ಮಗಳ ಮದುವೆಗೆ ಸಿದ್ಧತೆ : ಬಸ್ ದುರಂತದಲ್ಲಿ ನಾಪತ್ತೆ.. ಪೋಷಕರ ಆಕ್ರಂದನ..!

1 Min Read

ಚಿತ್ರದುರ್ಗ: ಇಂದು ನಡೆದ ದುರಂತದಲ್ಲಿ ಹಲವರು ಸಾವನ್ನಪ್ಪಿದ್ದಾರೆ, ಇನ್ನು ಹಲವರು ನಾಪತ್ತೆಯಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ಮಗಳು ಕಾಣದೆ ಪೋಷಕರು ಕಂಗಲಾಗಿರುವ ಘಟನೆಯೂ ನಡೆದಿದೆ. ದುರಂತಕ್ಕೀಡಾದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಚನಚನರಾಯಪಟ್ಟಣದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದಾರೆ.

ಚನ್ನರಾಯಪಟ್ಟಣದ ತಾಲೂಕಿನ ನವ್ಯಾ ಹಾಗೂ ಮಾನಸ ಇಬ್ಬರ ಸುಳಿವು ಸಿಗುತ್ತಿಲ್ಲ. ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟಿಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ದ ಅವರು, ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಪೂರ್ಣಗೊಳಿಸಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಕೆಲಸ ಮಾಡುತ್ತಿದ್ದರು. ಅಪಘಾತದ ಬಳಿಕ ನವ್ಯಾ ಮತ್ತು ಮಾನಸ ಅವರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇದರಿಂದ ಪೋಷಕರು ಆತಂಕಗೊಂಡಿದ್ದು, ಮಕ್ಕಳ ಫೋಟೋ ಹಿಡಿದು ಆಸ್ಪತ್ರೆಯೆಲ್ಲಾ ಓಡಾಡುತ್ತಿದ್ದಾರೆ.

ಮಾನಸ ತಾಯಿ ದ್ರಾಕ್ಷಾಯಿಣಿ ಕೂಡ ಮಗಳ ಫೋಟೋ ಹಿಡಿದು ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಮಗಳು ಸುರಕ್ಷುತವಾಗಿದ್ದರೆ ಸಾಕು ಎನ್ನುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಅವರ ಪೋಷಕರಿಗೆ ವಿಷಯ ತಿಳಿದಿದೆಯಂತೆ. ಮಿಲನಾ ಎಂಬುವವರು ಕರೆ ಮಾಡಿ ಹೇಳಿದಾಗ ವಿಚಾರ ತಿಳಿದಿದೆ. ಮಾನಸ, ಮಿಲನಾ, ನವ್ಯಾ ಮೂರು ಜನ ಬೆಸ್ಟ್ ಫ್ರೆಂಡ್ಸ್ ಅಂತೆ. ಇಂದು ರಜೆ ಇದ್ದ ಕಾರಣಕ್ಕೆ ಸಿಗಂಧೂರಿಗೆ ಹೊರಟಿದ್ದರಂತೆ. ಆದರೆ ಮಾರ್ಗ ಮಧ್ಯದಲ್ಲಿಯೇ ಬಸ್ ದುರಂತ ನಡೆದಿದೆ. ಏಪ್ರಿಲ್ ನಲ್ಲಿ ನವ್ಯಾ ಮದುವೆಗೂ ಎಲ್ಲಾ ಸಿದ್ಧತೆಗಳನ್ನ ನಡೆಸಿಕೊಂಡಿದ್ದರು. ಆದರೆ ವಿಧಿ ಎಲ್ಲವನ್ನು ಬದಲಾಯಿಸಿದೆ. ಬಸ್ ದುರಂತದಲ್ಲಿ ಮಗಳಿಗೆ ಏನು ಆಗಬಾರದು ಎಂದು ತಂದೆ ತಾಯಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಮಗಳು ಮೊದಲು ಪತ್ತೆಯಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Share This Article