ತು ನೀಡಬೇಕು.ಗಡಿ ಗ್ರಾಮದ ನೂರಾರು ಮಕ್ಕಳ ಶಿಕ್ಷಣದ ಸಲುವಾಗಿ ವಿದ್ಯಾಸಂಸ್ಥೆ ಸ್ಥಾಪಿಸಿರುವ ಸಾಹಿತಿ ಬೆಳಗೆರೆ ಕೃಷ್ಣ ಶಾಸ್ತ್ರಿ, ಪತ್ರಕರ್ತ ರವಿಬೆಳಗೆರೆ ಅವರ ಶೈಕ್ಷಣಿಕ ಸೇವೆಯನ್ನು ಶಾಸಕರು ಸ್ಮರಿಸಿದರು.

ಇದೊಂದು ವಿಶೇಷ ಗ್ರಾಮವಾಗಿದ್ದು ಇಲ್ಲಿ ಉತ್ತಮವಾದ ವಿದ್ಯಾವಂತರು ಇರುವ ಕಾರಣ ಅಭಿವೃದ್ಧಿ ನಡೆಯಲಿ. ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ಮಾಡಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು 28 ಕೋಟಿ ಇದು ಹೆಚ್ಚು ಶಾಲೆ ನಿರ್ಮಾಣಕ್ಕೆ ಕೊಟ್ಟಿದ್ದಾರೆ.
ಶಾಸಕರ ಮಾರ್ಗದರ್ಶನಲ್ಲಿ ಶಿಥಿಲಗೊಂಡ ಶಾಲಾ ಕಟ್ಟಡ ಕೂಡಲೆ ದುರಸ್ಥಿತಿಪಡಿಸಲಾಗುವುದು. ಮತ್ತು ಸತ್ವ ಕಳೆದುಕೊಂಡ ಕೆಲವು ಕಟ್ಟಡ ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಶಾಲಾ ದಾಖಲಾತಿ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಲೆಗೆ ಮಕ್ಕಳನ್ನು ಸೇರಿಸಲು ಎಲ್ಲರೂ ಪ್ರಯತ್ನ ಪಡುತ್ತೇವೆ ಎಂದರು.

ತುಮಕೂರು ಪ್ರಾಧ್ಯಾಪಕ ಡಾ.ಸಂಪತ್‌ಕುಮಾರ್, ಮಾತನಾಡಿ, ಎಂದೆಂದೂ ಈ ಗ್ರಾಮಕ್ಕೆ ಇಷ್ಟು ಶಿಕ್ಷಣಕ್ಕೆ ಒತ್ತು ನೀಡುವಂತಹ ಶಾಸಕರನ್ನ ನಾನು ಕಂಡಿಲ್ಲ ಈಗ ಶಾಸಕರು ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

ಪತ್ರಕರ್ತ ಜಯಣ್ಣ ಬೆಳಗೆರೆ ಮಾತನಾಡಿ. ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಎಂದು ರಾಜಕಾರಣ ಮಾಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರು ಪಕ್ಷದ ಬಗ್ಗೆ ಮಾತನಾಡುತ್ತಾರೆ. ಉಳಿದಂತೆ ಅಭಿವೃದ್ಧಿಗೆ ಹೆಚ್ಚು ಹೊತ್ತು ರಾಜ್ಯದಲ್ಲೆ ಕ್ಷೇತ್ರವನ್ನ ಅಭಿವೃದ್ಧಿ ಪರ್ವ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಂತೆ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು.

ಉಪನ್ಯಾಸಕ ವೆಂಕಟರಮಣ, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಶಿವಲಿಂಗಪ್ಪ, ಶಿಕ್ಷಕ ಜೆ.ರವಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರೂಪ ಕೃಷ್ಣಮೂರ್ತಿ, ಸದಸ್ಯ ರವಿಕುಮಾರ್, ರಂಗಸ್ವಾಮಿ, ನಿಂಗಪ್ಪ, ಮುಖ್ಯಶಿಕ್ಷಕಿ ಸುಜಾತ, ಅನಿತಾ, ಎಂಜಿನಿಯರ್ ಶಿವಪ್ರಕಾಶ್, ತಿಪ್ಪೇಸ್ವಾಮಿ, ರಂಗಸ್ವಾಮಿ.ಶ್ರೀಧರ್,ಮಹಾಲಿಂಗಪ್ಪ,ಪಿಎನ್ ರಂಗಸ್ವಾಮಿ,ಶಿವಣ್ಣ,ಸೋಮುಶೇಖರ್ ಎಸ್. ಸುರೇಶ್, ಗ್ರಾಮದ ಮುಖಂಡ ಕೊಂಡಜ್ಜರ ಚಂದ್ರಪ್ಪ, , ರಂಗಸ್ವಾಮಿ, ಶಿವಣ್ಣ, ಗ್ರಾಮದ ಮುಖಂಡರು ಹಾಗೂ ವಿದ್ಯಾರ್ಥಿಗಳು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...