Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಮನೆ ಮೇಲೆ ಸೋಲಾರ್ ಅಳವಡಿಕೆಗೆ ಭರ್ಜರಿ ಸಬ್ಸಿಡಿ!

---Advertisement---

ಸುದ್ದಿಒನ್,ಬೆಂಗಳೂರು,ಮೇ.16: ದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕರ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ (PM Surya Ghar Muft Bijli Yojana) ಯನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲೂ ಈ ಯೋಜನೆಗೆ ಸಾರ್ವಜನಿಕರಿಂದ ಭರಪೂರ ಬೆಂಬಲ ಸಿಗುತ್ತಿದ್ದು, ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ಇದರ ಯಶಸ್ವಿ ಅನುಷ್ಠಾನಕ್ಕೆ ಕೈಜೋಡಿಸಿವೆ.

ಈ ಯೋಜನೆಯು “ವಿದ್ಯುತ್ ಉತ್ಪಾದಿಸಿ, ಹಣ ಉಳಿಸಿ, ಆದಾಯ ಗಳಿಸಿ” ಎಂಬ ಆಕರ್ಷಕ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.ಮನೆಗಳ ಮೇಲೆ ಅಳವಡಿಸಲಾಗುವ ಸೋಲಾರ್ ಘಟಕಗಳು 25 ವರ್ಷಗಳ ಸುದೀರ್ಘ ಬಾಳಿಕೆ ಅವಧಿಯನ್ನು ಹೊಂದಿರುತ್ತವೆ. ಪ್ರತಿ ತಿಂಗಳ ಗೃಹ ವಿದ್ಯುತ್ ಬಿಲ್‌ನಲ್ಲಿ ಸಾರ್ವಜನಿಕರಿಗೆ ಗಣನೀಯ ಪ್ರಮಾಣದ ಉಳಿತಾಯವಾಗಲಿದೆ.

ಮನೆಯ ಬಳಕೆಯ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ಆಯಾ ಭಾಗದ ಎಸ್ಕಾಮ್‌ಗಳಿಗೆ (ಉದಾಹರಣೆಗೆ: ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಇತ್ಯಾದಿ) ಮಾರಾಟ ಮಾಡುವ ಮೂಲಕ ಸಾರ್ವಜನಿಕರು ನಿಯಮಿತವಾಗಿ ಹೆಚ್ಚುವರಿ ಆದಾಯವನ್ನು ಗಳಿಸಬಹುದಾಗಿದೆ.

ಗ್ರಾಹಕರಿಗೆ ಸಿಗುವ ಭರ್ಜರಿ ಸಬ್ಸಿಡಿ ವಿವರಗಳು:

ಯೋಜನೆಯಡಿ ಗೃಹ ಬಳಕೆ ಮತ್ತು ವಸತಿ ಸಮುಚ್ಚಯಗಳಿಗೆ ಪ್ರತ್ಯೇಕ ಹಾಗೂ ಅತ್ಯುತ್ತಮ ಸಬ್ಸಿಡಿ ದರಗಳನ್ನು ನಿಗದಿಪಡಿಸಲಾಗಿದೆ. ಪ್ರತ್ಯೇಕ ಮನೆಗಳ ಗೃಹ ಬಳಕೆ ಗ್ರಾಹಕರಿಗೆ ಒಂದು ಕಿಲೋ ವ್ಯಾಟ್ (1 kW) ಸಾಮರ್ಥ್ಯದ ಸೋಲಾರ್ ಘಟಕಕ್ಕೆ 30,000 ರೂಪಾಯಿಗಳ ಸಬ್ಸಿಡಿ ಸಿಗಲಿದೆ. ಅದೇ ರೀತಿ, ಎರಡು ಕಿಲೋ ವ್ಯಾಟ್ (2 kW) ಸಾಮರ್ಥ್ಯದ ಘಟಕಕ್ಕೆ 60,000 ರೂಪಾಯಿಗಳು ಹಾಗೂ ಮೂರು ಕಿಲೋ ವ್ಯಾಟ್ (3 kW) ಸಾಮರ್ಥ್ಯದ ಸೋಲಾರ್ ಘಟಕವನ್ನು ಅಳವಡಿಸಿಕೊಂಡರೆ 78,000 ರೂಪಾಯಿಗಳ ಭರ್ಜರಿ ಸಬ್ಸಿಡಿ ಮೊತ್ತ ನೇರವಾಗಿ ಗ್ರಾಹಕರಿಗೆ ಲಭ್ಯವಾಗುತ್ತದೆ.

ಇನ್ನು ದೊಡ್ಡ ವಸತಿ ಸಂಕೀರ್ಣ ಅಥವಾ ಅಪಾರ್ಟ್‌ಮೆಂಟ್‌ಗಳ ಸಾಮಾನ್ಯ ಪ್ರದೇಶದ (ಕಾಮನ್ ಏರಿಯಾ) ಬಳಕೆಗಾಗಿ ಸೋಲಾರ್ ಘಟಕಗಳನ್ನು ಅಳವಡಿಸಲು 500 ಕಿಲೋ ವ್ಯಾಟ್ ಸಾಮರ್ಥ್ಯದವರೆಗೆ ಪ್ರತಿ ಕಿಲೋ ವ್ಯಾಟ್‌ಗೆ 18,000 ರೂಪಾಯಿಗಳಂತೆ ಕೇಂದ್ರ ಸರ್ಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ:
ಮನೆಗಳ ಮೇಲೆ ಸೋಲಾರ್ ಘಟಕ ಅಳವಡಿಸಲು ಆರ್ಥಿಕ ನೆರವು ಬೇಕಾದಲ್ಲಿ ಗ್ರಾಹಕರು ಚಿಂತಿಸಬೇಕಾಗಿಲ್ಲ. ಬ್ಯಾಂಕ್‌ಗಳ ಮೂಲಕ ಅತ್ಯಂತ ಕಡಿಮೆ ಅಂದರೆ ಕನಿಷ್ಠ ಶೇಕಡಾ 6.5 ರಿಂದ ಶೇಕಡಾ 7.5 ರಷ್ಟು ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ನಾಗರಿಕರು ಅಧಿಕೃತ ವೆಬ್‌ಸೈಟ್ ಆದ https://www.pmsuryaghar.gov.in/ ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿ ಅಥವಾ ತಾಂತ್ರಿಕ ನೆರವಿಗಾಗಿ ಸಾರ್ವಜನಿಕರು ತಮ್ಮ ಹತ್ತಿರದ ಎಸ್ಕಾಮ್ (Escom) ಕಚೇರಿಗೆ ಭೇಟಿ ನೀಡಬಹುದು ಅಥವಾ ಕೆಳಗಿನ ಸಂಪರ್ಕ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ:

ಸೋಲಾರ್ ಸಹಾಯವಾಣಿ ಸಂಖ್ಯೆ: 080-22340816 / 080-22340817

Join WhatsApp

Join Now

Join Telegram

Join Now