Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯುತ್ ವ್ಯತ್ಯಯ : ಕರೆಂಟ್ ಗಾಗಿ‌ ಕನವರಿಸಿದ ಕೋಟೆ ನಾಡಿನ ಜನರು : ಕಾರಣ ಏನು ಗೊತ್ತಾ ?

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಆ.31 : ಕರೆಂಟ್…ಕರೆಂಟ್…ಕರೆಂಟ್ ಯಾರ ಬಾಯಲ್ಲಿ ಕೇಳಿದರೂ ಕರೆಂಟ್ ನದ್ದೇ ಸುದ್ದಿ. ಕರೆಂಟ್ ಯಾವಾಗ ಬರುತ್ತೆ, ನಿಮಗೆ ಗೊತ್ತಾ ? ಕೆಇಬಿಯವರು ಫೋನ್ ತೆಗೀತಿಲ್ಲ, ಅಂತ ಇಂದು (ಗುರುವಾರ) ಸಂಜೆ ಬಹುತೇಕ ಎಲ್ಲರ ಬಾಯಲ್ಲೂ ಇದೇ ಮಾತು. ಯಾಕೆಂದರೆ ಇಂದು ಮಧ್ಯಾನ್ಹದಿಂದ ಸಂಜೆ ವರೆಗೂ ನಗರ ಪ್ರದೇಶ ಅಷ್ಟೇ ಅಲ್ಲದೇ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಜನರು ಸಾಕಷ್ಟು ಪರದಾಡುವಂತಾಯಿತು.

ಸಾಮಾನ್ಯವಾಗಿ ವಿದ್ಯುತ್ ಸರಬರಾಜಿನಲ್ಲಿ  ವ್ಯತ್ಯಯ ಇದ್ದರೆ ಬೆಸ್ಕಾಂನವರು ಒಂದು ಅಥವಾ ಎರಡು ದಿನಗಳ ಮುಂಚಿತವಾಗಿ ಪ್ರಕಟಣೆಯಲ್ಲಿ ತಿಳಿಸುತ್ತಾರೆ. ಆದರೆ ಇಂದು ಮಾತ್ರ ಹಾಗಾಗಲಿಲ್ಲ. ಇದ್ದಕ್ಕಿದ್ದಂತೆ ಕರೆಂಟ್ ಹೋಗಿ ಸತತ ಆರು ಗಂಟೆಗಳ ಕಾಲ ಕರೆಂಟ್ ಇಲ್ಲದಂತಾಗಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು.

ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯದ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರು, ವಿದ್ಯಾರ್ಥಿಗಳು, ಗೃಹಿಣಿಯರು,  ಸಣ್ಣ ಉದ್ಯಮಿಗಳು, ಹೋಟೆಲ್‌, ದಿನಿಸಿ ಅಂಗಡಿ ಮೊದಲಾದ ಸ್ಥಳಗಳಲ್ಲಿ  ವ್ಯಾಪಾರ ವಹಿವಾಟು ನಡೆಸುವವರು ಹೀಗೆ ಬಹುತೇಕ ಎಲ್ಲಾ ವರ್ಗದ ಎಲ್ಲಾ ವಯೋಮಾನದವರಿಗೂ ಕರೆಂಟ್ ಬಿಸಿ ತಟ್ಟಿತ್ತು.

ಮಳೆ, ಗಾಳಿ ಅಭಾವದಿಂದ ಶೇ. 50 ರಷ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. LDC (Load Dispatch Center) ನಲ್ಲಿ ವಿದ್ಯುತ್ ಸಮತೋಲನೆ ಮಾಡಲು ಕೆಲವು ಸಂದರ್ಭಗಳಲ್ಲಿ ಈ ರೀತಿಯಾಗಿ ಯಾವುದೇ ಮುನ್ಸೂಚನೆ ಇಲ್ಲದೇ ವಿದ್ಯುತ್ ವ್ಯತ್ಯಯ ಮಾಡಲಾಗುತ್ತದೆ ಎಂದು ಬೆಸ್ಕಾಂ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ವಿದ್ಯುತ್‌ ವ್ಯತ್ಯಯಕ್ಕೆ ವಿಷಾದಿಸಿರುವ ಬೆಸ್ಕಾಂ ಇಲಾಖೆ ಸಹಕರಿಸುವಂತೆ ಮನವಿ ಮಾಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

error: Content is protected !!