Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಕೇಸಲ್ಲಿ ಪೊಲೀಸರ ಯಡವಟ್ಟು : ಪರಮೇಶ್ವರ್ ಹೇಳಿದ್ದೇನು..?

ಸಚಿವ ಪರಮೇಶ್ವರ್
---Advertisement---

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪೊಲೀಸರು ತನಿಖೆಯ ವರದಿಯನ್ನ ಸಲ್ಲಿಸುವಾಗಲೇ ಯಡವಟ್ಟು ಮಾಡಿದ್ದಾರೆಂದು ವಕೀಲರೊಬ್ಬರು ಕೋರ್ಟ್ ನಲ್ಲಿ ಅರ್ಜಿಯನ್ನು ಹಾಕಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾಡುವುದನ್ನ ಅವರು ಮಾಡಲಿ, ನಾವೂ ಮಾಡೋದನ್ನ ಮಾಡ್ತೇವೆ. ಅವರು ಏನು ಆಪಾದನೆಗಳನ್ನ ಮಾಡ್ತಾರೆ ಅದಕ್ಕೆ ಡಿಪಾರ್ಟ್ಮೆಂಟ್ ನವರೇ ಸರಿಯಾದ ಉತ್ತರ ಕೊಡಬೇಕು, ಕೊಡ್ತಾರೆ ಎಂದಿದ್ದಾರೆ.

ಇದೆ ವೇಳೆ ಶಿವಮೊಗ್ಗದ ವಿದ್ಯಾರ್ಥಿ ಕೊಲೆ ಬಗ್ಗೆಯೂ ಮಾತನ್ನಾಡಿ, ಅವರು 16,17,18 ವರ್ಷದ ಹುಡುಗರು ಹೊಡೆದಾಡಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಆಯುಧಗಳನ್ನ ಉಪಯೋಗಿಸಿಲ್ಲ ಎಂಬುದನ್ನ ವರದಿಯಲ್ಲಿ ತಿಳಿಸಿದ್ದಾರೆ. ಹೊಡೆದಾಡಿಕೊಂಡಾಗ ಹುಡುಗ ಸತ್ತಿದ್ದಾನೆ. ಅದನ್ನ ಯಾವ ರೀತಿ ಕಂಟ್ರೋಲ್ ಮಾಡಬೇಕು, ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬೆಲ್ಲಾ ಸೂಚನೆಯನ್ನ ಕೊಟ್ಟಿದ್ದೇವೆ ಎಂದಿದ್ದಾರೆ.

ಮಾರ್ಚ್ 11ಕ್ಕೆ ಆರೋಗ್ಯ ಇಲಾಖೆ, ವೈದ್ಯರಿಂದ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಹೊಸದಾಗಿ ನಮ್ಮ ಸರ್ಕಾರ ಬಂದ ಮೇಲೆ ಮಾತ್ರ ಈ ಥರ ಆಗ್ತಾ ಇದೆ ಅನ್ನೋದಾದ್ರೆ ನಾನು ಒಪ್ಪಿಕೊಳ್ಳುತ್ತೇನೆ. ಹೌದಪ್ಪ ನಮ್ಮಲ್ಲೇನೋ ತಪ್ಪಿದೆ ಅಂತ. ಯಾವ ಸರ್ಕಾರದಲ್ಲಿ ಈ ನೌಕರರು ಪ್ರತಿಭಟನೆ ನಡೆಸಿಲ್ಲ ಹೇಳಿ. ಈ ಸರ್ಕಾರಿ ಸಂಘದ ನೌಕರರೇ ಅನೇಕ ಸಂದರ್ಭದಲ್ಲಿ ನಮಗೆ ಆಯೋಗದ ಸಂಬಳ ಕೊಡಿ, ಆಯೋಗ ರಚನೆ ಮಾಡಿ ಹೀಗೆ ಅನೇಕ ಬೇಡಿಕೆಗಳನ್ನ ಇಟ್ಟುಕೊಂಡು ಪ್ರತಿಭಟನೆ ಮಾಡಿಲ್ವಾ..? ಅದೇ ರೀತಿ ಆರೋಗ್ಯ ಇಲಾಖೆಯ ಸಮಸ್ಯೆ ಇರುತ್ತೆ. ಶಿಕ್ಷಣ ಇಲಾಖೆ ಅವರಿಗೆ ಅವರದ್ದೇ ಆದ ಸಮಸ್ಯೆ ಇರುತ್ತೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now