ಪ್ರಜ್ವಲ್ ಈಗ ಅಪರಾಧಿ : ಸರ್ಕಾರಿ ವಕೀಲರು ಹೇಳಿದ್ದೇನು..?

1 Min Read

ಬೆಂಗಳೂರು: ಕೋರ್ಟ್ 376N, 376k, 354 ಅಡಿಯಲ್ಲಿ ಚಾರ್ಜ್ ಅನ್ನ ಫೈಲ್ ಮಾಡಿತ್ತು. ಈ ಎಲ್ಲಾ ಕೌಂಟ್ ನಲ್ಲೂ ಸಹ ಆರೋಪಿಯನ್ನು ಇವತ್ತು ದೋಷಿ ಅಂತ ಹೇಳಿ ಕೋರ್ಟ್ ಇಂದು ತೀರ್ಪು ನೀಡಿದೆ. ಈ 118 ಸಾಕ್ಷಿಗಳನ್ನ ಚಾರ್ಜ್ ಶೀಟ್ ನಲ್ಲಿ ತೋರಿಸಿದ್ದೆವು. ಸುಮಾರು 180ಕ್ಕೂ ಹೆಚ್ಚು ದಾಖಲೆಗಳನ್ನ ಈ ಪ್ರಕರಣದಲ್ಲಿ ಹಾಜರುಪಡಿಸಲಾಗಿತ್ತು. ಸರ್ಕಾರದ ಪರವಾಗಿ 26 ವಿಟ್ನೆಸ್ ಗಳನ್ನ ಪರೀಕ್ಷಿಸಲಾಗಿತ್ತು. ಈ ಎಲ್ಲಾ ವಿಟ್ನೆಸ್ ಗಳನ್ನ ಪರಿಗಣಿಸಿ, ಕೊಟ್ಟಿರುವ ಸಾಕ್ಷಿಯನ್ನ ಪರಿಗಣಿಸಿ, ಪ್ರಮುಖವಾಗಿ ಈ ಕೇಸ್ ನೀಡಿರುವ ಸಂತ್ರಸ್ತೆಯ ಹೇಳಿಕೆ ಹಾಗೂ ಸಾಕ್ಷಿಯ ಆಧಾರದ ಮೇಲೆ ಹಾಗೇ ಡಿಜಿಟಲ್ ಎವಿಡೆನ್ಸ್ ಆಧಾರದ ಮೇಲೆ ಇಂದು ತೀರ್ಪು ನೀಡಿದೆ.

ಸಾಕ್ಷಿಗಳಿಗೆ ಬೆದರಿಕೆ ಹಾಕುವುದಕ್ಕಿಂತ ಮುಖ್ಯವಾಗಿ ಟ್ರಯಲ್ ಗಳನ್ನು ಡಿಲೇ ಮಾಡುವುದಕ್ಕೆ ಏನೆಲ್ಲಾ ಪ್ರಯತ್ನ ಮಾಡಬಹುದು ಅದೆಲ್ಲವನ್ನು ಆರೋಪಿ ಪ್ರಯತ್ನ ಪಟ್ಟಿದ್ದರು. ಆದರೆ ಅದ್ಯಾವುದರಲ್ಲೂ ಅವರು ಸಫಲವಾಗಿಲ್ಲ. ಹಳೇ ಲಾಯರ್ ಗಳನ್ನ ಬಿಟ್ಟರು, ಹೊಸ ಲಾಯರ್ ಗಳನ್ನು ತಂದರು. ಯಾವುದು ಸಹ ಸಫಲ ಆಯ್ತು. ಇಲ್ಲಿಂದ ಹೈಕೋರ್ಟ್ ಗೂ ಈ ಪ್ರಕರಣವನ್ನು ತೆಗೆದುಕೊಂಡು ಹೋಗಿದ್ದರು.

ನಾವೂ ಆ ಸಂತ್ರಸ್ತೆಗೆ ನ್ಯಾಯ ಕೊಡಿಸಿದ್ದೇವೆ ಎಂಬುದು ನಮಗೆ ತೃಪ್ತಿ ತಂದಿದೆ. ಇದು ಹಲವರಿಗೆ ಒಳ್ಳೆಯ ಪಾಠ ಅಂತ ಹೇಳಬಹುದು. ಅತ್ಯಾಚಾರ ಪ್ರಕರಣಗಳನ್ನ ಎರಡು ತಿಂಗಳಲ್ಲಿ‌ಮುಗಿಸಬೇಕು ಅನ್ನೋದು ನಿಯಮವಿದೆ. ಈಗ ಇದು ಮುಗ್ದಿದೆ ಎಂದಿದ್ದಾರೆ. ಆದರೆ ಶಿಕ್ಷೆಯ ಪ್ರಮಾಣದ ಮಾಹಿತಿ ನೀಡದೆ ಇದ್ದರು, ನಾಳೆ ಕೋರ್ಟ್ ನಲ್ಲಿ ತೀರ್ಪು ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *