Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜಕೀಯ ಮುಗಿತು.. ಇನ್ನೇನಿದ್ರು ಅಭಿವೃದ್ಧಿ : ಸಮರ್ಥ್ ಶಾಮನೂರು

---Advertisement---

ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಗೆಲುವು ಸಾಧಿಸಿ, ತಾತನ ಕ್ಷೇತ್ರವನ್ನು ತನ್ನದಾಗಿಸಿಕೊಂಡ ಸಮರ್ಥ್ ಶಾಮನೂರು ಮೊದಲ ಬಾರಿಗೆ ಗೆಲುವು, ಅಭಿವೃದ್ಧಿ, ಮದುವೆ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. ಮುಖ್ಯವಾಗಿ ಇವತ್ತು ಬಂದಿರೋದು ದಾವಣಗೆರೆ ಜಿಲ್ಲೆಯ ಮತದಾರರಿಗೆ ಧನ್ಯವಾದ ತಿಳಿಸೋದಕ್ಕೆ ಎಂದು ಮಾತನ್ನಾಡಿದ್ದಾರೆ.

ಎಲೆಕ್ಷನ್ ಕೌಂಟಿಂಗ್ ಸಮಯದಲ್ಲೂ ತಮ್ಮ ಪಕ್ಷ ಪಕ್ಷ ಅನ್ನೋದು ಇರುತ್ತೆ. ಒಬ್ಬರು ಗೆದ್ದ ಮೇಲೆ ಅದೊಂದು ಧರ್ಮ ಎಲ್ಲರು ಒಗ್ಗಟ್ಟಿನಿಂದಾನೇ ಮುಂದೆ ಹೋಗಬೇಕು, ಅಭಿವೃದ್ಧಿ ಕೆಲಸಗಳನ್ನು ಮಾಡುವುದು. ಅದಕ್ಕೆ ದಾವಣಗೆರೆ ಜನರು, ನಮ್ಮ ದುಗ್ಗಮ್ಮ ದೇವಿ, ಶಾಮನೂರು ಶಿವಶಂಕರಪ್ಪ ತಾತಾರಿಂದ ನಾವೂ ಗೆದ್ದಿದ್ದೀವಿ. ಕೆಲಸಗಳಿಂದ ಮುಂದುವರೆಯೋದು ನಮ್ಮ ಜವಬ್ದಾರಿ. ನಮ್ಮ ವಿರುದ್ಧ ನಿಂತವರಿಗೂ ಹೇಳುತ್ತೀನಿ, ಅದೇನಾದ್ರೂ ಬೇಡಿಕೆ ಇರಲಿ ನಮ್ಮ ಬಳಿ ಬನ್ನಿ. ನಮ್ಮ ಮನೆ ಬಾಗಿಲು, ಆಫೀಸ್ ಬಾಗಿಲು, ನಮ್ಮ ಮನಸ್ಸಿನ ಬಾಗಿಲು ಸದಾ ತೆರೆದಿರುತ್ತದೆ. ಜನಗಳ ಜೊತೆಗೆ ನನ್ನದು ಸ್ನೇಹ ಸಂಬಂಧ. ಅವರ ಜೊತೆಗೂ ಅದೇ ಸ್ನೇಹದ ಸಂಬಂಧವನ್ನು ಗಳಿಸುವ ಆಸೆ ಎಂದಿದ್ದಾರೆ.

ಮೊಮ್ಮಕ್ಕಳಿಗೆ ಅಜ್ಜ ಅಜ್ಜಿ ಗುಣ ಬರುತ್ತೆ ಅಂತಾರೆ. ನಾನು ಹಾಗೇ. ವಾರದ 24 ಗಂಟೆಯೂ ನಾವೂ ಸಿಕ್ಕಿಯೇ ಸಿಕ್ತೀವಿ. ಅಭಿವೃದ್ದಿಗೆ ಜನಸಂಪರ್ಕ ಬಹಳ ಮುಖ್ಯ. ಎಸ್ ಎಸ್ ಮಲ್ಲಿಕಾರ್ಜುನ ಸಾಹೇಬ್ರು ಮಹಿಳಾ ಕಾಲೇಜಿನ ಬಗ್ಗೆ ಹೇಳಿದ್ರು. ಅದು ಜಾರಿಯಾಗುತ್ತೆ ಎಂದಿದ್ದಾರೆ. ಹಾಗೇ ಆಸ್ಪತ್ರೆ ಕೂಡ ಒಂದು ತಿಂಗಳಲ್ಲಿ ಅದರ ಪ್ರೋಗ್ರೆಸ್ ಬಗ್ಗೆ ತಿಳಿಸುತ್ತೇನೆ. ಹೌಸಿಂಗ್ ಅಭಿವೃದ್ಧಿ ಹೆಚ್ಚು ಒತ್ತು ಕೊಡುತ್ತೇವೆ. ಹಕ್ಕುಪತ್ರದ ಸಮಸ್ಯೆ ಕೂಡ ಇದೆ. ಅದೆಲ್ಲವನ್ನು ಗಮನಿಸಿ ಬಗೆಹರಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಮದುವೆ ಬಗ್ಗೆ ಮಾತನ್ನಾಡುತ್ತಾ, ಯಾರಾದ್ರೂ ನೀವೇ ಹುಡುಗಿ ಹುಡುಕಿ ಆಗೋಣಾ. ‌ನಿಮ್ಮ ವಾಹಿನಿಯಲ್ಲಿಯೇ ಜಾಹೀರಾತನ್ನ ಕೊಡೋಣಾ. ಹಾಗೆಲ್ಲಾ ಏನಿಲ್ಲ. ಈ ಎರಡು ವರ್ಷಕ್ಕೆ ದಾವಣಗೆರೆ ದಕ್ಷಿಣಕ್ಕೆ ಮದುವೆ ಮಾಡ್ಸಿಟ್ಟವ್ರೆ ನನ್ನ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...