Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರತಿಭಾ ಪುರಸ್ಕಾರ : ಮಾದಿಗ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

---Advertisement---

ಚಿತ್ರದುರ್ಗ: ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದ ವತಿಯಿಂದ ಇದೇ ಆಗಸ್ಟ್ 31ರಂದು ಭಾನುವಾರ ಚಿತ್ರದುರ್ಗ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ 2024-25ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಪಡೆದ ಜಿಲ್ಲಾ  ಮಾದಿಗ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ.

ವಿದ್ಯಾರ್ಥಿಗಳು ತಮ್ಮ ಸ್ವ-ವಿವರದೊಂದಿಗೆ  ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್, ಎರಡು ಪಾಸ್‍ಪೋರ್ಟ್ ಸೈಜ್ ಫೋಟೋದೊಂದಿಗೆ ಅರ್ಜಿಯನ್ನು ಚಿತ್ರದುರ್ಗ ನಗರದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಸಲ್ಲಿಸುವಂತೆ ಸೂಚಿಸಿದೆ.

ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ತಾಲ್ಲೂಕಿನ ಬಿ.ಹೆಚ್.ಶಿವಪ್ರಕಾಶ್-9535384938, ಕೆ.ರೇವಣ್ಣ-9844788755, ಹೆಚ್.ದೇವರಾಜ-9663159396, ಹಿರಿಯೂರು ತಾಲ್ಲೂಕಿನ ರಾಮಣ್ಣ-924843504, ಶ್ರೀನಿವಾಸ್-9663433957, ಮೊಳಕಾಲ್ಮುರು ತಾಲ್ಲೂಕಿನ ಮಹಾಲಿಂಗಪ್ಪ-9972997738, ಕೆ.ತಿಪ್ಪೇಸ್ವಾಮಿ-9916574799, ಚಳ್ಳಕೆರೆ ತಾಲ್ಲೂಕಿನ ನಾಗರಾಜ್-7899259382, ಹನುಮಂತಪ್ಪ-9980448871, ಹೊಳಲ್ಕೆರೆ ತಾಲ್ಲೂಕಿನ ಸಿದ್ದಲಿಂಗಮ್ಮ-9980764205, ಹನುಮಂತಪ್ಪ ಹೇಮಂತ್-9945765723, ಹೊಸದುರ್ಗ ತಾಲ್ಲೂಕಿನ ಮೂರ್ತಪ್ಪ-9448272972, ರಾಮಕೃಷ್ಣಪ್ಪ-9008680069 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಾದಿಗ  ನೌಕರರ ಸಾಂಸ್ಕøತಿಕ ಸಂಘದ ಜಿಲ್ಲಾಧ್ಯಕ್ಷ  ಡಿ.ಟಿ.ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment