Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿಯಲ್ಲೂ ಗಾಳಿಯ ಗುಣಮಟ್ಟ ಕಳಪೆಯ ವರದಿ..!

---Advertisement---

ಬಳ್ಳಾರಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕುಸಿದಿದೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗೇ ಬೆಂಗಳೂರಿನ ಗಾಳಿಯ ಗುಣಮಟ್ಟವೂ ಆಗಾಗ ಕಳಪೆ ವರದಿ ಆಗಾಗ ಸ್ವಲ್ಪ ಸರಿಯಾಗುತ್ತಿದೆ. ಆದರೆ ಗಾಳಿಯ ಮಟ್ಟ ಕಳಪೆಯಾಗುತ್ತಿದ್ದರೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ. ಇದೀಗ ಬೆಂಗಳೂರಿನ ಗಾಳಿಗಿಂತ ಬಳ್ಳಾರಿಯ ಗಾಳಿಯ ಗುಣಮಟ್ಟ ಇನ್ನು ಕಳಪೆಯಾಗಿದೆ ಎಂದು ವರದಿಯಾಗಿದೆ.

ಬಳ್ಳಾರಿಯಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ ಸರಿಸುಮಾರು 138ರಿಂದ 218ರವರೆಗೂ ಇರುತ್ತದೆ ಎಂದು ಹೇಳಲಾಗಿದೆ. ಇದು ಮಧ್ಯಾಹ್ನದ ವೇಳೆಗೆ ಬದಲಾಗಲುಬಹುದು. ಸಂಜೆಗೆ ಮತ್ತೆ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಇದರಿಂದ ಸಾಮಾನ್ಯವಾಗಿ ಮಕ್ಕಳು ಮತ್ತು ವಯೋ ವೃದ್ಧರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತರ ಇದೆ. ಹೀಗಾಗಿಯೇ ಮನೆಯಲ್ಲಿ ಬೇಕಾದಂತ ಆರೋಗ್ಯ ಮುಂಜಾಗ್ರತ ಕ್ರಮಗಳನ್ನ ಅನುಸರಿಸುವಂತೆ ತಜ್ಞರು ಸಲಹೆಗಳನ್ನ ನೀಡಿದ್ದಾರೆ.

ಪ್ರಾರತಮಿಕ ಮಾಲಿನ್ಯಕಾರಕಗಳು ಪರ್ಟಿಕ್ಯುಲೇಟ್ ಮ್ಯಾಟರ್ ಇದೆ. ಇನ್ನು ರಾಜ್ಯಗಳು WHO ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಿದೆ. ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಕಾರಣ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಉಂಟಾಗುತ್ತವೆ. ಇದರಿಂದ ಅಪಾಯವೂ ಜಾಸ್ತಿಯೇ. ಮಕ್ಕಳು, ವೃದ್ಧರು ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗಿರುತ್ತದೆ. ತಮ್ಮ ತಮ್ಮ ಆರೋಗ್ಯ ರಕ್ಷಣೆಯ ಕಡೆಗೆ ಗಮನಹರಿಸಬೇಕಾಗುತ್ತದೆ. ಹೊರಗೆ ಹೋಗುವಾಗ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿ. ಇದರಿಂದ ಶ್ವಾಸಕೋಶದ ಮೇಲೆ ಆಗುವ ಪರಿಣಾಮ ಸ್ವಲ್ಪ ಕಡಿಮೆಯಾಗಬಹುದು. ಹಾಗೇ ಉಸಿರಾಟಕ್ಕೆ ಸಂಬಂಧಿಸಿದಂತ ವ್ಯಾಯಾಮ ಮಾಡಿದರೆ ಇನ್ನು ಉತ್ತಮವಾಗಿರುತ್ತದೆ. ಈಗಾಗಲೇ ಉಸಿರಾಟದ ಸಮಸ್ಯೆ ಇರುವವರು ಸ್ವಲ್ಪ ಎಚ್ಚರಿಕೆಯನ್ನು ವಹಿಸಲೇಬೇಕಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...